Tomato Price Today: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಟೊಮೇಟೊ ದರ ಸರ್ಕಾರ ಹಾಗೂ ಸಾರ್ವಜನಿಕರಿಗೆ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಒಂದು ತಿಂಗಳಿನಿಂದ ನಿರಂತರವಾಗಿ ಟೊಮೆಟೊ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಕೆಜಿಗೆ 300 ರೂ.ಗೆ ತಲುಪುವ ಸಾಧ್ಯತೆಯಿದೆ ಎಂದು ಸಗಟು ವ್ಯಾಪಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಫ್ಲೈಟ್ ಟಿಕೆಟ್‌ ಬುಕಿಂಗ್ ಮೇಲೆ 2000 ರೂ.ವರೆಗೆ ರಿಯಾಯಿತಿ ! ಇಂಡಿಗೋ ನೀಡುತ್ತಿದೆ ವಿಶೇಷ ಆಫರ್


ದಿಲ್ಲಿಯ ಆಜಾದ್‌ ಪುರ ಟೊಮೇಟೊ ಅಸೋಸಿಯೇಷನ್‌ ನ ಅಧ್ಯಕ್ಷ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಸದಸ್ಯ ಅಶೋಕ್ ಕೌಶಿಕ್ ಮಾತನಾಡಿ, “ಕಳೆದ ಮೂರು ದಿನಗಳಿಂದ ಟೊಮ್ಯಾಟೊ ಮಾರುಕಟ್ಟೆಗೆ ಬರುವುದು ಕಡಿಮೆಯಾಗಿದೆ. ಏಕೆಂದರೆ ಹೆಚ್ಚಿನ ಮಳೆಯಿಂದಾಗಿ ಬೆಳೆ ಹಾನಿಯಾಗಿದೆ. ಸಗಟು ಮಾರುಕಟ್ಟೆಯಲ್ಲಿ ಟೊಮೇಟೊ ದರ ಕೆಜಿಗೆ 160 ರೂ.ನಿಂದ 220 ರೂ.ಗೆ ಏರಿಕೆಯಾಗಿದ್ದು, ಚಿಲ್ಲರೆ ಬೆಲೆಯೂ ಹೆಚ್ಚಾಗಬಹುದು. ಟೊಮೇಟೊ, ಕ್ಯಾಪ್ಸಿಕಂ ಸೇರಿದಂತೆ ಸೀಸನಲ್ ತರಕಾರಿಗಳ ಮಾರಾಟದಲ್ಲಿ ಭಾರಿ ಕುಸಿತ ಉಂಟಾಗಿರುವುದರಿಂದ ಸಗಟು ವ್ಯಾಪಾರಿಗಳು ನಷ್ಟ ಎದುರಿಸುತ್ತಿದ್ದಾರೆ” ಎಂದರು.


ಪ್ರಮುಖವಾಗಿ ಬೆಳೆ ಬೆಳೆಯುವ ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ಪೂರೈಕೆ ವ್ಯತ್ಯಯ ಉಂಟಾಗಿದೆ. ಇನ್ನು ಟೊಮೆಟೊ ಬೆಲೆ ಕೂಡ ಒಂದು ತಿಂಗಳಿಂದ ಏರಿಕೆಯಾಗುತ್ತಲೇ ಇದೆ. ಆಜಾದ್‌ಪುರ ತರಕಾರಿ ಮಾರುಕಟ್ಟೆಯ ಸಗಟು ವ್ಯಾಪಾರಿ ಸಂಜಯ್‌ ಭಗತ್‌ ಮಾತನಾಡಿ, “ಹಿಮಾಚಲ ಪ್ರದೇಶದಲ್ಲಿ ಭೂಕುಸಿತ ಹಾಗೂ ಭಾರಿ ಮಳೆಯಿಂದಾಗಿ ತರಕಾರಿ ಸಾಗಣೆಗೆ ತೊಂದರೆಯಾಗಿದೆ. ಬೆಳೆಗಾರರಿಂದ ತರಕಾರಿ ತರಲು ಆರರಿಂದ ಎಂಟು ಗಂಟೆಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ಈ ಪರಿಸ್ಥಿತಿಯಲ್ಲಿ ಟೊಮೇಟೊ ಬೆಲೆ ಕೆಜಿಗೆ 300 ರೂ. ತಲುಪುವ ಸಾಧ್ಯತೆ ಇದೆ” ಎಂದಿದ್ದಾರೆ.


ಇದನ್ನೂ ಓದಿ:  Stock Market: ಷೇರು ಮಾರುಕಟ್ಟೆಯಲ್ಲಿ ರಕ್ತದೋಕುಳಿ, ಹೂಡಿಕೆದಾರರ ₹3.5 ಲಕ್ಷ ಕೋಟಿ ಮಟಾಷ್!


ಹಿಮಾಚಲ ಪ್ರದೇಶ, ಕರ್ನಾಟಕ ಹಾಗೂ ಮಹಾರಾಷ್ಟ್ರದಿಂದ ಬರುವ ಟೊಮೇಟೊ ಮತ್ತಿತರ ತರಕಾರಿಗಳ ಗುಣಮಟ್ಟ ಕುಸಿದಿದೆ ಎಂದರು. ಹಿಮಾಚಲ ಪ್ರದೇಶದಲ್ಲಿ ಜುಲೈನಲ್ಲಿ ಸುರಿದ ಭಾರಿ ಮಳೆಗೆ ಬೆಳೆ ಹಾನಿಯಾಗಿದೆ. ಇದೇ ವೇಳೆ ಮದರ್ ಡೈರಿಯು ತನ್ನ ‘ಸಫಲ್ ಸ್ಟೋರ್’ ಮೂಲಕ ಟೊಮೆಟೊವನ್ನು ಕೆಜಿಗೆ 259 ರೂ.ಗೆ ಮಾರಾಟ ಮಾಡುತ್ತಿದೆ. ಕೇಂದ್ರ ಸರ್ಕಾರ ಜುಲೈ 14 ರಿಂದ ಸಬ್ಸಿಡಿ ದರದಲ್ಲಿ ಟೊಮೆಟೊ ಮಾರಾಟ ಮಾಡುತ್ತಿದೆ. ಆದರೆ ಪೂರೈಕೆಯ ಕೊರತೆಯಿಂದಾಗಿ, ಬೆಲೆಗಳು ಮತ್ತೆ ಏರಲು ಪ್ರಾರಂಭಿಸಿವೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ