Nandini Ghee For Tirupati Laddu: ತಿರುಪತಿ ತಿಮ್ಮಪ್ಪನ ಲಡ್ಡು ವಿವಾದ ಮುನ್ನೆಲೆಗೆ ಬಂದ ಬೆನ್ನಲ್ಲೇ ಪುನಃ ನಂದಿನಿ ತುಪ್ಪವನ್ನೇ ಲಡ್ಡು ತಯಾರಿಕೆಗೆ ಬಳಸಲು ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿದ್ದು, ಹೆಚ್ಚುವರಿ ನಂದಿನಿ ತುಪ್ಪಕ್ಕಾಗಿ ಟಿಡಿಟಿಯಿಂದ ಕೆಎಂಎಫ್‌ಗೆ  ಬೇಡಿಕೆ ಇಡಲಾಗಿದೆ.


COMMERCIAL BREAK
SCROLL TO CONTINUE READING

ತಿರುಪತಿ ದೇವಸ್ಥಾನದ ಆಡಳಿತ ಮಂಡಳಿಯು ತಿರುಪತಿ ತಿಮ್ಮಪ್ಪನ ಲಡ್ಡು ತಯಾರಿಕೆಗೆ ಪುನಃ ನಂದಿನಿ ತುಪ್ಪವನ್ನು ಬಳಸಲು ಆರಂಭಿಸಿರುವುದರಿಂದ ಕರ್ನಾಟಕದ ಕೆ‌ಎಮ್‌ಎಫ್‌ನ ನಂದಿನಿ ತುಪ್ಪಕ್ಕೆ ಭಾರೀ ಬೇಡಿಕೆ ಹೆಚ್ಚಾಗಿದೆ. 3 ತಿಂಗಳಿಗೆ 350 ಟನ್‌ ತುಪ್ಪ ನೀಡುವಂತೆ ಕೆಎಂಎಫ್‌ನೊಂದಿಗೆ ಟಿ‌ಟಿ‌ಡಿ ಒಪ್ಪಂದ ಮಾಡಿಕೊಂಡಿದೆ. 


ಇದನ್ನೂ ಓದಿ- BPL Card Cancel: ಅನರ್ಹ ಬಿ‌ಪಿ‌ಎಲ್ ಕಾರ್ಡ್‌ಗಳು ರದ್ದು, ಪಡಿತರ ಪಡೆಯದವರಿಗೂ ಶಾಕ್


ಟಿ‌ಟಿ‌ಡಿಗೆ ಸಪ್ಲೈ ಆಗೋ ನಂದಿನಿ ತುಪ್ಪಕ್ಕೆ ಹೈ ಸೆಕ್ಯುರಿಟಿ! 
ಜೊತೆಗೆ ತಿರುಪತಿಯ ಲಡ್ಡು ತಯಾರಿಕೆಯಲ್ಲಿ ಬಳಸುವ ತುಪ್ಪವನ್ನು ಹಾಳು ಮಾಡದಂತೆ ಹೈ ಸೆಕ್ಯೂರಿಟಿಗೆ ಕೆ‌ಎಮ್‌ಎಫ್ ಸಜ್ಜಾಗಿದೆ. 
ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು  ನಿರ್ದೇಶನದ ಮೇರೆಗೆ, ಟಿಟಿಡಿಗೆ ಕಳುಹಿಸಲಾಗುವ ನಂದಿನಿ ತುಪ್ಪಕ್ಕೆ ಹೈ ಸೆಕ್ಯೂರಿಟಿಯನ್ನು ನೀಡಲಾಗುತ್ತಿದೆ. 


ಇದನ್ನೂ ಓದಿ- IRCTC: ತತ್ಕಾಲ್ ಕನ್ಫರ್ಮ್ ರೈಲ್ವೇ ಟಿಕೆಟ್‌ಗಳನ್ನು ಬುಕ್ ಮಾಡಲು ಸಿಂಪಲ್ ಟ್ರಿಕ್ಸ್, ನೀವೂ ಪ್ರಯತ್ನಿಸಿ ನೋಡಿ!


ತಿರುಪತಿ ಲಡ್ಡುನಲ್ಲಿ ಕಲಬೆರೆಕೆ ವಿವಾದ ಬೆನ್ನಲ್ಲೇ ನಂದಿನಿ ತುಪ್ಪದಲ್ಲಿ ಕಲಬೆರೆಕೆ ಆಗದಂತೆ ಮುನ್ನೆಚ್ಚರಿಕೆ ವಹಿಸಲು ನಂದಿನಿ ತುಪ್ಪ ಸಾಗಿಸುವ ಟ್ಯಾಂಕರ್‌ಗಳಿಗೆ  ಜಿಪಿಎಸ್​ ಟ್ರ್ಯಾಕ್, ಎಲೆಕ್ಟ್ರಿಕ್​ ಡೋರ್ ಅಳವಡಿಕೆ ಮಾಡಲಾಗುತ್ತಿದೆ. ಲ್ಯಾಬ್​ ಟೆಸ್ಟ್​ ನಂತರ ನಂದಿನ ತುಪ್ಪ ಪೂರೈಕೆ ಮಾಡಲಾಗುವುದು ಎಂದು ಕೆ‌ಎಮ್‌ಎಫ್  ವ್ಯವಸ್ಥಾಪಕ ನಿರ್ದೇಶಕ ಎಂ ಕೆ ಜಗದೀಶ್ ಹೇಳಿಕೆ ನೀಡಿಕೆ ನೀಡಿದ್ದಾರೆ. 


ಟ್ಯಾಂಕರ್ ಒಮ್ಮೆ ಲಾಕ್ ಆದ್ರೆ ತಿರುಪತಿಯಲ್ಲೆ ಓಪನ್: 
ಇನ್ನೂ ಲಡ್ಡು ಪ್ರಸಾದದಲ್ಲಿ ಕಲಬೆರಕೆಯನ್ನು ತಡೆಯುವ ಉದ್ದೇಶದಿಂದ ತುಪ್ಪದ ಟ್ಯಾಂಕರ್ ಕೆ‌ಎಮ್‌ಎಫ್‌ನಲ್ಲಿ ಒಮ್ಮೆ ಲಾಕ್ ಆದ್ರೆ ಇದನ್ನು ತಿರುಪತಿಯಲ್ಲೇ ತೆರೆಯುವಂತೆ ವ್ಯವಸ್ಥೆ ಮಾಡಲಾಗಿದೆ. ವಿಶೇಷವೆಂದರೆ 
ಟಿಟಿಡಿಯಲ್ಲಿ ಈ ತುಪ್ಪದ ಟ್ಯಾಂಕರ್ ಓಪನ್ ಮಾಡಬೇಕು ಅಂದ್ರೆ ಓಟಿಪಿ ಕಡ್ಡಾಯವಾಗಿರುತ್ತದೆ. ಟ್ಯಾಂಕರ್ ನಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ್ರೆ  ಕೆಎಂಎಫ್ ಅಧಿಕಾರಿಗಳಿಗೆ ಒಟಿಪಿ ಬರುತ್ತದೆ. ಅವರು ನೀಡಿದ ಓಟಿಪಿಯನ್ನು ನಮೂದಿಸಿದರೆ ಮಾತ್ರ ಟ್ಯಾಂಕರ್ ಓಪನ್ ಆಗುತ್ತದೆ ಎಂದು ತಿಳಿದುಬಂದಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.