FASTag KYC Deadline Feb 29 : ವಾಹನಗಳಲ್ಲಿ ಫಾಸ್ಟ್ಯಾಗ್ ಅಳವಡಿಸುವುದು ಕಡ್ಡಾಯ. ಫಾಸ್ಟ್ಯಾಗ್ ಇಲ್ಲದೆ ವಾಹನ ಚಲಾಯಿಸಿದರೆ ದುಪ್ಪಟ್ಟು ತೆರಿಗೆ ಪಾವತಿಸಬೇಕಾಗುತ್ತದೆ. ಎನ್‌ಎಚ್‌ಎಐ ಫಾಸ್ಟ್‌ಟ್ಯಾಗ್‌ಗೆ ಕೆವೈಸಿ ಮಾಡಿಸುವ ಕ್ರಮವನ್ನು ಕಡ್ಡಾಯಗೊಳಿಸಿದೆ. Fastag KYC ಗಡುವು ಇಂದು ಅಂದರೆ ಫೆಬ್ರವರಿ 29ಕ್ಕೆ ಕೊನೆಗೊಳ್ಳುತ್ತಿದೆ. ನಿಮ್ಮ ಫಾಸ್ಟ್ಯಾಗ್‌ನ KYCಯನ್ನು ಇವತ್ತಿನ ಒಳಗೆ ಪೂರೈಸದೇ ಹೋದರೆ ಎರಡು ಪಟ್ಟು ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಮಾರ್ಚ್ 1 ರಿಂದ, KYC ಇಲ್ಲದ ಫಾಸ್ಟ್ಯಾಗ್ ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.   


COMMERCIAL BREAK
SCROLL TO CONTINUE READING

ಫಾಸ್ಟ್ಯಾಗ್ KYCಗೆ ಗಡುವು ಏನು? :  
ಇಂದು ಅಂದರೆ ಫೆಬ್ರವರಿ 29ರಂದು, FASTag KYC ವಿವರಗಳನ್ನು ಅಪ್ಡೇಟ್ ಮಾಡದೇ ಹೋದರೆ ನಿಮ್ಮ FASTag ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ ಅಥವಾ ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ. ನಿಮ್ಮ ಖಾತೆಯಲ್ಲಿ ಬ್ಯಾಲೆನ್ಸ್ ಇದ್ದರೂ ಅದನ್ನು ಬಳಸಲು ನಿಮಗೆ ಸಾಧ್ಯವಾಗುವುದಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ತಪ್ಪಿಸಲು, ನಿಮ್ಮ KYCಯನ್ನು ತಕ್ಷಣವೇ ನವೀಕರಿಸುವುದು ಉತ್ತಮ. 'ಒಂದು ವಾಹನ, ಒಂದು ಫಾಸ್ಟ್ಯಾಗ್'ನಿಯಮದ  ಅಡಿಯಲ್ಲಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಂದರೆ NHAI ಫಾಸ್ಟ್ಯಾಗ್ KYC ಅನ್ನು ಕಡ್ಡಾಯಗೊಳಿಸಿದೆ. 


ಇದನ್ನೂ ಓದಿ : ವಾಲ್ಟ್ ಡಿಸ್ನಿ ಜತೆ ನಿರ್ಣಾಯಕ ಒಪ್ಪಂದಕ್ಕೆ ಸಹಿ ಮಾಡಿದ ರಿಲಯನ್ಸ್ ಮತ್ತು ವಯಾಕಾಮ್ 18 ಮೀಡಿಯಾ


ಫಾಸ್ಟ್ಯಾಗ್ KYC ಮಾಡದಿದ್ದರೆ ಏನಾಗುತ್ತದೆ? :  
ಫಾಸ್ಟ್ಯಾಗ್ KYC ಮಾಡದಿದ್ದರೆ ನಿಮ್ಮ ಜೇಬಿನ ಹೊರೆ ಹೆಚ್ಚಾಗುತ್ತದೆ. ಟೋಲ್ ಪ್ಲಾಜಾದಲ್ಲಿ ಟೋಲ್ ಅನ್ನು ನಗದು ರೂಪದಲ್ಲಿ ಪಾವತಿಸಬೇಕಾಗುತ್ತದೆ. ನಿಗದಿತ ಟೋಲ್‌ನ ದುಪ್ಪಟ್ಟು ತೆರಿಗೆಯನ್ನು ಪಾವತಿಸಬೇಕಾಗುತ್ತದೆ. 


KYC ಗಾಗಿ ಯಾವ ದಾಖಲೆಗಳು ಅಗತ್ಯವಿದೆ?  : 
ಫಾಸ್ಟ್ಯಾಗ್‌ಗಾಗಿ KYCಯನ್ನು ಮಾಡುವುದು ತುಂಬಾ ಸುಲಭ. KYCಯನ್ನು ಆನ್‌ಲೈನ್‌ನಲ್ಲಿ ಅಪ್ಡೇಟ್ ಮಾಡಬಹುದು. ಇದಕ್ಕಾಗಿ ಕೆಲವು ದಾಖಲೆಗಳು ಬೇಕಾಗುತ್ತವೆ. 


-ವಾಹನ ನೋಂದಣಿ ಪ್ರಮಾಣಪತ್ರ
-ಚಾಲನಾ ಪರವಾನಗಿ
-ಪ್ಯಾನ್ ಕಾರ್ಡ್, ವೋಟರ್ ಐಡಿ, ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಅನ್ನು ಐಡಿ ಪುರಾವೆಯಾಗಿ ಬಳಸಬಹುದು. 
-ಒಂದು ವಿಳಾಸ ಪುರಾವೆ
-ಒಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ


ಇದನ್ನೂ ಓದಿ : Gold from Mushrooms: ಅಣಬೆಯಿಂದಲೂ ತಯಾರಾಗುತ್ತದೆ ಚಿನ್ನ! ಗೋವಾ ವಿಜ್ಞಾನಿಗಳ ಅದ್ಭುತ ಶೋಧ


ಫಾಸ್ಟ್ಯಾಗ್ KYC ಅನ್ನು ಆನ್‌ಲೈನ್‌ನಲ್ಲಿ ಮಾಡುವುದು ಹೇಗೆ? :
ಫಾಸ್ಟ್ಯಾಗ್ KYC ಅನ್ನು ನವೀಕರಿಸುವುದು ತುಂಬಾ ಸುಲಭ.ಮನೆಯಲ್ಲಿ ಕುಳಿತು ಕೆಲವೇ ನಿಮಿಷಗಳಲ್ಲಿ ನಿಮ್ಮ ಫೋನ್‌ ಮೂಲಕ ಈ ಕೆಲಸ ಮಾಡಿ ಮುಗಿಸಬಹುದು.  ಇದಕ್ಕಾಗಿ ಕೇವಲ ಕೆಲವು ಹಂತಗಳನ್ನು ಅನುಸರಿಸಿ.   


-ಮೊದಲು ನೀವು fastag.ihmcl.com ಗೆ ಹೋಗಬೇಕು . ಇಲ್ಲಿ, ನಿಮ್ಮ ಫಾಸ್ಟ್ಯಾಗ್ ಅನ್ನು ಬ್ಯಾಂಕ್ ನೀಡಿದ್ದರೆ, ಆ ಬ್ಯಾಂಕಿನ ಪೋರ್ಟಲ್‌ಗೆ ಹೋಗಿ ನಿಮ್ಮ KYC ಅನ್ನು ನವೀಕರಿಸಬೇಕಾಗುತ್ತದೆ.   
ಫಾಸ್ಟ್ಯಾಗ್‌ನೊಂದಿಗೆ ಲಿಂಕ್ ಮಾಡಲಾದ ಅಥವಾ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯೊಂದಿಗೆ ಲಾಗ್ ಇನ್ ಮಾಡಿ. 
- 'ಮೈ ಪ್ರೊಫೈಲ್' ಮೇಲೆ ಕ್ಲಿಕ್ ಮಾಡಿ. 
-ಇದರ ನಂತರ ನೀವು 'KYC' ಕ್ಲಿಕ್ ಮಾಡುವ ಮೂಲಕ ನಿಮ್ಮ  ಸ್ಟೇಟಸ್ ಪರಿಶೀಲಿಸಬಹುದು. 
-ನಿಮ್ಮ ಫಾಸ್ಟ್ಯಾಗ್ KYC ಅನ್ನು ನವೀಕರಿಸದಿದ್ದರೆ, ಇಲ್ಲಿ ಕೇಳುವ ಮಾಹಿತಿಯನ್ನು ಭರ್ತಿ ಮಾಡಿದ ನಂತರ, ಕಡ್ಡಾಯ ದಾಖಲೆಗಳನ್ನು ಲಗತ್ತಿಸಿ. 
- ಸಬ್ಮಿಟ್ ಮಾಡುವ ಮೂಲಕ ಫಾಸ್ಟ್ಯಾಗ್‌ನ KYC ಪೂರ್ಣಗೊಳ್ಳುತ್ತದೆ.  


ಇದನ್ನೂ ಓದಿ : Stock Market Updates: ಷೇರುಪೇಟೆಯಲ್ಲಿ ʼಕರಡಿʼ ಕುಣಿತಕ್ಕೆ ಕರಗಿತು ₹6 ಲಕ್ಷ ಕೋಟಿ ಸಂಪತ್ತು..!


ಫಾಸ್ಟ್ಯಾಗ್ KYC ಅನ್ನು ನವೀಕರಿಸಲು ಆಫ್‌ಲೈನ್ ಮಾರ್ಗ :   
ನೀವು ಆನ್‌ಲೈನ್ ಅನ್ನು ಬಳಸದಿದ್ದರೆ ನೀವು ಆಫ್‌ಲೈನ್ ವಿಧಾನವನ್ನು ಸಹ ಅಳವಡಿಸಿಕೊಳ್ಳಬಹುದು. ಫಾಸ್ಟ್ಯಾಗ್ ಪಡೆದುಕೊಂಡ ಬ್ಯಾಂಕ್ ಶಾಖೆಗೆ ಹೋಗಬೇಕಾಗುತ್ತದೆ. ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕ ನೀವು KYC ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ. ಫಾರ್ಮ್ ಅನ್ನು ಸಲ್ಲಿಸಿದ ನಂತರ, ನಿಮ್ಮ ಫಾಸ್ಟ್ಯಾಗ್ KYC ಅನ್ನು ನವೀಕರಿಸಲಾಗುತ್ತದೆ. ಫಾಸ್ಟ್ಯಾಗ್ ಅಪ್‌ಡೇಟ್ ಆದ ತಕ್ಷಣ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಸಂದೇಶ ಬರುತ್ತದೆ.  


ಒಂದು ವಾಹನದಲ್ಲಿ ಒಂದೇ ಫಾಸ್ಟ್ಯಾಗ್ :   
ಒಂದು ವಾಹನದಲ್ಲಿ ಒಂದು ಫಾಸ್ಟ್ಯಾಗ್ ಮಾತ್ರ ಕಾರ್ಯನಿರ್ವಹಿಸುತ್ತದೆ ಎಂದು NHAI ಸ್ಪಷ್ಟಪಡಿಸಿದೆ. ಒಂದು ವಾಹನ ಒಂದು ಫಾಸ್ಟ್ಯಾಗ್ ನೀತಿಯ ಅಡಿಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ನಿಮ್ಮ ವಾಹನದಲ್ಲಿ ಒಂದಕ್ಕಿಂತ ಹೆಚ್ಚು ಫಾಸ್ಟ್ಯಾಗ್ ಅಳವಡಿಸಿದ್ದರೆ, ಒಂದನ್ನು ಹೊರತುಪಡಿಸಿ ಉಳಿದೆಲ್ಲವನ್ನೂ  ಹಿಂದಿರುಗಿಸಬೇಕಾಗುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.