Train stoppage cancelled in Bangalore: ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೇ ನಿಲ್ದಾಣದಲ್ಲಿ (Bangalore Cantonment Railway Station) ಕಾಮಗಾರಿ ಪ್ರಗತಿಯಲ್ಲಿರುವ ಹಿನ್ನಲೆಯಲ್ಲಿ ಇದೇ ಸೆಪ್ಟೆಂಬರ್ 20ರಿಂದ ಡಿಸೆಂಬರ್ 20ರವರೆಗೆ  ಈ ನಿಲ್ದಾಣದಿಂದ ಸಂಚರಿಸುವ ರೈಲು ಸೇವೆಳಗು ಬಂದ್‌ ಆಗಲಿವೆ ಎಂದು ನೈರುತ್ಯ ರೈಲ್ವೆ (South Western Railway)  ತಿಳಿಸಿದೆ. 


COMMERCIAL BREAK
SCROLL TO CONTINUE READING

ಈ ಕುರಿತಂತೆ ಪ್ರಕಟಣೆ ಹೊರಡಿಸುರುವ ನೈಋತ್ಯ ರೈಲ್ವೆ (South Western Railway), ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೇ ನಿಲ್ದಾಣದಲ್ಲಿ ಕಾಮಗಾರಿ ಹಿನ್ನಲೆಯಲ್ಲಿ ನಿಲ್ದಾಣದ 1 & 2ನೇ ಫ್ಲಾಟ್‌ ಫಾರ್ಮ್ ಸ್ಥಗಿತಗೊಳ್ಳಲಿದೆ.  ಹೀಗಾಗಿ ಬಂದು ಹೋಗುವ ರೈಲುಗಳ ನಿಲುಗಡೆ ರದ್ದಾಗಲಿದ್ದು ಒಟ್ಟು 92 ದಿನಗಳ ಕಾಲ 41 ರೈಲುಗಳ ನಿಲುಗಡೆ ಬಂದ್ ಆಗಲಿದೆ ಎಂದು ತಿಳಿಸಿದೆ. 


ಇದನ್ನೂ ಓದಿ- ವಂದೇ ಭಾರತ್ ಎಕ್ಸ್‌ಪ್ರೆಸ್: ಕಲ್ಪತರು ನಾಡಿನ ಜನರಿಗೆ ಗುಡ್ ನ್ಯೂಸ್ ನೀಡಿದ ರೈಲ್ವೇ ಇಲಾಖೆ!


ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೇ ನಿಲ್ದಾಣದಲ್ಲಿ ನಿಲುಗಡೆ ರದ್ದಾಗಲಿರುವ ರೈಲುಗಳ ವಿವರ ಕೆಳಕಂಡಂತಿದೆ (Train stoppage cancelled in Bangalore are as follows):- 
>> ಪ್ರತಿದಿನ ಸಂಚರಿಸುವ ಮೈಸೂರು- ಎಸ್‌ಎಂವಿಟಿ ಬೆಂಗಳೂರು ರೈಲು (06269) ಸೆ.19ರಿಂದ ಡಿ.19ರವರೆಗೆ ನಿಲುಗಡೆ ರದ್ದು
>> ವಾರಕ್ಕೊಮ್ಮೆ ಸಂಚರಿಸುವ ಮೈಸೂರು ರೇಣಿಗುಂಟ (22135) ರೈಲು ನಿಲುಗಡೆ ರದ್ದು
>> ಸೆ. 6 ದಿನಕ್ಕೊಮ್ಮೆ ಸಂಚರಿಸುವ ಕೆಎಸ್‌ಆರ್ ಬೆಂಗಳೂರು (KSR  Bengaluru)- ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ರದ್ದು
>> ಕೆಎಸ್‌ಆರ್ ಬೆಂಗಳೂರು-ಎರ್ನಾಕುಲಂ ರೈಲು (12677)
>> ಪ್ರತಿದಿನದ ಕೆಎಸ್‌ಆರ್ ಬೆಂಗಳೂರು - ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ (12608),
>> ಮುರ್ಡೇಶ್ವರ- ಎಸ್ ಎಂವಿಟಿ ಬೆಂಗಳೂರು (16586),
>> ಕೆಎಸ್‌ಆರ್ ಬೆಂಗಳೂರು- ಮಾರಿಕುಪ್ಪಂ (06396),
>> ಕೆಎಸ್‌ಆರ್ ಬೆಂಗಳೂರು- ಶ್ರೀ ಸತ್ಯಸಾಯಿ ಪ್ರಶಾಂತಿನಿಲಯಂ (06515),
>> ಮೈಸೂರು-ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ (06515),
>>  ಕೆಎಸ್‌ಆರ್ ಬೆಂಗಳೂರು- ಕೋಲಾರ (06387),
>> ಕೆಎಸ್‌ಆರ್ ಬೆಂಗಳೂರು- ಭುವನೇಶ್ವರ (18464)
>>  ಸೆ.20ರಿಂದ ಡಿ.20ರವರೆಗೆ ನಿಲುಗಡೆ ರದ್ದು
>> ಕೆಎಸ್‌ಆರ್ ಬೆಂಗಳೂರು - ಜೋಳಪಟ್ಟಿ (06551),
>> ಕೆಎಸ್‌ಆರ್ ಬೆಂಗಳೂರು - ವೈಟ್‌ಫೀಲ್ಡ್ (01765)
>> ಕೆಎಸ್‌ಆರ್ ಬೆಂಗಳೂರು - ಬಂಗಾರಪೇಟೆ (06561/06389), 
>> ಕೆಎಸ್‌ಆರ್ ಬೆಂಗಳೂರು - ಕುಪ್ಪಂ (06529) 01775),
>> ವಾರಕ್ಕೆ ಎರಡು ಬಾರಿ ಮೈಸೂರು-ಜೈಪುರ (12975) ರೈಲು ಸೆ. 21 ರಿಂದ ಡಿ.19.
>> ಮೈಸೂರು- ಕೂಚುವೇಲಿ (16315), ಮೈಸೂರು- ಕಾಚಿಗುಡ (12786),
 ಕೆಎಸ್‌ಆರ್ ಬೆಂಗಳೂರು- ಧರ್ಮಪುರಿ, ಕೆಎಸ್‌ಆರ್ ಬೆಂಗಳೂರು- ನವದೆಹಲಿ (12627), 
>> ಕೆಎಸ್‌ಆರ್ ಬೆಂಗಳೂರು- ಸಿಎಸ್‌ಎಂಟಿ ಮುಂಬೈ (1302), 
>> ಬೆಂಗಳೂರು ದೇಬ್ ನಾಂದೇಡ್ (16593) ಸೆ.20 ರಿಂದ ಡಿ.20 ನಿಲುಗಡೆ ರದ್ದುಗೊಳಿಸಲಾಗಿದೆ. 


ಇದನ್ನೂ ಓದಿ- ಯಶವಂತಪುರ ನಿಲ್ದಾಣದ ಪ್ಲಾಟ್​ಫಾರಂಗಳು ಒಂದು ತಿಂಗಳು ಬಂದ್: ಭಾಗಶಃ ರದ್ದಾದ ರೈಲುಗಳ ವಿವರ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.