ತಿಂಗಳ ಮೊದಲ ದಿನವೇ ಗ್ರಾಹಕರಿಗೆ ಶಾಕ್: ಗ್ಯಾಸ್ ಸಿಲಿಂಡರ್ ಮತ್ತೆ ದುಬಾರಿ
ವಿತ್ತೀಯ ವರ್ಷದ ಕೊನೆಯ ತಿಂಗಳು ಆರಂಭವಾಗಿದೆ. 01 ಮಾರ್ಚ್ 2023ರ ಮೊದಲ ದಿನವೇ ತೈಲ ಕಂಪನಿಗಳು ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ನೀಡಿವೆ. ಗೃಹಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ ಮತ್ತೆ ದುಬಾರಿ ಆಗಿದ್ದು, ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಬೆಂಗಳೂರು: ದೇಶೀಯ ಅನಿಲ ಕಂಪನಿಗಳು ಗ್ರಾಹಕರಿಗೆ ಮತ್ತೆ ಗಾಯದ ಮೇಲೆ ಬರೆ ಎಳೆದಿವೆ. ಎಲ್‌ಪಿಜಿ ಸಿಲಿಂಡರ್‌ನ ಬೆಲೆಗಳು ಮತ್ತೆ 50 ರೂ.ಗಳು ಏರಿಕೆ ಆಗಿದ್ದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 14.2 ಕೆಜಿ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ 1103 ರೂ. ತಲುಪಿದೆ. ಗಮನಾರ್ಹವಾಗಿ, ಈ ಮೊದಲು 14.2 ಕೆಜಿಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 1053ರೂ. ಇತ್ತು.ಇದೀಗ ಇಂದಿನಿಂದ ಹೊಸ ದರಗಳು ಜಾರಿಗೆ ಬಂದಿವೆ.
ದೀರ್ಘ ಸಮಯದ ನಂತರ ಅಂದರೆ ಜುಲೈ 6, 2022 ರ ನಂತರ ತೈಲ ಕಂಪನಿಗಳು ಮೊದಲ ಬಾರಿಗೆ ಬೆಲೆಯನ್ನು ಬದಲಾಯಿಸಿವೆ. ಆ ಸಮಯದಲ್ಲೂ ಕಂಪನಿಗಳು ಸಿಲಿಂಡರ್ ಬೆಲೆಯನ್ನು 50 ರೂಪಾಯಿ ಹೆಚ್ಚಿಸಿ 1053 ರೂಪಾಯಿಗೆ ಹೆಚ್ಚಿಸಿದ್ದವು. ಮತ್ತೊಂದೆಡೆ, ಕಂಪನಿಗಳು 19 ಕೆಜಿ ವಾಣಿಜ್ಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು ತೀವ್ರವಾಗಿ ಹೆಚ್ಚಿಸಿವೆ.
ಇದನ್ನೂ ಓದಿ- Tax Saving: ಸಾವಿರಾರು ರೂಪಾಯಿ Income Tax ಉಳಿಸಲು ಇಲ್ಲಿವೆ ಸಿಂಪಲ್ ಟಿಪ್ಸ್
ಹೌದು, ಕಳೆದ ಕೆಲವು ದಿನಗಳಿಂದ ಭಾರೀ ಇಳಿಕೆ ಕಂಡಿದ್ದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಕೂಡ ತೈಲ ಕಂಪನಿಗಳು ಏರಿಕೆಯನ್ನು ಘೋಷಿಸಿವೆ. 19 ಕೆಜಿ ವಾಣಿಜ್ಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ 350.50 ರೂ. ಏರಿಕೆ ಕಂಡಿದ್ದು ಇದೀಗ ಇದರ ಬೆಲೆ 2119.50 ರೂ.ಗೆ ತುಳುಪಿದೆ. ಗಮನಾರ್ಹವಾಗಿ ಈ ಮೊದಲು ವಾಣಿಜ್ಯ ಸಿಲಿಂಡರ್ ಗಳು 1769 ರೂ.ಗಳಿಗೆ ಲಭ್ಯವಿತ್ತು.
ಇದನ್ನೂ ಓದಿ- EPFO ಪಿಂಚಣಿ ಹೆಚ್ಚಳಕ್ಕೆ ಅರ್ಜಿ ಸಲ್ಲಿಸಿದ್ದೀರಾ? ಹಾಗಾದ್ರೆ ಈ ಪ್ರಮುಖ ವಿಷಯಗಳನ್ನು ಈಗಲೇ ತಿಳಿದುಕೊಳ್ಳಿ
ಇದಕ್ಕೂ ಮುನ್ನ1 ಮೇ 2022 ರಂದು, ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ದಾಖಲೆಯ 2355.50 ರೂ. ತಲುಪಿತ್ತು. ಬಳಿಕ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಬೆಲೆ ಕಳೆದ ಹಲವು ತಿಂಗಳುಗಳಿಂದ ಇಳಿಕೆ ಆಗಿತ್ತು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.