ಟೋಲ್ ಪಾವತಿಸುವವರಿಗಾಗಿ ಸರ್ಕಾರದ ಹೊಸ ಕ್ರಮ ! ನಿನ್ನೆಯಿಂದಲೇ ಜಾರಿ
Toll plaza new Rules :SOP ಮೂಲಕ, ಸರ್ಕಾರದಿಂದ ಕೆಲವು ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗಿದೆ. ಈ ಮಾರ್ಗಸುಚಿಗಳನ್ನು ಅಳವಡಿಸಿಕೊಳ್ಳುವ ಮೂಲಕ ವಿವಾದಗಳನ್ನು ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತದೆ.
Toll plaza new Rules : ರಸ್ತೆಯಲ್ಲಿ ಪ್ರಯಾಣಿಸುವ ಜನರು ಟೋಲ್ ಪ್ಲಾಜಾಗಳ ಮೂಲಕ ಹಾದು ಹೋಗಬೇಕಾಗುತ್ತದೆ. ಬಹುತೇಕ ಟೋಲ್ ಪ್ಲಾಜಾಗಳಲ್ಲಿ ಆಗಾಗ ಗಲಾಟೆ ಜಗಳಗಳು ನಡೆಯುವುದುಂಟು. ಈ ಮಧ್ಯೆ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಪ್ರಯಾಣಿಕರು ಮತ್ತು ಟೋಲ್ ನಿರ್ವಾಹಕರ ಸುರಕ್ಷತೆಗಾಗಿ, ಮತ್ತು ಅಲ್ಲಿ ಉಂಟಾಗುವ ವಿವಾದಗಳನ್ನು ಕಡಿಮೆ ಮಾಡುವ ಸಲುವಾಗಿ ಹೊಸ ಕ್ರಮವನ್ನು ಕೈಗೊಂಡಿದೆ. ಹೌದು, ಟೋಲ್ ಪ್ಲಾಜಾಗಳಲ್ಲಿ ಭದ್ರತೆಯನ್ನು ಹೆಚ್ಚಿಸಲು ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್‌ಒಪಿ) ಅನ್ನು ಹೊರಡಿಸಿದೆ. ಎನ್‌ಎಚ್‌ಎಐ ಸೋಮವಾರ ಈ ಮಾಹಿತಿ ನೀಡಿದೆ. ಈ SOP ಮೂಲಕ, ಸರ್ಕಾರದಿಂದ ಕೆಲವು ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗಿದೆ. ಈ ಮಾರ್ಗಸುಚಿಗಳನ್ನು ಅಳವಡಿಸಿಕೊಳ್ಳುವ ಮೂಲಕ ವಿವಾದಗಳನ್ನು ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತದೆ.
ಜಾರಿಯಾಗಿದೆ ಹೊಸ ಮಾರ್ಗಸೂಚಿ :
ಅಧಿಕೃತ ಹೇಳಿಕೆಯ ಪ್ರಕಾರ, ಟೋಲ್ ಸಂಗ್ರಹಿಸುವ ಏಜೆನ್ಸಿಗಳು ತಮ್ಮ ಸಿಬ್ಬಂದಿ ಮತ್ತು ರಸ್ತೆ ಬಳಕೆದಾರರನ್ನು ಸಮರ್ಥವಾಗಿ ನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಲು NHAI ಪ್ರಾದೇಶಿಕ ಕಚೇರಿಗಳಿಗೆ ಮಾರ್ಗಸೂಚಿಗಳನ್ನು ಒದಗಿಸುತ್ತದೆ. SOP ಯ ಪ್ರಕಾರ, ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ಟೋಲ್ ಸಂಗ್ರಹ ಏಜೆನ್ಸಿಗಳು ತಮ್ಮ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸುವುದನ್ನು ಪ್ರಾದೇಶಿಕ ಕಚೇರಿಗಳು ಖಚಿತಪಡಿಸಿಕೊಳ್ಳುತ್ತವೆ.
ಇದನ್ನೂ ಓದಿ : ಇನ್ನೂ ನಿಮ್ಮ ಖಾತೆ ಸೇರಿಲ್ಲವೇ ಗೃಹ ಲಕ್ಷ್ಮಿ ಯೋಜನೆಯ ಹಣ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದೇನು?
ಜಗಳ ಕದನಕ್ಕಿಲ್ಲ ಜಾಗ :
ಟೋಲ್ ಪ್ಲಾಜಾ ನೌಕರರು NHAIನ ನಿಗದಿತ ಸಮವಸ್ತ್ರವನ್ನು ತಮ್ಮ ಹೆಸರಿನೊಂದಿಗೆ ಧರಿಸುವುದನ್ನು ಟೋಲ್ ಸಂಗ್ರಹ ಸಂಸ್ಥೆಯು ಖಚಿತಪಡಿಸುತ್ತದೆ ಎಂದು ತಿಳಿಸಲಾಗಿದೆ. ಯಾವುದೇ ಹಿಂಸಾಚಾರದ ಘಟನೆಯನ್ನು ಬಾಡಿ ಕ್ಯಾಮೆರಾ ಧರಿಸಿರುವ ಟೋಲ್ ಪ್ಲಾಜಾ ನಿರ್ವಾಹಕರು/ಲೇನ್ ವೀಕ್ಷಕರ ಮೂಲಕ ಮಾತ್ರ ನಿಯಂತ್ರಿಸಬೇಕು. ಈ ಮೂಲಕ ಅಲ್ಲಿ ಆಗುವ ಘಟನೆಯನ್ನು ರೆಕಾರ್ಡ್ ಮಾಡಲಾಗುವುದು.
ಪೀಸ್ ಆನ್ ಟೋಲ್ :
ಯಾವುದೇ ಪ್ರಯಾಣಿಕರಿಂದ ಅನುಚಿತ ವರ್ತನೆ ಕಂಡುಬಂದಲ್ಲಿ, ಲೇನ್ ಮೇಲ್ವಿಚಾರಕರು ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸಲು ಪ್ರಯತ್ನಿಸುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. NHAI ತನ್ನ ಹೊಸ ಉಪಕ್ರಮ 'ಪೀಸ್ ಆನ್ ಟೋಲ್' ಅನ್ನು ಈ ಮೂಲಕ ಘೋಷಿಸಿದೆ. ಇದರ ಅಡಿಯಲ್ಲಿ, ಟೋಲ್ ಪ್ಲಾಜಾ ಉದ್ಯೋಗಿಗಳಿಗೆ ಕೋಪವನ್ನು ನಿಯಂತ್ರಿಸುವ ಕುರಿತು ತರಬೇತಿ ನೀಡಲು ವೃತ್ತಿಪರ ಮನಶ್ಶಾಸ್ತ್ರಜ್ಞರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಮೊದಲ ತರಬೇತಿಯು ಹರಿಯಾಣದ ಮುರ್ತಾಲ್ ಟೋಲ್ ಪ್ಲಾಜಾದಲ್ಲಿ ನಡೆಡಿದೆ. ಇಂತಹ ತರಬೇತಿಯನ್ನು ದೇಶದ ವಿವಿಧ ಟೋಲ್ ಪ್ಲಾಜಾಗಳಲ್ಲಿ ಆಯೋಜಿಸಲಾಗುತ್ತದೆ.
ಇದನ್ನೂ ಓದಿ : ಮ್ಯೂಚವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಬೇಕೆ? ತಜ್ಞರ ಈ ಅಭಿಮತ ಖಂಡಿತ ತಿಳಿದುಕೊಳ್ಳಿ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ