ಮಧ್ಯಮ ವರ್ಗದವರಿಗೂ ಉಚಿತ ಆರೋಗ್ಯ ವಿಮೆ : 2024ರ ಚುನಾವಣೆಗೂ ಮುನ್ನ ಸರ್ಕಾರ ದೊಡ್ಡ ಯೋಜನೆ

2024 Health Insurance:ಇದೀಗ ದೇಶದಲ್ಲಿ ಪ್ರತಿಯೊಬ್ಬರೂ  ಆರೋಗ್ಯ ವಿಮೆ ಹೊಂದಿಲ್ಲ. ಯಾವಾಗ ಆಸ್ಪತ್ರೆಗೆ ಹೋಗಬೇಕಾದರೂ ದುಡ್ಡು ಕಾಸಿನ ಚೊಇನ್ತೆ ಕಾಡ ತೊಡಗುತ್ತದೆ. 2024ರ ಚುನಾವಣೆಗೂ ಮುನ್ನ ಸರ್ಕಾರ ದೊಡ್ಡ ಯೋಜನೆಯನ್ನು ಸಿದ್ಧಪಡಿಸಿದೆ. 

Written by - Ranjitha R K | Last Updated : Dec 22, 2023, 12:00 PM IST
  • ಸರ್ಕಾರದ ಸಂಪೂರ್ಣ ಯೋಜನೆ
  • ಮಧ್ಯಮ ವರ್ಗದವರಿಗೆ ಲಾಭ
  • ಸಂಸದೀಯ ಸಮಿತಿ ಶಿಫಾರಸು
ಮಧ್ಯಮ ವರ್ಗದವರಿಗೂ ಉಚಿತ ಆರೋಗ್ಯ ವಿಮೆ : 2024ರ ಚುನಾವಣೆಗೂ ಮುನ್ನ ಸರ್ಕಾರ ದೊಡ್ಡ ಯೋಜನೆ  title=

2024 Health Insurance : 2024ರ ಲೋಕಸಭೆ ಚುನಾವಣೆ ಹತ್ತಿರದಲ್ಲಿದೆ. ಫೆಬ್ರವರಿಯಲ್ಲಿ ಮಧ್ಯಂತರ ಬಜೆಟ್ ಮಂಡನೆಯಾಗಲಿದೆ. ಇದಕ್ಕೂ ಮುನ್ನ ಹೆಲ್ತ್ ಇನ್ಶೂರೆನ್ಸ್ ಬಗ್ಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಹೌದು, ಕೇಂದ್ರ ಸರ್ಕಾರ ಆಯುಷ್ಮಾನ್ ಯೋಜನೆಯನ್ನು ವಿಸ್ತರಿಸಲು ಹೊರಟಿದೆ. ಆಯುಷ್ಮಾನ್ ಯೋಜನೆಯಡಿ ಚಿಕಿತ್ಸಾ ವೆಚ್ಚದ ಮಿತಿಯನ್ನು 10 ಲಕ್ಷಕ್ಕೆ  ಏರಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ಒಂದು ವೇಳೆ ಹೀಗಾದಲ್ಲಿ ಈ ನಿರ್ಧಾರದ ಪರಿಣಾಮವು ವ್ಯಾಪಕವಾಗಿರುತ್ತದೆ. 

ಸರ್ಕಾರದ ಸಂಪೂರ್ಣ ಯೋಜನೆ : 
- ವರದಿ ಪ್ರಕಾರ ಚಿಕಿತ್ಸೆಗೆ ನಿಗದಿ ಪಡಿಸಲಾಗಿದ್ದ 5 ಲಕ್ಷ ರೂ.ಗಳ ಮಿತಿಯನ್ನು 10 ಲಕ್ಷ ರೂ.ಗೆ ಹೆಚ್ಚಿಸಬಹುದು.
- ಪ್ರಸ್ತುತ ಆರೋಗ್ಯ ವಿಮೆಯನ್ನು ಹೊಂದಿಲ್ಲದ ಸುಮಾರು 41 ಕೋಟಿ ಜನರನ್ನು ಈ ಯೋಜನೆಯ ವ್ಯಾಪ್ತಿಗೆ ಸೇರಿಸಬಹುದು. 
- ಸದ್ಯ ಒಟ್ಟು 60 ಕೋಟಿ ಜನರನ್ನು ಆಯುಷ್ಮಾನ್ ಯೋಜನೆಯಡಿ ತರುವ ಗುರಿ ಹೊಂದಲಾಗಿದೆ. 

ಇದನ್ನೂ ಓದಿ : ಡಿಸೆಂಬರ್‌ 22ರಂದು ಇಂಧನ ಬೆಲೆ ಇಳಿಕೆ: ಇಂದಿನ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನು ಪರಿಶೀಲಿಸಿ! 

ಮಧ್ಯಮ ವರ್ಗದವರಿಗೆ ಲಾಭ : 
ಕೆಲ ವಾರಗಳ ಹಿಂದೆ ಛತ್ತೀಸ್‌ಗಢ ಚುನಾವಣೆ ವೇಳೆ ಬಿಜೆಪಿ 10 ಲಕ್ಷ ರೂಪಾಯಿ ಆರೋಗ್ಯ ವಿಮೆ ನೀಡುವುದಾಗಿ ಭರವಸೆ ನೀಡಿತ್ತು. ಈಗ ಈ ಭರವಸೆಯನ್ನು ‘ಮೋದಿ ಗ್ಯಾರಂಟಿ’ ಅಡಿಯಲ್ಲಿ ರಾಷ್ಟ್ರಮಟ್ಟದಲ್ಲಿ ಜಾರಿಗೆ ತರಬಹುದು. ಆದರೆ, ಇದನ್ನು ಚುನಾವಣೆ ವೇಳೆಗೆ ಪರಿಚಯಿಸಲಾಗುತ್ತದೆಯೇ ಅಥವಾ ಮೊದಲ ಬಜೆಟ್‌ನಲ್ಲಿ ಜಾರಿಗೆ ತರಲಾಗುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ವಿಶೇಷವೆಂದರೆ ಬಡತನ ರೇಖೆಗಿಂತ ಮೇಲಿರುವ ಮಧ್ಯಮ ವರ್ಗದ ಕುಟುಂಬಗಳನ್ನೂ ಉಚಿತ ಚಿಕಿತ್ಸಾ ಯೋಜನೆಯನ್ನು ವಿಸ್ತರಿಸಬಹುದು. ಉಳಿದ ಜನಸಂಖ್ಯೆ ಅಂದರೆ ಮೇಲ್ಮಧ್ಯಮ ವರ್ಗದವರು ಕನಿಷ್ಠ ಪ್ರೀಮಿಯಂ ಮೂಲಕ ವಿಮಾ ರಕ್ಷಣೆ ಪಡೆಯಬಹುದು. 

ಸಂಸದೀಯ ಸಮಿತಿ ಶಿಫಾರಸು : 
ಚಿಕಿತ್ಸಾ ವೆಚ್ಚದ ಮಿತಿ ಹೆಚ್ಚಿಸುವ ಕುರಿತು ಸರ್ಕಾರ ಗಂಭೀರವಾಗಿ ಚಿಂತಿಸಬೇಕು ಎಂದು ಸಂಸದೀಯ ಸಮಿತಿ ಶಿಫಾರಸು ಮಾಡಿದೆ. ಹೀಗಿರುವಾಗ ಮಧ್ಯಂತರ ಬಜೆಟ್‌ನಲ್ಲಿ ಈ ಬಗ್ಗೆ ದೊಡ್ಡ ಘೋಷಣೆ ಹೊರಬೀಳಬಹುದು ಎನ್ನಲಾಗಿದೆ. ಆಯುಷ್ಮಾನ್ ಯೋಜನೆಯ ಪರಿಶೀಲನೆಯಲ್ಲಿ, ಅನೇಕ ಸಂದರ್ಭಗಳಲ್ಲಿ 5 ಲಕ್ಷ ರೂ.ಗಳ ಮಿತಿಯು ಸಾಕಾಗುವುದಿಲ್ಲ ಎಂದು ತಿಳಿದುಬಂದಿದೆ. ಕೆಲವು ಪ್ರಮುಖ ಶಸ್ತ್ರಚಿಕಿತ್ಸೆಗಳು ಮತ್ತು ಚಿಕಿತ್ಸೆಗಳ ವೆಚ್ಚವು  ಅಧಿಕವಾಗಿರುತ್ತದೆ. ಕೆಲವು ಕಷ್ಟಕರವಾದ ಶಸ್ತ್ರಚಿಕಿತ್ಸೆಗಳು ಈ ವಿಮಾ ಯೋಜನೆಯ ವ್ಯಾಪ್ತಿಯಲ್ಲಿಲ್ಲ. ಮಧ್ಯಮ ವರ್ಗದ ಕುಟುಂಬಗಳು ರೋಗಕ್ಕೆ ತುತ್ತಾದ ನಂತರ ಬಡತನ ರೇಖೆಗಿಂತ ಕೆಳಗಿಳಿಯುವ ಅಪಾಯವನ್ನು ಎದುರಿಸುತ್ತಿವೆ ಎಂದು ಸಮಿತಿ ಹೇಳಿದೆ. 

ಇದನ್ನೂ ಓದಿ : Today Adike Rate: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News