Top 5 Bikes: ಈ ಅಗ್ಗದ ಬೈಕ್ ಮುಂದೆ ಎಲ್ಲಾ ಬೈಕ್ ಗಳು ಫೇಲ್, ಎಲ್ಲ ಬೈಕ್ ಗಳನ್ನು ಹಿಂದಿಕ್ಕಿ ನಂ.1 ಪಟ್ಟ
Two Wheelers Sales: ಈ ಲೇಖನದಲ್ಲಿ ನಾವು ನಿಮಗೆ ಸೆಪ್ಟೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 5 ಬೈಕ್ ಗಳ ಕುರಿತು ಮಾಹಿತಿಯನ್ನು ನೀಡುತ್ತಿದ್ದೇವೆ. ಈ ಬಾರಿಯೂ ಕೂಡ ಹಿರೋ ಕಂಪನಿಯ ಒಂದು ಬೈಕ್ ಎಲ್ಲಾ ಬೈಕ್ ಗಳನ್ನು ಹಿಂದಿಕ್ಕಿ ನಂಬರ್ 1 ಪಟ್ಟ ಗಿಟ್ಟಿಸಿದೆ.
Top 5 Bikes in india: ಭಾರತದಲ್ಲಿ ದ್ವಿಚಕ್ರ ವಾಹನಗಳು ನಾಲ್ಕು ಚಕ್ರ ವಾಹನಗಳಿಗಿಂತ ಹೆಚ್ಚು ಮಾರಾಟವಾಗುತ್ತವೆ. ಪ್ರತಿ ತಿಂಗಳು ಭಾರತದಲ್ಲಿ ಲಕ್ಷಾಂತರ ಬೈಕ್‌ಗಳನ್ನು ಖರೀದಿಸಲಾಗುತ್ತದೆ. ಕಡಿಮೆ ಬೆಲೆಯಲ್ಲಿ ಉತ್ತಮ ಮೈಲೇಜ್ ನೀಡುವ ಹಾಗೂ ಉತ್ತಮ ಬಾಳಿಕೆ ಬರುವ ಬೈಕ್ ಗಾಗಿ ಹೆಚ್ಚಿನ ಗ್ರಾಹಕರು ಹುಡುಕಾಟ ನಡೆಸುತ್ತಾರೆ. ಅಂತಹ ಆಯ್ಕೆಗಳು ಸಂಖ್ಯೆಯಲ್ಲಿ ಬಹಳ ಸೀಮಿತವಾಗಿವೆ. ಗ್ರಾಹಕರು ಯಾವುದಾದರೂ ಒಂದು ಬೈಕ್ ಮೇಲೆ ಮುಗಿಬೀಳಲು ಕೂಡ ಇದೇ ಕಾರಣವಾಗಿದೆ. ಇಲ್ಲಿ ನಾವು ಸೆಪ್ಟೆಂಬರ್ ತಿಂಗಳಲ್ಲಿ ಮಾರಾಟವಾದ ಟಾಪ್ 5 ಬೈಕ್‌ಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಈ ಬಾರಿಯೂ ಹೀರೋ ಮೋಟೋಕಾರ್ಪ್ ನ ಒಂದು ಬೈಕ್ ಮುಂದೆ ಉಳಿದೆಲ್ಲ ಕಂಪನಿಗಳ ಬೈಕ್ ಗಳು ಫೇಲ್ ಆಗಿವೆ.
ಇದನ್ನೂ ಓದಿ-Diwali Gold purchase: ಧನತ್ರಯೋದಶಿ-ದೀಪಾವಳಿಗೆ ಚಿನ್ನ ಖರೀದಿಸಬೇಕೆ? ಮುಂದಿನ ವರ್ಷ ನಿಮಗೆ ಎಷ್ಟು ಲಾಭ?
ದೇಶದ ಅತಿ ಹೆಚ್ಚು ಮಾರಾಟವಾಗುವ ಬೈಕ್
ಹೀರೋ ಸ್ಪ್ಲೆಂಡರ್ ಸೆಪ್ಟೆಂಬರ್ 2022 ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಬೈಕ್ ಆಗಿ ಹೊರಹೊಮ್ಮಿದೆ. ಇದರ ಒಟ್ಟು 2,90,649 ಯುನಿಟ್‌ಗಳು ಮಾರಾಟವಾಗಿವೆ. ಇದು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮಾರಾಟವಾದ 2.77 ಲಕ್ಷ ಯುನಿಟ್‌ಗಳಿಗಿಂತ ಶೇ.4.82 ರಷ್ಟು ಹೆಚ್ಚಾಗಿದೆ. ಮಾಸಿಕ ಅಂಕಿಅಂಶಗಳನ್ನು ನೋಡಿದರೆ, ಪ್ರತಿದಿನ 9,688 ಯುನಿಟ್‌ಗಳು ಮಾರಾಟವಾಗುತ್ತಿವೆ. ಹೀರೋ ಸ್ಪ್ಲೆಂಡರ್‌ನ ಬೆಲೆ ರೂ 70,658 (ಎಕ್ಸ್-ಶೋ ರೂಂ, ದೆಹಲಿ) ನಿಂದ ಪ್ರಾರಂಭವಾಗುತ್ತದೆ ಎಂಬುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ.
ಇದನ್ನೂ ಓದಿ-Dhanatrayodashi 2022: ಹೊಸ ಬೈಕ್-ಕಾರ್ ಡಿಲೇವರಿ ಪಡೆಯಬೇಕೆ? ಶುಭ ಮುಹೂರ್ತ ಇಲ್ಲಿದೆ
ಟಾಪ್ 5 ಬೈಕ್‌ಗಳು ಇಲ್ಲಿವೆ
ಹೋಂಡಾ ಶೈನ್ ಎರಡನೇ ಸ್ಥಾನದಲ್ಲಿದ್ದು, ಬಜಾಜ್ ಪಲ್ಸರ್ ಮೂರನೇ ಸ್ಥಾನದಲ್ಲಿದೆ. ಕಳೆದ ತಿಂಗಳು, 1,45,193 ಯೂನಿಟ್ ಹೋಂಡಾ ಶೈನ್ ಬೈಕ್‌ಗಳು ಮತ್ತು 1,05,003 ಯುನಿಟ್ ಬಜಾಜ್ ಪಲ್ಸರ್ ಮಾರಾಟವಾಗಿದೆ. ಇದೇ ರೀತಿ ಹೀರೋ ಕಂಪನಿಯ ಎಚ್‌ಎಫ್ ಡಿಲಕ್ಸ್ ಮತ್ತು ಬಜಾಜ್ ಪ್ಲಾಟಿನಾ ಬೈಕ್‌ಗಳು ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ. ಅವುಗಳ ಒಟ್ಟು 93,596 ಯುನಿಟ್ ಗಳು ಮತ್ತು 73,354 ಯೂನಿಟ್ ಗಳು ಕ್ರಮವಾಗಿ ಮಾರಾಟವಾಗಿವೆ. ಕಳೆದ ವರ್ಷ ಸೆಪ್ಟೆಂಬರ್‌ಗೆ ಹೋಲಿಸಿದರೆ ಈ ಎರಡೂ ಬೈಕ್‌ಗಳ ಮಾರಾಟದಲ್ಲಿ ಕುಸಿತ ಕಂಡಿರುವುದು ಇಲ್ಲಿ ಉಲ್ಲೇಖನೀಯ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ