ಹೆದ್ದಾರಿಗಳಲ್ಲಿ ಇನ್ನಿರುವುದಿಲ್ಲ ಟೋಲ್ ಪ್ಲಾಜಾ ! ಈ ರೀತಿ ಸಂಗ್ರಹವಾಗಲಿದೆ ಟೋಲ್ !
Toll Tax Collection:ಫಾಸ್ಟ್ಯಾಗ್ ನಂತರ, ಬಳಿಕ ಟೋಲ್ ಸಂಗ್ರಹಕ್ಕೆ ಸರ್ಕಾರ ಮತ್ತೊಂದು ಹೊಸ ವಿಧಾನವನ್ನು ಕಂಡುಹಿಡಿದಿದೆ. ಇದೀಗ ಜಿಪಿಎಸ್ ತಂತ್ರಜ್ಞಾನದ ಮೂಲಕ ಟೋಲ್ ಸಂಗ್ರಹ ಮಾಡಲು ಸರ್ಕಾರ ಮುಂದಾಗಿದೆ.
Toll Tax Collection : ಹೆದ್ದಾರಿ ಚಾಲಕರಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಭರ್ಜರಿ ಗಿಫ್ಟ್ ನೀಡಿದ್ದಾರೆ. ನೀವೂ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದರೆ ಟೋಲ್ ಪಾವತಿಗಾಗಿ ಗಂಟೆ ಗಟ್ಟಲೆ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ. ಫಾಸ್ಟ್ಯಾಗ್ ನಂತರ, ಬಳಿಕ ಟೋಲ್ ಸಂಗ್ರಹಕ್ಕೆ ಸರ್ಕಾರ ಮತ್ತೊಂದು ಹೊಸ ವಿಧಾನವನ್ನು ಕಂಡುಹಿಡಿದಿದೆ. ಇದೀಗ ಜಿಪಿಎಸ್ ತಂತ್ರಜ್ಞಾನದ ಮೂಲಕ ಟೋಲ್ ಸಂಗ್ರಹ ಮಾಡಲು ಸರ್ಕಾರ ಮುಂದಾಗಿದೆ.
ಇನ್ನು ಮುಂದೆ ಟೋಲ್ ಪಾವತಿಗಾಗಿ ಟೋಲ್ ಪ್ಲಾಜಾಗಳಲ್ಲಿ ನಿಲ್ಲುವ ಅಗತ್ಯವಿಲ್ಲ ಎಂದು ಸರ್ಕಾರ ಹೇಳಿದೆ. ಸರ್ಕಾರದ ಈ ಕ್ರಮದಿಂದ ಹೆದ್ದಾರಿಗಳಲ್ಲಿ ಆಗುವ ಜಾಮ್‌ನಿಂದಲೂ ಸಾಕಷ್ಟು ಪರಿಹಾರ ಸಿಗುತ್ತದೆ. ಹೊಸ ಜಿಪಿಎಸ್ ಟೋಲ್ ಸಿಸ್ಟಮ್ ಅನ್ನು ಪರಿಚಯಿಸಿದ ನಂತರ, ಹೆದ್ದಾರಿಯಲ್ಲಿ ಟೋಲ್ ಪ್ಲಾಜಾಗಳಿರುವುದಿಲ್ಲ. ದೇಶಾದ್ಯಂತ ಎಲ್ಲಾ ಹೆದ್ದಾರಿಗಳಿಂದ ಟೋಲ್ ಪ್ಲಾಜಾಗಳನ್ನು ತೆಗೆದುಹಾಕಲು ಸರ್ಕಾರ ನಿರಂತರವಾಗಿ ಪ್ರಯತ್ನಗಳನ್ನು ಮಾಡುತ್ತಿದೆ.
ಇದನ್ನೂ ಓದಿ : ಸ್ಥಿರ ಠೇವಣಿಗಳಿಗಿಂತ ಉತ್ತಮ ಆದಾಯ ನೀಡುವ ಮತ್ತು ಸುರಕ್ಷಿತ ಹೂಡಿಕೆಯ ಕೆಲ ಯೋಜನೆಗಳು ಇಲ್ಲಿವೆ!
ಮುಂದಿನ ವರ್ಷದಿಂದ ಈ ವ್ಯವಸ್ಥೆ ಆರಂಭ :
ಮುಂದಿನ ವರ್ಷದಿಂದ ಟೋಲ್ ತೆರಿಗೆ ಸಂಗ್ರಹಿಸಲು ಹೊಸ ವ್ಯವಸ್ಥೆ ಜಾರಿಗೆ ತರಲು ಸರ್ಕಾರ ಸಿದ್ಧತೆ ನಡೆಸಿದೆ. ಮಾಹಿತಿಯ ಪ್ರಕಾರ, ಕೇಂದ್ರ ಸರ್ಕಾರವು ಈಗ ಹೆದ್ದಾರಿ ಮತ್ತು ಎಕ್ಸ್‌ಪ್ರೆಸ್‌ವೇಗಳಲ್ಲಿ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಸ್ಥಾಪಿಸಲು ಸಿದ್ಧತೆ ನಡೆಸಿದೆ. ಮುಂದಿನ ವರ್ಷ ಮಾರ್ಚ್ ವೇಳೆಗೆ ಹೆದ್ದಾರಿ ಮತ್ತು ಎಕ್ಸ್‌ಪ್ರೆಸ್‌ವೇಗಳಲ್ಲಿ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಅಳವಡಿಸಲಾಗುವುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ನಿತಿನ್ ಗಡ್ಕರಿ ನೀಡಿದ ಮಾಹಿತಿ :
ಜಿಪಿಎಸ್ ಆಧಾರಿತ ಟೋಲ್ ವ್ಯವಸ್ಥೆ ಜಾರಿಯಿಂದ ಹೆದ್ದಾರಿಗಳಲ್ಲಿ ಕಂಡು ಬರುವ ಜಾಮ್ ನಿಂದ ಮುಕ್ತಿ ಸಿಗಲಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ಇದರೊಂದಿಗೆ, ವಾಹನಗಳು ಕ್ರಮಿಸುವ ನಿಜವಾದ ದೂರಕ್ಕೆ ಅನುಗುಣವಾಗಿ ಮಾತ್ರ ಟೋಲ್ ತೆರಿಗೆಯನ್ನು ಸಂಗ್ರಹಿಸಲಾಗುತ್ತದೆ. ಇನ್ನು, ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ಕಾರಿಡಾರ್‌ನಲ್ಲಿ ಸ್ಯಾಟಲೈಟ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯ ಪ್ರಾಯೋಗಿಕ ಯೋಜನೆ ಪೂರ್ಣಗೊಂಡಿದೆ ಎಂದು ನಿತಿನ್ ಗಡ್ಕರಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಮ್ಯೂಚವಲ್ ಫಂಡ್ ನಲ್ಲಿ ಹಣ ಹೂಡಿಕೆಗೂ ಮುನ್ನ ಈ ವಿಷಯಗಳು ನಿಮಗೆ ತಿಳಿದಿರಲಿ!
ಟೋಲ್ ಅನ್ನು ಹೇಗೆ ಕಡಿತಗೊಳಿಸಲಾಗುತ್ತದೆ? :
ಈ ಹೊಸ ಜಿಪಿಎಸ್ ಟೋಲ್ ವ್ಯವಸ್ಥೆಯಲ್ಲಿ, ಟೋಲ್ ಪ್ಲಾಜಾವನ್ನು ದಾಟಿದ ತಕ್ಷಣ ನಿಮ್ಮ ವಾಹನದ ನಂಬರ್ ಪ್ಲೇಟ್ ಅನ್ನು ಸ್ಕ್ಯಾನ್ ಮಾಡಲಾಗುತ್ತದೆ. ಇದರ ನಂತರ, ಟೋಲ್ ಸಂಗ್ರಹವನ್ನು ನಿಮ್ಮ ಬ್ಯಾಂಕ್ ಖಾತೆಯಿಂದ ಕಡಿತಗೊಳಿಸಲಾಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ