Viral Video: ಬೇರೆ ಮಹಿಳೆಯೊಂದಿಗೆ ಮಾತಿನಲ್ಲಿ ನಿರತ ವರ, ಹಿಂದಿನಿಂದ ಬಂದು ಹಣೆಗೆ ಸಿಂಧೂರ ಹಚ್ಚಿ ವಧುವನ್ನು ಕರೆದುಕೊಂಡು ಹೋದ ಬೇರೊಬ್ಬ ಯುವಕ

Funny Video: ಸಾಮಾಜಿಕ ಮಾಧ್ಯಮದಲ್ಲಿ ನಿತ್ಯ ಹಲವಾರು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಇತ್ತೀಚಿಗೆ ಒಂದು ಹಾಸ್ಯಭರಿತ ವಿಡಿಯೋ ಭಾರಿ ವೈರಲ್ ಆಗುತ್ತಿದ್ದು, ಈ ವಿಡಿಯೋದಲ್ಲಿ ವರ ಬೇರೊಬ್ಬ ಮಹಿಳೆಯ ಜೊತೆಗೆ ಮಾತನಾಡುತ್ತಿದ್ದು, ಬೇರೊಬ್ಬ ಯುವಕ ಬಂದು ವಧುವಿನ ಹಣೆಗೆ ಸಿಂಧೂರ ಹಚ್ಚಿ ವಧುವನ್ನು ಕರೆದುಕೊಂಡು ಅಲ್ಲಿನ ಕಾಲ್ಕಿತ್ತುತ್ತಾನೆ.  

Written by - Nitin Tabib | Last Updated : Jul 17, 2022, 08:37 PM IST
  • ನಿತ್ಯ ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ.
  • ಇವುಗಳಲ್ಲಿ ಕೆಲ ವೀಡಿಯೊಗಳು ಜನರಿಗೆ ಜ್ಞಾನ ನೀಡಿದರೆ, ಕೆಲ ವಿಡಿಯೋಗಳು ಅವರನ್ನು ಭಾವನಾತ್ಮಕವಾಗಿಸುತ್ತದೆ.
  • ಆದರೆ, ಕೆಲ ವಿಡಿಯೋಗಳನ್ನು ನೋಡಿದರೆ, ನೀವು ಹೊಟ್ಟೆ ಹಿಡಿದು ನಗುವಿರಿ.
Viral Video: ಬೇರೆ ಮಹಿಳೆಯೊಂದಿಗೆ ಮಾತಿನಲ್ಲಿ ನಿರತ ವರ, ಹಿಂದಿನಿಂದ ಬಂದು ಹಣೆಗೆ ಸಿಂಧೂರ ಹಚ್ಚಿ ವಧುವನ್ನು ಕರೆದುಕೊಂಡು ಹೋದ ಬೇರೊಬ್ಬ ಯುವಕ title=
Funny Video

Wedding Video: ನಿತ್ಯ ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇವುಗಳಲ್ಲಿ ಕೆಲ ವೀಡಿಯೊಗಳು ಜನರಿಗೆ ಜ್ಞಾನ ನೀಡಿದರೆ, ಕೆಲ ವಿಡಿಯೋಗಳು ಅವರನ್ನು ಭಾವನಾತ್ಮಕವಾಗಿಸುತ್ತದೆ. ಆದರೆ, ಕೆಲ ವಿಡಿಯೋಗಳನ್ನು ನೋಡಿದರೆ, ನೀವು ಹೊಟ್ಟೆ ಹಿಡಿದು ನಗುವಿರಿ. ಇತ್ತೀಚಿನ ದಿನಗಳಲ್ಲಿ ಅಂತಹ ವೀಡಿಯೊವೊಂದು ಭಾರಿ ವೈರಲ್ ಆಗುತ್ತಿದೆ, ಇದನ್ನು ವೀಕ್ಷಿಸಿದ ಬಳಿಕ ನಿಮ್ಮಿಂದಲೂ ಕೂಡ  ನಗು ತಡೆಯಲು ಸಾಧ್ಯವಾಗುವುದಿಲ್ಲ. ಈ ವೀಡಿಯೋದಲ್ಲಿ  ಮದುವೆ ಸಮಾರಂಭವೊಂದರಲ್ಲಿ ವರ ಬೇರೆಯವರೊಂದಿಗೆ ಮಾತನಾಡುವುದರಲ್ಲಿ ನಿರತರಾಗಿರುವುದನ್ನು ನೋಡಿ,  ಬೇರೊಬ್ಬ ಯುವಕ ಅದನ್ನೇ ಅವಕಾಶವನ್ನಾಗಿ ಬಳಸಿ ವಧುವನ್ನು ಓಡಿಸಿಕೊಂಡು ಹೋಗುತ್ತಾನೆ. ಇಷ್ಟೇ ಅಲ್ಲ, ವಧುವನ್ನು ಕರೆದುಕೊಂಡು ಹೋಗುವ  ಮೊದಲು, ಆ ಯುವಕ ವಧುವಿನ ಹಣೆಗೆ ಸಿಂಧೂರವನ್ನು ಕೂಡ ಹಚ್ಚುತ್ತಾನೆ.

ಇನ್ನೊಬ್ಬ ವ್ಯಕ್ತಿ ವಧುವಿನ ಹಣೆಗೆ ಐದು ಬಾರಿ ಸಿಂಧೂರವನ್ನಿಡುತ್ತಾನೆ
ವೈರಲ್ ಆಗಿರುವ ವಿಡಿಯೋದಲ್ಲಿ ಮದುವೆ ಸಮಾರಂಭ ನಡೆಯುತ್ತಿರುವುದನ್ನು ನೀವು ಗಮನಿಸಬಹುದು. ವಧು-ವರರು ವೇದಿಕೆಯ ಮೇಲೆ ಕುಳಿತಿದ್ದಾರೆ. ವರನ ವಯಸ್ಸು ವಧುಗಿಂತ ಹೆಚ್ಚಿರುವಂತೆ ತೋರುತ್ತದೆ, ಆದರೆ ವಧುವಿನ ವಯಸ್ಸು ತುಂಬಾ ಕಡಿಮೆಯಾಗಿದೆ. ವಧು ಸುಮ್ಮನೆ ತನ್ನ ತಲೆಯನ್ನು ತಗ್ಗಿಸಿ ಕುಲಿತುಕೊಂದಿದ್ದಾಳೆ. ಈ ಸಂದರ್ಭದಲ್ಲಿ ವರ ತನ್ನ ಪಕ್ಕದಲ್ಲಿ ಕುಳಿತಿರುವ ಮಹಿಳೆಯೊಂದಿಗೆ ಮಾತನಾಡುತ್ತಿದ್ದಾನೆ. ಈ ಸಂದರ್ಭದಲ್ಲಿ ನಡೆಯುವ ಘಟನೆ ನೀವು ಹೊಟ್ಟೆ ಹಿಡಿದು ನಗುವಂತೆ ಮಾಡುತ್ತದೆ. ಹೌದು, ವಾಸ್ತವದಲ್ಲಿ ವರನು ಇನ್ನೊಬ್ಬ ಮಹಿಳೆಯೊಂದಿಗೆ ಮಾತನಾದುವಲ್ಲಿ ನಿರತನಾಗಿದ್ದಾಗ, ಇನ್ನೊಬ್ಬ ವ್ಯಕ್ತಿಯು ವೇದಿಕೆಯ ಹಿಂದಿನಿಂದ ವಧುವಿನ ಕಡೆಗೆ ಬರುತ್ತಾನೆ. ಆ ವ್ಯಕ್ತಿ ತನ್ನ ಕೈಯಲ್ಲಿ ಸಿಂಧೂರವನ್ನು ಹಿಡಿದಿದ್ದಾನೆ. ಅವನು ವಧುವಿನ ಕುರ್ಚಿಯ ಹಿಂದೆ ನಿಂತು ಅವಳಿಗೆ ಹಿಂದಿನಿಂದ ಸಿಂಧೂರವನ್ನು ಹಚ್ಚಲು ಪ್ರಾರಂಭಿಸುತ್ತಾನೆ. ಆತ ವಧುವಿಗೆ ಐದು ಬಾರಿ ಸಿಂಧೂರ ಹಚ್ಚುತ್ತಾನೆ. ಆಘಾತಕಾರಿ ಸಂಗತಿಯೆಂದರೆ, ಇದೆಲ್ಲಾ ನಡೆಯುತ್ತಿರುವುದನ್ನು ವರ ಗಮನಿಸುವುದೇ ಇಲ್ಲ.

ಇದನ್ನೂ ಓದಿ-Viral Video: ಮೊಸಳೆಯನ್ನು ಕೊಂದು ಹಾಕಿದ ದೈತ್ಯ ಹಾವು.. ಭಯಾನಕ ಕಾದಾಟ ಕ್ಯಾಮೆರಾ ಕಣ್ಣಲ್ಲಿ ಸೆರೆ

ಇನ್ನೊಬ್ಬ ವ್ಯಕ್ತಿ ವಧುವನ್ನು ಕರೆದುಕೊಂಡು ಓದಿ ಹೋಗುತ್ತಾನೆ
ವೀಡಿಯೋದಲ್ಲಿ, ವಧುವಿಗೆ ಸಿಂಧೂರವನ್ನು ಅನ್ವಯಿಸಿದ ನಂತರ, ಆ ವ್ಯಕ್ತಿ ವಧುವಿನ ಕೈಯನ್ನು ಹಿಡಿದು ತನ್ನೊಂದಿಗೆ ಬರಲು ಸೂಚಿಸುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು. ವಧು ಕೂಡ ಆ ವ್ಯಕ್ತಿಯನ್ನು ಸೂಚನೆಗಳನ್ನು ಅನುಸರಿಸುತ್ತಿದ್ದು, ಅವಳು ಕೂಡ ಎದ್ದು ನಿಲ್ಲುತ್ತಾಳೆ ಮತ್ತು ಇಬ್ಬರೂ ವೇದಿಕೆಯ ಹಿಂದಿನಿಂದ ಸದ್ದಿಲ್ಲದೆ ಪರಾರಿಯಾಗುತ್ತಾರೆ. ಈ ವೀಡಿಯೊ ನೋಡಲು ಸಾಕಷ್ಟು ತಮಾಷೆಯಿಂದ ಕೂಡಿದೆ ಎಂಬುದು ಮಾತ್ರ ನಿಜ. 

ಇದನ್ನೂ ಓದಿ-Traffic Rules Updates: ಚಪ್ಪಲಿ ಧರಿಸಿ ಬೈಕ್ ಅಥವಾ ಸ್ಕೂಟಿ ಚಲಾಯಿಸುವವರೇ ಹುಷಾರ್...! ಕಾರಣ ಇಲ್ಲಿದೆ

ವಿಡಿಯೋ ನೋಡಿ-

ಜನರು ವೀಡಿಯೊವನ್ನು ಇಷ್ಟಪಡುತ್ತಾರೆ
ಈ ವೀಡಿಯೊವನ್ನು Instagram ನಲ್ಲಿ shitty.humours ಹೆಸರಿನ ಐಡಿ ಮೂಲಕ ಹಂಚಿಕೊಳ್ಳಲಾಗಿದೆ. ಇದರ ಮೇಲೆ ‘ಚಕ್ ಆನ್ ದಿ ಸ್ಪಾಟ್’ ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ. ಈ ತಮಾಷೆಯ ವಿಡಿಯೋವನ್ನು ಇದುವರೆಗೆ 1 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ ಮತ್ತು 11 ಸಾವಿರಕ್ಕೂ ಹೆಚ್ಚು ಜನರು ವೀಡಿಯೊವನ್ನು ಲೈಕ್ ಮಾಡಿದ್ದಾರೆ. ಈ ವಿಡಿಯೋಗೆ ನೆಟಿಜನ್‌ಗಳು ಭಾರಿ ಕಾಮೆಂಟ್ ಕೂಡ ಮಾಡುತ್ತಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News