Traffic Rules Updates: ಚಪ್ಪಲಿ ಧರಿಸಿ ಬೈಕ್ ಅಥವಾ ಸ್ಕೂಟಿ ಚಲಾಯಿಸುವವರೇ ಹುಷಾರ್...! ಕಾರಣ ಇಲ್ಲಿದೆ
Traffic Rules & Regulations: ಮೋಟಾರು ವಾಹನ ಕಾಯ್ದೆಯ ಪ್ರಕಾರ, ಭಾರತದಲ್ಲಿ ವಾಹನ ಚಲಾಯಿಸುವಾಗ ಅಥವಾ ಚಾಲನೆ ಮಾಡುವಾಗ ನೀವು ಕೆಲವು ವಸ್ತುಗಳನ್ನು ಧರಿಸುವುದು ಕಡ್ಡಾಯ ಎಂದು ಹೇಳಲಾಗಿದೆ. ನಿಯಮಗಳ ಪ್ರಕಾರ, ದ್ವಿಚಕ್ರ ವಾಹನವನ್ನು ಚಾಲನೆ ಮಾಡುವಾಗ ಕ್ಲೋಸ್ಡ್ ಶೂಗಳನ್ನು ಧರಿಸುವುದು ಕಡ್ಡಾಯ ಎನ್ನಲಾಗಿದೆ.
Traffic Rules & Regulations - Transport Department: ರಸ್ತೆ ಸಂಚಾರಿ ನಿಯಮಗಳು ಮತ್ತು ಸುರಕ್ಷತೆಗಳ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಧೋರಣೆಗಳನ್ನು ತಳೆಯುತ್ತಿದೆ. ಅವುಗಳನ್ನು ಕಾರ್ಯಗತಗೊಳಿಸಲು, ವಾಹನ ತಯಾರಿಕೆಯ ಮಾರ್ಗಸೂಚಿಗಳು ಮತ್ತು ಇತರ ಅಂಶಗಳಲ್ಲಿ ಅನೇಕ ಬದಲಾವಣೆಗಳನ್ನು ಮಾಡಲಾಗುತ್ತಿದೆ, ಆದರೆ ಇಂದು ನಾವು ಜನರಿಗೆ ಕಡಿಮೆ ತಿಳಿದಿರುವ ಸಂಚಾರ ನಿಯಮಗಳ ಬಗ್ಗೆ ಮಾತನಾಡುತ್ತೇವೆ. ಈ ನಿಯಮ ನೀವು ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ಇದರಿಂದ ನೀವು ಯಾವುದೇ ನಿಯಮಗಳನ್ನು ಉಲ್ಲಂಘಿಸುವುದಿಲ್ಲ ಮತ್ತು ನೀವು ದಂಡವನ್ನು ಸಹ ಪಾವತಿಸಬೇಕಾಗಿಲ್ಲ. ಸವಾರಿ ಮಾಡುವಾಗ ಹೆಲ್ಮೆಟ್ ಧರಿಸುವುದು ಮತ್ತು ಅಂತಹ ಹಲವು ವಿಷಯಗಳ ಬಗ್ಗೆ ನಿಮಗೆ ಖಂಡಿತವಾಗಿಯೂ ತಿಳಿದಿರಬೇಕು, ಆದರೆ ನಿಮಗೆ ತಿಳಿದಿದೆಯೇ ಇರುವ ಸಂಗತಿ ಎಂದರೆ, ಕಾನೂನಿನ ಪ್ರಕಾರ, ಸ್ಲೀಪರ್ಸ್ ಅಥವಾ 'ಚಪ್ಪಲಿ'ಗಳನ್ನು ಧರಿಸಿ ದ್ವಿಚಕ್ರ ವಾಹನವನ್ನು ಓಡಿಸುವ ಅನುಮತಿ ನಿಮಗೆ ನೀಡಲಾಗಿಲ್ಲ. ಇಂತಹುದೇ ಕೆಲ ನಿಯಮಗಳ ಬಗ್ಗೆ ಇಂದು ನಾವು ಮಾಹಿತಿಯನ್ನು ಪಡೆದುಕೊಳ್ಳೋಣ
ಚಪ್ಪಲ್ ಧರಿಸಿ ವಾಹನ ಓಡಿಸುವುದು
ಮೋಟಾರು ವಾಹನ ಕಾಯ್ದೆಯ ಪ್ರಕಾರ, ಭಾರತದಲ್ಲಿ ವಾಹನ ಚಾಲನೆ ಮಾಡುವಾಗ ಅಥವಾ ಚಲಾಯಿಸುವಾಗ ನೀವು ಕೆಲವು ವಸ್ತುಗಳನ್ನು ಧರಿಸುವುದು ಕಡ್ಡಾಯವಾಗಿದೆ. ನಿಯಮಗಳ ಪ್ರಕಾರ, ದ್ವಿಚಕ್ರ ವಾಹನವನ್ನು ಚಾಲನೆ ಮಾಡುವಾಗ ಕ್ಲೋಸ್ಡ್ ಶೂಗಳನ್ನು ಧರಿಸುವುದು ಕಡ್ಡಾಯವಾಗಿದೆ. ಯಾರಾದರೂ ಈ ಕಾನೂನು ಉಲ್ಲಂಘಿಸಿದರೆ ಅವರಿಗೆ 1000 ರೂ. ಚಾಲನ್ ಬೀಳಲಿದೆ. ಇದರಂತೆಯೇ ವಾಹನ ಚಾಲನೆ ಮಾಡುವ ವ್ಯಕ್ತಿಯು ಪ್ಯಾಂಟ್‌ನೊಂದಿಗೆ ಶರ್ಟ್ ಅಥವಾ ಟಿ-ಶರ್ಟ್ ಅನ್ನು ಧರಿಸುವುದು ಕಡ್ಡಾಯವಾಗಿದೆ, ಈ ನಿಯಮವನ್ನು ಉಲ್ಲಂಘಿಸುವವರಿಗೆ ರೂ 2000 ದಂಡ ಬೀಳುತ್ತದೆ.
ಎರಡು ಡ್ರೈವಿಂಗ್ ಲೈಸೆನ್ಸ್ ಹೊಂದಿರುವುದು
ಒಬ್ಬ ವ್ಯಕ್ತಿಗೆ ಎರಡು ಡ್ರೈವಿಂಗ್ ಲೈಸೆನ್ಸ್ ಹೊಂದಿರುವುದು ಕಂಡುಬಂದರೆ, ಆ ವ್ಯಕ್ತಿಯು ದಂಡವನ್ನು ಪಾವತಿಸಬೇಕಾಗುತ್ತದೆ. ನೀವು ಎರಡು ವಾಹನ ಚಲಾವಣೆಯ ಪರವಾನಗಿಗಳನ್ನು ಹೊಂದಿರುವಿರಿ ಎಂದು ಕಂಡುಬಂದರೆ, ಈ ಅಪರಾಧಕ್ಕಾಗಿ ನಿಮಗೆ ಚಾಲನ್ ನೀಡಲಾಗುತ್ತದೆ.
ಇದನ್ನೂ ಓದಿ-ICSE 10th Result 2022: ICSE 10ನೇ ತರಗತಿಯ ಫಲಿತಾಂಶ ಪ್ರಕಟ.. ರಿಸಲ್ಟ್ ನೋಡಲು ಈ ಲಿಂಕ್ ಕ್ಲಿಕ್ ಮಾಡಿ
ಫೋನ್ ಬಳಕೆ
ವಾಹನ ಚಲಾಯಿಸುವಾಗ ಮಾತನಾಡುವುದು ಅಥವಾ ಫೋನ್ ನಲ್ಲಿ ಮಾತನಾಡುವುದು ದಂಡನೀಯ ಅಪರಾಧವಾಗಿದೆ. ಆದರೆ ಇದಕ್ಕೆ ಒಂದು ವಿನಾಯಿತಿ ಇದೆ, ಯಾವುದೇ ಸವಾರ/ಚಾಲಕ ತನ್ನ ವಾಹನವನ್ನು ಚಲಾಯಿಸುವಾಗ ತನ್ನ ಫೋನ್ ಅನ್ನು ನ್ಯಾವಿಗೇಷನ್ ಉದ್ದೇಶಕ್ಕಾಗಿ ಮಾತ್ರ ಬಳಸಬಹುದಾಗಿದೆ. ಆದರೆ, ಅದನ್ನು ಬಿಟ್ಟು ಬೇರೆ ಬೇರೆ ಯಾವುದಾದರು ಕೆಲಸಕ್ಕೆ ಬಳಸಿದರೆ ನೀವು ಖಂಡಿತವಾಗಿಯೂ ದಂಡವನ್ನು ಪಾವತಿಸಬೇಕಾಗಬಹುದು. ಈ ಕಾನೂನು ಉಲ್ಲಂಘಿಸುವವರಿಗೆ 5,000 ರೂ.ವರೆಗೆ ದಂಡ ವಿಧಿಸುವ ನಿಯಮವಿದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ