Team India New Yorker King: ಐಪಿಎಲ್ 2023ರಲ್ಲಿ ಒಬ್ಬರಲ್ಲ ಇಬ್ಬರಲ್ಲ ಅನೇಕ ಆಟಗಾರರು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಈ ಮೂಲಕ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡುವ ಶತಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಈ ಮಧ್ಯೆ ಓರ್ವ ಆಟಗಾರ ತನ್ನ ಅಪಾಯಕಾರಿ ಎಸೆತಗಳಿಂದ ಎಲ್ಲರ ಗಮನ ಸೆಳೆಯುತ್ತಿದ್ದಾನೆ.
ಇದನ್ನೂ ಓದಿ: Virat Kohli: ಶತಕ ತಂದ ಸಂತಸ: ಪತ್ನಿಗೆ ವಿಡಿಯೋ ಕಾಲ್ ಮಾಡಿ ಹೀಗೊಂದು ಪ್ರೇಮಸಂದೇಶ ಕಳುಹಿಸಿದ ಕೊಹ್ಲಿ!
ಕೇವಲ 20 ಲಕ್ಷಕ್ಕೆ ಖರೀದಿಸಲ್ಪಟ್ಟ ಈ ಬೌಲರ್ ಪ್ರಸಕ್ತ ಋತುವಿನಲ್ಲಿ ತನ್ನ ತಂಡವನ್ನು ಗೆಲುವಿನ ಸಮೀಪಕ್ಕೆ ತಂದು ನಿಲ್ಲಿಸಿದ್ದಾನೆ. ದೊಡ್ಡ ಬ್ಯಾಟ್ಸ್ ಮನ್ ಗಳು ಕೂಡ ಈ ಬೌಲರ್’ನ ಎಸೆತಗಳನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಹೀಗಿರುವಾಗ ಈ ಬೌಲರ್ ಮುಂಬರುವ ದಿನಗಳಲ್ಲಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವ ಎಲ್ಲಾ ಸಾಧ್ಯತೆಗಳು ಇವೆ.
ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದಲ್ಲಿ ಮುಂಬೈ ಬೌಲರ್ ಆಕಾಶ್ ಮಧ್ವಲ್ ಅದ್ಭುತ ಬೌಲಿಂಗ್ ಮಾಡಿದ್ದಾರೆ. ಅದರಲ್ಲೂ ಹ್ಯಾರಿ ಬ್ರೂಕ್ ಗೆ ಯಾರ್ಕರ್ ಬಾಲ್ ಹಾಕಿದಾಗಿನಿಂದ ಆಕಾಶ್ ಬಗ್ಗೆ ಮೆಚ್ಚುಗೆ ಮಹಾಪೂರವೇ ಹರಿದುಬರುತ್ತಿದೆ.
ಈ ಪಂದ್ಯದಲ್ಲಿ ಮಧ್ವಲ್ 4 ಓವರ್ ಗಳಲ್ಲಿ 37 ರನ್ ನೀಡಿ 4 ವಿಕೆಟ್ ಪಡೆದಿದ್ದಾರೆ. ಇನಿಂಗ್ಸ್ ನ 19ನೇ ಓವರ್ ನಲ್ಲಿ ಬೌಲಿಂಗ್ ಮಾಡುವಾಗ ನಾಲ್ಕನೇ ಎಸೆತದಲ್ಲಿ ಹೆನ್ರಿಕ್ ಕ್ಲಾಸೆನ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಇದರ ನಂತರ, ಮುಂದಿನ ಎಸೆತದಲ್ಲಿ, ಅವರು ನಿಖರವಾದ ಯಾರ್ಕರ್ ಹಾಕುವ ಮೂಲಕ ಹ್ಯಾರಿ ಬ್ರೂಕ್ ಅವರ ವಿಕೆಟ್ ಕಿತ್ತರು. ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
Akash Madhwal - Find of Mumbai Indians in IPL. pic.twitter.com/RaHfwIcYLa
— Johns. (@CricCrazyJohns) May 21, 2023
ಈ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಮಾಡಿದ ಆಕಾಶ್ ಮಧ್ವಲ್ ಸಾಮಾಜಿಕ ಜಾಲತಾಣಗಳಲ್ಲೂ ಪ್ರಶಂಸೆ ಪಡೆಯುತ್ತಿದ್ದಾರೆ. ಕೆಲವರು ಅವರನ್ನು ‘ಭವಿಷ್ಯದ ತಾರೆ’ ಎಂದು ಕರೆಯುತ್ತಿದ್ದರೆ, ಮತ್ತೂ ಕೆಲವರು ಜಸ್ಪ್ರೀತ್ ಬುಮ್ರಾ ಅವರಂತಹ ‘ಡೆಡ್ಲಿ ಯಾರ್ಕರ್ ಕಿಂಗ್’ ಎಂದು ಹೇಳುತ್ತಿದ್ದಾರೆ.
ಈ ಸೀಸನ್ ನಲ್ಲಿ ಆಕಾಶ್ ಮಧ್ವಲ್ ಇಲ್ಲಿಯವರೆಗೆ 6 ಪಂದ್ಯಗಳನ್ನು ಆಡಿದ್ದು, 8 ವಿಕೆಟ್ ಗಳನ್ನು ಪಡೆದಿದ್ದಾರೆ. ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 37 ರನ್ ಗಳಿಗೆ 4 ವಿಕೆಟ್ ಗಳನ್ನು ಕಬಳಿಸಿರುವುದು ಅವರ ಅತ್ಯುತ್ತಮ ಸ್ಪೆಲ್ ಆಗಿದೆ.
ಇದನ್ನೂ ಓದಿ: Tata IPL 2023: ಜಿಯೋ ಸಿನಿಮಾದಿಂದ ಕ್ರಿಕೆಟ್ ಅಭಿಮಾನಿಗಳಿಗೆ ಗುಡ್ ನ್ಯೂಸ್ !
ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಆಕಾಶ್ ಮಧ್ವಲ್ ಅವರು ಗುಜರಾತ್ ಆರಂಭಿಕ ಆಟಗಾರ ಶುಭಮನ್ ಗಿಲ್ ಅವರನ್ನು ಉತ್ತಮ ಎಸೆತದಲ್ಲಿ ಕ್ಲೀನ್ ಬೌಲ್ಡ್ ಮಾಡಿದ್ದರು. ಶುಭಮನ್’ಗೆ ಕೂಡ ಆಕಾಶ್ ಎಸೆದ ಚೆಂಡನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಆ ಪಂದ್ಯದಲ್ಲಿ ಮಧ್ವಲ್ 3 ವಿಕೆಟ್ ಪಡೆದಿದ್ದರು. ಮುಂದಿನ ದಿನಗಳಲ್ಲಿ ಅವರ ಪ್ರದರ್ಶನ ಹೀಗೆಯೇ ಉಳಿದರೆ, ಅವರು ಟೀಮ್ ಇಂಡಿಯಾಕ್ಕೆ ಎಂಟ್ರಿಕೊಡೋದು ಪಕ್ಕಾ, ಜೊತೆಗೆ ಜಸ್ಪ್ರೀತ್ ಬುಮ್ರಾ ಸ್ಥಾನ ತುಂಬುವುದು ಖಚಿತ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ