Viral News: ರಸ್ತೆಗಳಲ್ಲಿ ಟ್ರಕ್‌ಗಳು ಹಾದು ಹೋಗುವುದನ್ನು ನೀವು ನೋಡಿರಬೇಕು. ಟ್ರಕ್‌ಗಳು ಹಾಳಾಗುವುದನ್ನು ಸಹ ನೀವು ನೋಡಿರಬೇಕು. ಆದರೆ, ಟ್ರಕ್‌ಗಳಲ್ಲಿ ಸರಕುಗಳು ಮಾತ್ರ ಲೋಡ್ ಮಾಡಲಾಗುತ್ತದೆ ಎಂಬುದು ಜನಸಾಮಾನ್ಯರ ಭಾವನೆ. ಆದರೆ ಇದು ಪ್ರತಿ ಬಾರಿ ಈ ರೀತಿ ಸಂಭವಿಸುವುದಿಲ್ಲ. ಮುಂದೆ ಸಾಗುತ್ತಿರುವ ಟ್ರಕ್ ನಲ್ಲಿ ಕೋಟ್ಯಾಂತರ ಹಣ ಇರಬಹುದು ಎಂಬುದನ್ನೂ ನೀವೆಂದಾದರೂ ಊಹಿಸಿದ್ದೀರಾ? ಹೌದು, ತಮಿಳುನಾಡಿನಲ್ಲಿ ಇಂತಹದೊಂದು ಪ್ರಕರಣ ಬೆಳಕಿಗೆ ಬಂದಿದೆ. ಚೆನ್ನೈನಲ್ಲಿ ಟ್ರಕ್ ಒಂದರಲ್ಲಿ 535 ಕೋಟಿ ರೂ. ಪತ್ತೆಯಾಗಿದ್ದು. ಟ್ರಕ್ ನಡುರಸ್ತೆಯಲ್ಲಿಯೇ ಬ್ರೇಕ್ ಡೌನ್ ಆಗಿದೆ. 


COMMERCIAL BREAK
SCROLL TO CONTINUE READING

ಈ ಬಗ್ಗೆ ಕ್ರೋಮ್‌ಪೇಟೆ ಪೊಲೀಸರಿಗೆ ಮಾಹಿತಿ ಸಿಕ್ಕಾಗ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಪೊಲೀಸರಿಗೆ ದೊರೆತ ಮಾಹಿತಿಯಲ್ಲಿ 535 ಕೋಟಿ ರೂ.ಗಳನ್ನು ಹೊತ್ತು ವಿಲ್ಲುಪುರಂ ಕಡೆಗೆ ಹೋಗುತ್ತಿದ್ದ ಟ್ರಕ್ ಕೆಟ್ಟು ನಿಂತಿದೆ ಎಂದು ಹೇಳಲಾಗಿದೆ. ಅದಕ್ಕೆ ಪೊಲೀಸ್ ರಕ್ಷಣೆ ಒದಗಿಸಬೇಕು ಎಂಬ ಸೂಚನೆ ನೀಡಲಾಗಿದೆ.


ವಿಷಯ ತಿಳಿದು ಸ್ಥಳದಲ್ಲಿ ಜನಸಾಗರವೇ ನೆರೆದಿತ್ತು
ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಸ್ಥಳದಲ್ಲಿ ಟ್ರಕ್ ನಿಂತಿರುವುದನ್ನು ಗಮನಿಸಿದ್ದಾರೆ ಮತ್ತು ಜನರು ಗುಂಪುಗೂಡಲು ಪ್ರಾರಂಭಿಸಿದ್ದಾರೆ. ಪೊಲೀಸರು ಅಲ್ಲಿಗೆ ತೆರಳಿ ವಾಹನದಲ್ಲಿದ್ದವರನ್ನು ವಿಚಾರಣೆ ನಡೆಸಿ ಸಂಪೂರ್ಣ ಮಾಹಿತಿ ಕಲೆಹಾಕಿದ್ದಾರೆ. ಟ್ರಕ್ ಸುತ್ತ ನೆರೆದಿದ್ದ ಜನರನ್ನು ಅದನ್ನು ನೋಡಿ ತಮ್ಮದೇ ಆದ ಊಹಾಪೋಹಗಳನ್ನು ಮಾಡುವಲ್ಲಿ ನಿರತರಾಗಿದ್ದಾರೆ. 


ಇದನ್ನೂ ಓದಿ-


ಮೆಕ್ಯಾನಿಕ್ ನಿಂದ ಟ್ರಕ್ ಸರಿಪಡಿಸಲು ಸಾಧ್ಯವಾಗಿಲ್ಲ
ಪೊಲೀಸ್ ತಂಡದೊಂದಿಗೆ ತಾಂಬರಂನ ಸಹಾಯಕ ಆಯುಕ್ತ ಶ್ರೀನಿವಾಸನ್ ಕೂಡ ಸ್ಥಳದಲ್ಲಿ ಹಾಜರಿದ್ದರು. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನ ನಗದು ತುಂಬಿಕೊಂಡು ಚೆನ್ನೈನಿಂದ ಎರಡು ಟ್ರಕ್‌ಗಳು ಹೊರಟಿವೆ ಎಂಬ ಮಾಹಿತಿ ಸಿಕ್ಕಿದೆ. ದಾರಿಯಲ್ಲಿ ಟ್ರಕ್‌ನ ಎಂಜಿನ್ ಬ್ರೇಕ್ ಡೌನ್ ಆಗಿದೆ. ಇದನ್ನು ನೋಡಿದ ಜನ ಗುಂಪು ಗುಂಪಾಗಿ ಸೇರತೊಡಗಿದ್ದಾರೆ.


ಇದನ್ನೂ ಓದಿ-


ಮಾಹಿತಿ ಪ್ರಕಾರ ಟ್ರಕ್‌ನಿಂದ ಹೊಗೆ ಬರುತ್ತಿತ್ತು. ಪರಿಶೀಲಿಸಿದಾಗ ಎಂಜಿನ್‌ನಲ್ಲಿ ಸಮಸ್ಯೆ ಇರುವುದು ಕಂಡುಬಂದಿದೆ. ಜನಸಂದಣಿ ಹೆಚ್ಚುತ್ತಿರುವುದನ್ನು ಕಂಡ ಪೊಲೀಸರು ಎರಡೂ ಟ್ರಕ್‌ಗಳನ್ನು ಸಂಕೀರ್ಣಕ್ಕೆ ಕೊಂಡೊಯ್ದರು. ಇಂಜಿನ್ ಸರಿಪಡಿಸಲು ಮೆಕ್ಯಾನಿಕ್ ಅನ್ನು ಕರೆಯಿಸಲಾಗಿದೆ.  ಆದರೆ ಅವರು ಅದನ್ನು ಸರಿಪಡಿಸುವಲ್ಲಿ ಯಶಸ್ವಿಯಾಗಿಲ್ಲ. ಇದೀಗ ಎರಡೂ ಟ್ರಕ್‌ಗಳನ್ನು ಮತ್ತೊಂದು ವಾಹನಕ್ಕೆ ಕಟ್ಟಿ ಆರ್‌ಬಿಐಗೆ ಸಾಗಿಸಲಾಗಿದೆ. 


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ