EPFO ಪಿಂಚಣಿ ಹೆಚ್ಚಳಕ್ಕೆ ಅರ್ಜಿ ಸಲ್ಲಿಸಿದ್ದೀರಾ? ಹಾಗಾದ್ರೆ ಈ ಪ್ರಮುಖ ವಿಷಯಗಳನ್ನು ಈಗಲೇ ತಿಳಿದುಕೊಳ್ಳಿ

EPFO Scheme: ಪಿಂಚಣಿ ಯೋಜನೆ: ಹೆಚ್ಚಿನ ಪಿಂಚಣಿಯನ್ನು ಆಯ್ಕೆ ಮಾಡುವ ದೊಡ್ಡ ನ್ಯೂನತೆಯೆಂದರೆ ನಿಮ್ಮ ಇಪಿಎಫ್ ಕಾರ್ಪಸ್‌ನ ಒಂದು ಭಾಗವನ್ನು ಹೆಚ್ಚಿನ ಪಿಂಚಣಿ ಪಡೆಯಲು ಸೇರಿದ ದಿನಾಂಕದಿಂದ ಇಪಿಎಸ್ ಯೋಜನೆಗೆ ಮರುಹಂಚಿಕೆ ಮಾಡಲಾಗುತ್ತದೆ.

Written by - Bhavishya Shetty | Last Updated : Feb 27, 2023, 05:11 PM IST
    • ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಹೊರಡಿಸಿದ್ದ ಇತ್ತೀಚಿನ ಮಾರ್ಗಸೂಚಿಗಳು
    • ಹೆಚ್ಚಿನ ಪಿಂಚಣಿ ಕೊಡುಗೆಯನ್ನು ಆಯ್ಕೆ ಮಾಡದಿರುವುದು ಒಳಿತು
    • ಇದಕ್ಕೆ ಕೆಲವು ಕಾರಣಗಳಿವೆ. ಅವುಗಳ ಬಗ್ಗೆ ತಿಳಿದುಕೊಳ್ಳೋಣ
EPFO ಪಿಂಚಣಿ ಹೆಚ್ಚಳಕ್ಕೆ ಅರ್ಜಿ ಸಲ್ಲಿಸಿದ್ದೀರಾ? ಹಾಗಾದ್ರೆ ಈ ಪ್ರಮುಖ ವಿಷಯಗಳನ್ನು ಈಗಲೇ ತಿಳಿದುಕೊಳ್ಳಿ title=
EPFO

EPFO Scheme: ಇಪಿಎಫ್‌ಒ ಅಥವಾ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಹೊರಡಿಸಿದ್ದ ಇತ್ತೀಚಿನ ಮಾರ್ಗಸೂಚಿಗಳು, ಈ ಹಿಂದೆ ಇಪಿಎಸ್ ಅಡಿಯಲ್ಲಿ ಹೆಚ್ಚಿನ ಪಿಂಚಣಿ ಕೊಡುಗೆಯನ್ನು ಆಯ್ಕೆ ಮಾಡದ ಅರ್ಹ ಉದ್ಯೋಗಿಗಳು ಈಗ ಮತ್ತೊಮ್ಮ ಆಯ್ಕೆ ಮಾಡಬಹುದು ಎಂದು ಹೇಳುತ್ತದೆ. ಆದರೆ ನೀವು ಹೆಚ್ಚಿನ ಪಿಂಚಣಿ ಕೊಡುಗೆಯನ್ನು ಆಯ್ಕೆ ಮಾಡದಿರುವುದು ಒಳಿತು ಎಂದು ಹೇಳಲಾಗುತ್ತದೆ. ಇದಕ್ಕೆ ಕೆಲವು ಕಾರಣಗಳಿವೆ. ಅವುಗಳ ಬಗ್ಗೆ ತಿಳಿದುಕೊಳ್ಳೋಣ...

ಇದನ್ನೂ ಓದಿ: Mankurad mangoes: ಅಬ್ಬಬ್ಬಾ.. ರುಚಿಯಲ್ಲಿ ಸಾಟಿಯೇ ಇಲ್ಲದ ಈ ಮಾವಿನ ಹಣ್ಣಿನ ಬರೋಬ್ಬರಿ ಬೆಲೆ 6000 ರೂ.!

ಪಿಂಚಣಿ ಯೋಜನೆ: ಹೆಚ್ಚಿನ ಪಿಂಚಣಿಯನ್ನು ಆಯ್ಕೆ ಮಾಡುವ ದೊಡ್ಡ ನ್ಯೂನತೆಯೆಂದರೆ ನಿಮ್ಮ ಇಪಿಎಫ್ ಕಾರ್ಪಸ್‌ನ ಒಂದು ಭಾಗವನ್ನು ಹೆಚ್ಚಿನ ಪಿಂಚಣಿ ಪಡೆಯಲು ಸೇರಿದ ದಿನಾಂಕದಿಂದ ಇಪಿಎಸ್ ಯೋಜನೆಗೆ ಮರುಹಂಚಿಕೆ ಮಾಡಲಾಗುತ್ತದೆ. EPF ಹಣವನ್ನು EPS ಗೆ ವರ್ಗಾಯಿಸುವುದರಿಂದ EPF ಸದಸ್ಯರಾಗಿ ನೀವು ವರ್ಷಗಳಲ್ಲಿ ಗಳಿಸಿದ ಸಂಯೋಜನೆಯ ಲಾಭವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ, ಹೆಚ್ಚಿನ ಪಿಂಚಣಿ ಆಯ್ಕೆಗೆ ಹೋಗುವ ಮೊದಲು, ನೀವು ಆಲೋಚನೆ ಮಾಡುವುದು ಬೆಸ್ಟ್.

ಒಟ್ಟು ಮೊತ್ತ ಪಾವತಿ: ಪಿಎಫ್ ಖಾತೆಯಲ್ಲಿರುವ ಎಲ್ಲಾ ಹಣ ನಿಮ್ಮದೇ. ನಿಮ್ಮ ಮರಣದ ಸಂದರ್ಭದಲ್ಲಿ, ಸಂಪೂರ್ಣ ಮೊತ್ತವನ್ನು ನಿಮ್ಮ ನಾಮಿನಿ/ಕಾನೂನು ಉತ್ತರಾಧಿಕಾರಿಗಳಿಗೆ ನೀಡಲಾಗುತ್ತದೆ. ಆದರೆ ಇಪಿಎಸ್ ಅಡಿಯಲ್ಲಿ ಮರಣ ಹೊಂದಿದರೆ, ಸಂಗಾತಿಯು ಪಿಂಚಣಿಯ ಶೇಕಡಾ 50 ರಷ್ಟು ಮಾತ್ರ ಪಡೆಯುತ್ತಾರೆ.

ಇಪಿಎಸ್: ಇಪಿಎಸ್ ಒಟ್ಟು ಮೊತ್ತದ ಪಾವತಿಯನ್ನು ಒದಗಿಸುವುದಿಲ್ಲ. ಇದು ನಿಮ್ಮ ಸಂಗ್ರಹವಾದ ಕಾರ್ಪಸ್ ಆಧಾರದ ಮೇಲೆ ನಿಮಗೆ ಪಿಂಚಣಿ ನೀಡುತ್ತದೆ. ಇಪಿಎಸ್ ಅಡಿಯಲ್ಲಿ ಹೆಚ್ಚಿನ ಪಿಂಚಣಿ ಆಯ್ಕೆ ಮಾಡುವ ಬದಲು, ನೀವು ಎನ್‌ಪಿಎಸ್‌ನಂತಹ ಇತರ ಸರ್ಕಾರಿ ಬೆಂಬಲಿತ ಆಯ್ಕೆಗಳನ್ನು ಪರಿಗಣಿಸಬಹುದು. ಅದು ಲಿಂಕ್ ಮಾಡಿದ ಆದಾಯವನ್ನು ಮತ್ತು ನಿವೃತ್ತಿಯ ಮೇಲೆ ವರ್ಷಾಶನವನ್ನು ಖರೀದಿಸಲು ಒಟ್ಟು ಮೊತ್ತವನ್ನು ಒದಗಿಸುತ್ತದೆ. ಇದರ ಹೊರತಾಗಿ, NPS ಕೊಡುಗೆಯು ಸೆಕ್ಷನ್ 80C ಅಡಿಯಲ್ಲಿ ಲಭ್ಯವಿರುವ 1.5 ಲಕ್ಷ ರೂಪಾಯಿಗಳ ಕಡಿತದ ಮೇಲೆ 50000 ರೂ.ಗಳ ಹೆಚ್ಚುವರಿ ಕಡಿತವನ್ನು ಒದಗಿಸುತ್ತದೆ.

ಬಡ್ಡಿ: ಇಪಿಎಸ್ ಯೋಜನೆಯಲ್ಲಿ ನಮ್ಯತೆಯ ಕೊರತೆಯಿದೆ. ಅಲ್ಲದೆ, ಇಪಿಎಸ್ ಮೊತ್ತದ ಮೂಲಕ ಗಳಿಸಿದ ಬಡ್ಡಿಯು ಇಪಿಎಫ್‌ನಂತೆಯೇ ಇರುವುದಿಲ್ಲ. ಇದು ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ.

ಇದನ್ನೂ ಓದಿ: ಟೆಸ್ಟ್ ಕ್ರಿಕೆಟ್’ನಲ್ಲಿ 23 ಶತಕ, 2 ತ್ರಿಶತಕ: ಈ ದಾಖಲೆ ಬರೆದ ಟೀಂ ಇಂಡಿಯಾದ ಏಕೈಕ ಆಟಗಾರ ಯಾರು ಗೊತ್ತಾ?

10 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ನಂತರ ಮತ್ತು 58 ವರ್ಷಗಳ ನಂತರ ಮಾತ್ರ ಇಪಿಎಸ್ ಅಡಿಯಲ್ಲಿ ಪಿಂಚಣಿ ಪಡೆಯಲು ಅರ್ಹರಾಗಿರುವುದರಿಂದ, ಆರಂಭಿಕ ನಿವೃತ್ತಿಗಾಗಿ ಯೋಜಿಸುತ್ತಿರುವವರಿಗೆ, ಇಪಿಎಫ್‌ಒನ ಹೆಚ್ಚಿನ ಪಿಂಚಣಿಯನ್ನು ಆರಿಸಿಕೊಳ್ಳುವುದು ಒಳ್ಳೆಯದಲ್ಲ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News