Today Gold Price: ಅಬ್ಬಬ್ಬಾ ಚಿನ್ನದ ಬೆಲೆ ಇಷ್ಟೊಂದಾ? ರೂ.2000 ನೋಟ್ ಬ್ಯಾನ್ ಆಗ್ತಿದ್ದಂತೆ ಎಷ್ಟಾಗಿದೆ ಗೊತ್ತಾ ಬಂಗಾರದ ದರ!
Today Gold Price 22-05-2023: 2000 ರೂಪಾಯಿ ನೋಟುಗಳನ್ನು ಬ್ಯಾಂಕ್ ನಿಂದ 30 ಸೆಪ್ಟೆಂಬರ್ 2023 ರ ಒಳಗೆ ಬದಲಾಯಿಸಬಹುದು. ಆದರೆ ಈ ಮಧ್ಯೆ ಕೆಲವು ಬ್ಯಾಂಕ್ ಶಾಖೆಗಳು 2000 ರೂಪಾಯಿ ನೋಟುಗಳನ್ನು ಸ್ವೀಕರಿಸಲು ನಿರಾಕರಿಸಿವೆ ಎಂದು ಹೇಳಲಾಗುತ್ತಿದೆ.
Today Gold Price 22-05-2023: ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟನ್ನು ಹಿಂಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿರ್ಧರಿಸಿದ ನಂತರ, ಆಭರಣ ವ್ಯಾಪಾರಿಗಳು ಚಿನ್ನ ಮತ್ತು ಬೆಳ್ಳಿ ಖರೀದಿಗೆ ಸಂಬಂಧಿಸಿದ ದರವನ್ನು ಹೆಚ್ಚಳ ಮಾಡಿದ್ದಾರೆ. ಚೀನಾದ ನಂತರ, ಭಾರತದಲ್ಲಿ ಚಿನ್ನದ ಬಳಕೆ ವಿಶ್ವದಲ್ಲೇ ಅತಿ ಹೆಚ್ಚು. ದೇಶದಲ್ಲೂ ಚಿನ್ನದ ಮಾರಾಟ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.
ಇದನ್ನೂ ಓದಿ: Gold Outlook: ಚಿನ್ನ ಮಾರುಕಟ್ಟೆಯಲ್ಲಿ ಭೂಕಂಪಕ್ಕೆ ಕಾರಣವಾಗಲಿದೆಯಾ ಆರ್ಬಿಐ ನಿರ್ಧಾರ? ತಜ್ಞರ ಅಭಿಮತ ಏನು?
2000 ರೂಪಾಯಿ ನೋಟುಗಳನ್ನು ಬ್ಯಾಂಕ್ ನಿಂದ 30 ಸೆಪ್ಟೆಂಬರ್ 2023 ರ ಒಳಗೆ ಬದಲಾಯಿಸಬಹುದು. ಆದರೆ ಈ ಮಧ್ಯೆ ಕೆಲವು ಬ್ಯಾಂಕ್ ಶಾಖೆಗಳು 2000 ರೂಪಾಯಿ ನೋಟುಗಳನ್ನು ಸ್ವೀಕರಿಸಲು ನಿರಾಕರಿಸಿವೆ ಎಂದು ಹೇಳಲಾಗುತ್ತಿದೆ.
ನೋಟು ಬದಲಾವಣೆ ಪ್ರಕ್ರಿಯೆ ಮೇ 23ರಿಂದ ಆರಂಭ:
ಮೇ 23ರಿಂದ ನೋಟು ಬದಲಾವಣೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ಕೆಲವು ಬ್ಯಾಂಕ್ ಗಳು ಗೇಟ್ ಗೆ ನೋಟಿಸ್ ಗಳನ್ನು ಅಂಟಿಸಿವೆ.
ಇನ್ನು ಬುಲಿಯನ್ ಟ್ರೇಡರ್ಸ್ ಅಸೋಸಿಯೇಷನ್ ನ ಅಂಗವಾದ ಆಲ್ ಇಂಡಿಯಾ ಜೆಮ್ ಆಂಡ್ ಜ್ಯುವೆಲ್ಲರಿ ಡೊಮೆಸ್ಟಿಕ್ ಕೌನ್ಸಿಲ್ ಮಾಹಿತಿ ನೀಡಿದ್ದು, “2016 ರಲ್ಲಿ ನೋಟು ಅಮಾನ್ಯೀಕರಣದ ಸಮಯದಲ್ಲಿ ಕಂಡುಬಂದ ಪರಿಸ್ಥಿತಿ ಭಿನ್ನ. ಈಗ ಚಿನ್ನದ ಖರೀದಿಯ ಸಮಯದಲ್ಲಿ ಭಯಪಡುವ ಅವಶ್ಯಕತೆ ಇಲ್ಲ" ಎಂದು ಹೇಳಿದೆ. ಕಟ್ಟುನಿಟ್ಟಾದ ಕೆವೈಸಿ ನಿಯಮಗಳಿಂದಾಗಿ ಮತ್ತು ರೂ 2,000 ನೋಟುಗಳ ಅಮಾನ್ಯೀಕರಣ ಸಂಬಂಧ ಕಳೆದ ಎರಡು ದಿನಗಳಲ್ಲಿ ಚಿನ್ನದ ಖರೀದಿಯಲ್ಲಿ ಭಾರೀ ಇಳಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಕೌನ್ಸಿಲ್ ಮಾಹಿತಿ ನೀಡಿದೆ.
ಚಿನ್ನದ ದರ 60,200 ರೂ!
ಕೆಲವು ಆಭರಣ ವ್ಯಾಪಾರಿಗಳು ಚಿನ್ನದ ಖರೀದಿಯ ಮೇಲೆ ಶೇಕಡಾ 5-10 ರಷ್ಟು ಪ್ರೀಮಿಯಂ ವಿಧಿಸಲು ಪ್ರಾರಂಭಿಸಿದ್ದಾರೆ, ಈ ಕಾರಣದಿಂದಾಗಿ ಹಳದಿ ಲೋಹದ ಬೆಲೆ 10 ಗ್ರಾಂಗೆ 66,000 ರೂಪಾಯಿಗಳಿಗೆ ತಲುಪಿದೆ ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ, ದೇಶದಲ್ಲಿ ಚಿನ್ನದ ಬೆಲೆ 10 ಗ್ರಾಂ ಗೆ 60,200 ರೂ. ಇದೆ. ಆಲ್ ಇಂಡಿಯಾ ಜೆಮ್ ಆ್ಯಂಡ್ ಜ್ಯುವೆಲ್ಲರಿ ಡೊಮೆಸ್ಟಿಕ್ ಕೌನ್ಸಿಲ್ (ಜಿಜೆಸಿ) ಅಧ್ಯಕ್ಷ ಸಂಯಮ್ ಮೆಹ್ರಾ ಮಾತನಾಡಿದ್ದು, “2000 ರೂಪಾಯಿ ನೋಟುಗಳಿಂದ ಚಿನ್ನ ಅಥವಾ ಬೆಳ್ಳಿ ಖರೀದಿಸುವ ಬಗ್ಗೆ ಸಾಕಷ್ಟು ವಿಚಾರಣೆಗಳು ನಡೆಯುತ್ತಿದ್ದು, ಶನಿವಾರ ಹೆಚ್ಚಿನ ಗ್ರಾಹಕರು ಅಂಗಡಿಗಳಿಗೆ ಆಗಮಿಸಿದ್ದರು. ಆದರೆ ಕಟ್ಟುನಿಟ್ಟಾದ KYC ನಿಯಮಗಳಿಂದಾಗಿ ಖರೀದಿಯು ಕಡಿಮೆಯಾಗಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: Currency Note: ರೂ.500ರ ನೋಟಿನ ಬಗ್ಗೆ ಒಂದು ಮಹತ್ವದ ಅಪ್ಡೇಟ್, ಶ್ರೀಸಾಮಾನ್ಯರಿಗೆ ಗೊತ್ತಿರಲೇಬೇಕಾದ ಮಾಹಿತಿ
RBI ಆದೇಶ ಏನು?
ರಿಸರ್ವ್ ಬ್ಯಾಂಕಿನ ಆದೇಶದ ಪ್ರಕಾರ, “2000 ನೋಟುಗಳನ್ನು 30 ಸೆಪ್ಟೆಂಬರ್ 2023 ರವರೆಗೆ ಬ್ಯಾಂಕ್ ಖಾತೆಯಲ್ಲಿ ಠೇವಣಿ ಮಾಡಬಹುದು ಅಥವಾ ನೀವು ಯಾವುದೇ ಶಾಖೆಗೆ ಹೋಗಿ ಅದನ್ನು ಬದಲಾಯಿಸಬಹುದು” ಎಂದು ಹೇಳಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ