Horoscope: ಇಂದು ಈ ರಾಶಿಯ ಮೇಲಿರಲಿದೆ ಶ್ರೀಹರಿ ಕೃಪಾದೃಷ್ಟಿ: ಅಪಾರ ಧನವೃಷ್ಟಿ-ಅಂದುಕೊಂಡಿದ್ದೆಲ್ಲಾ ಈಡೇರುವ ಸುದಿನ!

Horoscope Today 03 August 2023: ಮೇಷ ರಾಶಿಯ ಜನರು ತಮ್ಮ ಸದ್ಗುಣಗಳನ್ನು ಹೆಚ್ಚಿಸಿಕೊಳ್ಳಬೇಕು. ಆ ಗುಣಗಳ ಮೂಲಕ ಕಾರ್ಯಕ್ಷಮತೆಯನ್ನು ಸುಧಾರಿಸಲು ಪ್ರಯತ್ನಿಸಬೇಕು. ಶೀಘ್ರದಲ್ಲೇ ವ್ಯಾಪಾರವನ್ನು ಹೆಚ್ಚಿಸುವ ಬಲವಾದ ಸಾಧ್ಯತೆಯಿದೆ.

Written by - Bhavishya Shetty | Last Updated : Aug 3, 2023, 06:54 AM IST
    • ಈ ರಾಶಿಯ ಜನರ ವ್ಯವಹಾರಕ್ಕೆ ಇದು ಉತ್ತಮ ಸಮಯ
    • ಮಿಥುನ ರಾಶಿಯ ಇಂದು ಅಪಾರ ಲಾಭ ಗಳಿಸುವ ಸಾಧ್ಯತೆಯಿದೆ
    • ಈ ರಾಶಿಯ ಜನರು ಶಾಂತಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕು
Horoscope: ಇಂದು ಈ ರಾಶಿಯ ಮೇಲಿರಲಿದೆ ಶ್ರೀಹರಿ ಕೃಪಾದೃಷ್ಟಿ: ಅಪಾರ ಧನವೃಷ್ಟಿ-ಅಂದುಕೊಂಡಿದ್ದೆಲ್ಲಾ ಈಡೇರುವ ಸುದಿನ! title=
rashi bhavishya

Horoscope Today 03 August 2023, Rashifal, Daily Horoscope Kannada: ಗುರುವಾರ ಕೆಲವೊಂದು ರಾಶಿಯ ಮೇಲೆ ಶ್ರೀ ಹರಿಯ ಕೃಪೆ ಇರಲಿದೆ. ಹೀಗಾಗಿ ಮಿಥುನ ರಾಶಿಯ ಜನರು ಇಂದು ಅಪಾರ ಲಾಭ ಗಳಿಸುವ ಸಾಧ್ಯತೆಯಿದೆ. ಧನು ರಾಶಿಯ ವ್ಯಾಪಾರಸ್ಥರ ಗಳಿಕೆಯಲ್ಲಿ ಹೆಚ್ಚಳವಾಗಲಿದೆ. ಇನ್ನುಳಿದ ರಾಶಿಗಳ ದಿನಭವಿಷ್ಯ ಹೇಗಿದೆ ನೋಡೋಣ.

ಇದನ್ನೂ ಓದಿ: 21 ವರ್ಷಗಳ ಬಳಿಕ ಈ ರಾಶಿಗೆ ಸಿರಿಸಂಪತ್ತು ತಂದ ‘ಶುಭಕರ’: ದುಡ್ಡಿನ ಮಳೆ, ಹೆಜ್ಜೆಹೆಜ್ಜೆಗೂ ಜೊತೆ ನಿಲ್ಲುವಳು ಧನಲಕ್ಷ್ಮೀ!

ಮೇಷ ರಾಶಿ - ಮೇಷ ರಾಶಿಯ ಜನರು ತಮ್ಮ ಸದ್ಗುಣಗಳನ್ನು ಹೆಚ್ಚಿಸಿಕೊಳ್ಳಬೇಕು. ಆ ಗುಣಗಳ ಮೂಲಕ ಕಾರ್ಯಕ್ಷಮತೆಯನ್ನು ಸುಧಾರಿಸಲು ಪ್ರಯತ್ನಿಸಬೇಕು. ಶೀಘ್ರದಲ್ಲೇ ವ್ಯಾಪಾರವನ್ನು ಹೆಚ್ಚಿಸುವ ಬಲವಾದ ಸಾಧ್ಯತೆಯಿದೆ.

ವೃಷಭ ರಾಶಿ - ಈ ರಾಶಿಯ ಜನರ ವ್ಯವಹಾರಕ್ಕೆ ಇದು ಉತ್ತಮ ಸಮಯ. ಯುವಕರು ಸಮಸ್ಯೆಗಳನ್ನು ಎದುರಿಸಬಹುದು. ಆದರೆ ಪರಿಹಾರವೂ ಸೂಕ್ತವಾಗಿ ಸಿಗಲಿದೆ. ಮನೆಯ ಘನತೆ ಕಾಪಾಡುವುದು ನಿಮ್ಮ ಜವಾಬ್ದಾರಿಯೂ ಹೌದು.

ಮಿಥುನ - ಮಿಥುನ ರಾಶಿಯ ಇಂದು ಅಪಾರ ಲಾಭ ಗಳಿಸುವ ಸಾಧ್ಯತೆಯಿದೆ. ವ್ಯಾಪಾರ ವರ್ಗವು ಕೆಲಸಕ್ಕೆ ಸಂಬಂಧಿಸಿದಂತೆ ಪ್ರಯಾಣಿಸಬಹುದು. ಪ್ರತಿಭೆ ಅನಾವರಣಕ್ಕೆ ಉತ್ತಮ ಸಮಯ ಬರಲಿದೆ.

ಕರ್ಕ ರಾಶಿ - ಹೊಸ ಉದ್ಯಮ ಆರಂಭಿಸಲು ಹೊರಟಿರುವ ಈ ರಾಶಿಯ ಜನರು ಸುತ್ತಮುತ್ತಲಿನ ವಾತಾವರಣವನ್ನು ಗಮನದಲ್ಲಿಟ್ಟುಕೊಂಡು ವ್ಯಾಪಾರ ಮಾಡುವ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ. ಇದರಿಂದ ಲಾಭ ಬರುತ್ತದೆ. ದೊಡ್ಡ ಒಪ್ಪಂದಗಳನ್ನು ಪಡೆಯುವ ಬಲವಾದ ಸಾಧ್ಯತೆಯಿದೆ.

ಕನ್ಯಾ ರಾಶಿ - ಈ ರಾಶಿ ಜನರು ವೃತ್ತಿ ಕ್ಷೇತ್ರದಲ್ಲಿ ಸಕ್ರಿಯವಾಗಿರಬೇಕಾಗುತ್ತದೆ. ನಿಮ್ಮ ಅಜಾಗರೂಕತೆಯಿಂದ ಕೈಗೆ ಬರುವ ಅವಕಾಶವೂ ಕೈ ತಪ್ಪಬಹುದು. ಕೋಪ, ಒತ್ತಡಕ್ಕೆ ಒಳಗಾಗುವಿರಿ.

ತುಲಾ ರಾಶಿ- ಈ ರಾಶಿಯ ಜನರು ನಿರಾಶೆ ಅನುಭವಿಸಬಹುದು. ವಿದ್ಯಾರ್ಥಿಗಳು ವಿದ್ಯಾಭ್ಯಾಸದತ್ತ ಗಮನಹರಿಸಿ. ಕುಟುಂಬ ಮತ್ತು ಸಂಗಾತಿಯೊಂದಿಗೆ ಸಮಯ ಕಳೆಯಲು ಅವಕಾಶವಿರುತ್ತದೆ,

ವೃಶ್ಚಿಕ ರಾಶಿ - ಈ ರಾಶಿಯ ಜನರು ಕೆಲಸದಲ್ಲಿ ನಿರ್ಲಕ್ಷ್ಯ ಮಾಡಬಾರದು. ಮನಸ್ಸಿನಲ್ಲಿ ಭಯ ಇರುತ್ತದೆ, ಯುವಕರು ಈ ದಿನ ಶ್ರದ್ಧೆಯಿಂದ ಕೆಲಸವನ್ನು ಪೂರ್ಣಗೊಳಿಸಬೇಕು. ಭವಿಷ್ಯದಲ್ಲಿ ಯಶಸ್ಸನ್ನು ಪಡೆಯಲು, ಇಂದಿನಿಂದಲೇ ಕೆಲಸ ಮಾಡಲು ಪ್ರಾರಂಭಿಸಿ.

ಧನು ರಾಶಿ - ಧನು ರಾಶಿಯ ವ್ಯಾಪಾರಸ್ಥರ ಗಳಿಕೆಯಲ್ಲಿ ಹೆಚ್ಚಳವಾಗಲಿದೆ. ಅವಿವಾಹಿತರಿಗೆ ಕಂಕಣಬಲ ಕೂಡಿ ಬರಲಿದೆ. ಆರೋಗ್ಯದ ದೃಷ್ಟಿಯಿಂದ ದಿನವು ಸಾಮಾನ್ಯವಾಗಿದೆ,

ಮಕರ ರಾಶಿ- ಈ ರಾಶಿಯ ಜನರು ಕೆಲಸದ ಕ್ಷೇತ್ರದಲ್ಲಿ ಏರಿಳಿತಗಳು ಕಾಣುತ್ತಿದ್ದರು. ಆದರೆ ಇನ್ಮುಂದೆ ಆರ್ಥಿಕವಾಗಿ ಸದೃಢರಾಗಲಿದ್ದಾರೆ. ವಿದ್ಯಾರ್ಥಿಗಳು ಶಿಕ್ಷಣಕ್ಕೆ ಗಮನಕೊಡಬೇಕು.  

ಕುಂಭ ರಾಶಿ - ಕುಂಭ ರಾಶಿಯವರಿಗೆ ಸಂಬಳದಲ್ಲಿ ಹೆಚ್ಚಳದ ಸಾಧ್ಯತೆಗಳಿವೆ. ವ್ಯಾಪಾರ ಮಾಡುವವರು ಲಾಭ ಪಡೆಯುವ ಸಾಧ್ಯತೆಯಿದೆ. ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ಇದ್ದ ಜಗಳ ಇಂದು ಬಗೆಹರಿಯುವಂತಿದೆ.

ಮೀನ - ಈ ರಾಶಿಯ ಜನರು ಶಾಂತಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕು, ಇಂದು ನಿಮಗೆ ದಿನ ಉತ್ತಮವಾಗಿರುತ್ತದೆ. ಗೃಹಿಣಿಯರಿಗೆ ಇಂದು ಮನೆಯಲ್ಲಿ ಹೆಚ್ಚಿನ ಕೆಲಸ ಇರುತ್ತದೆ.

ಇದನ್ನೂ ಓದಿ: ಕೇರಳ ಸ್ಟೋರಿ ನಟಿ ಅದಾ ಶರ್ಮಾ ಆಸ್ಪತ್ರೆಗೆ ದಾಖಲು..! ಚೇತರಿಕೆಗಾಗಿ ಅಭಿಮಾನಿಗಳ ಪ್ರಾರ್ಥನೆ

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News