BPL Card Cancel: ಅನರ್ಹ ಬಿ‌ಪಿ‌ಎಲ್ ಕಾರ್ಡ್‌ಗಳು ರದ್ದು, ಪಡಿತರ ಪಡೆಯದವರಿಗೂ ಶಾಕ್

BPL Card Cancel: ವಾರ್ಷಿಕವಾಗಿ 1.20 ಲಕ್ಷ ಆದಾಯ ಹೊಂದಿರುವವರು ಬಡತನ ರೇಖೆಗಿಂತ ಕೆಳಗಿರುವವರ ಪಟ್ಟಿಯಲ್ಲಿ ಇರುವಂತಿಲ್ಲ ಎಂಬ ನಿಯಮವಿದೆ.‌ ಆದರೆ, ಸರ್ಕಾರದ ಕಣ್ತಪ್ಪಿಸಿ ಬಿಪಿಎಲ್ ಕಾರ್ಡ್ ಹೊಂದಿದ್ದವರಿಗೆ ಆಹಾರ ಇಲಾಖೆ ಬಿಸಿ ಮುಟ್ಟಿಸಿದೆ. 

Written by - Yashaswini V | Last Updated : Sep 18, 2024, 03:48 PM IST
  • ಸಿರಿವಂತರು, ಸರ್ಕಾರಿ ನೌಕರರ ಬಳಿಯೂ ಬಿಪಿಎಲ್ ಕಾರ್ಡ್
  • 18 ಸಾವಿರಕ್ಕೂ ಅಧಿಕ‌ ಮಂದಿ ಬಳಿ ಅಕ್ರಮ ಬಿಪಿಎಲ್ ಕಾರ್ಡ್
  • ಆಹಾರ ಇಲಾಖೆ ಕಾರ್ಯಾಚರಣೆ ವೇಳೆ ಅಕ್ರಮ ಬಿಪಿಎಲ್ ಕಾರ್ಡ್ ಗಳು ಬೆಳಕಿಗೆ
BPL Card Cancel: ಅನರ್ಹ ಬಿ‌ಪಿ‌ಎಲ್ ಕಾರ್ಡ್‌ಗಳು  ರದ್ದು,  ಪಡಿತರ ಪಡೆಯದವರಿಗೂ ಶಾಕ್ title=

BPL Card Cancel: ಆದಾಯ ಇದ್ದಾಗಲೂ, ತಾನು ಸರ್ಕಾರಿ ನೌಕರನಾಗಿದ್ದರೂ ಬಿಪಿಎಲ್ ಕಾರ್ಡ್ ಹೊಂದಿದ್ದ ಬರೋಬ್ಬರಿ 18,292 ಅನರ್ಹ ಪಡಿತರ ಕಾರ್ಡ್ ಗಳನ್ನು ರದ್ದುಗೊಳಿಸಲಾಗಿದೆ. 

ವಾರ್ಷಿಕವಾಗಿ 1.20 ಲಕ್ಷ ಆದಾಯ ಹೊಂದಿರುವವರು ಬಡತನ ರೇಖೆಗಿಂತ ಕೆಳಗಿರುವವರ ಪಟ್ಟಿಯಲ್ಲಿ ಇರುವಂತಿಲ್ಲ ಎಂಬ ನಿಯಮವಿದೆ.‌ ಆದರೆ, ಸರ್ಕಾರದ ಕಣ್ತಪ್ಪಿಸಿ ಬಿಪಿಎಲ್ ಕಾರ್ಡ್ ಹೊಂದಿದ್ದವರಿಗೆ ಆಹಾರ ಇಲಾಖೆ ಬಿಸಿ ಮುಟ್ಟಿಸಿದ್ದು ಬಿಪಿಎಲ್ ಕಾರ್ಡ್ ಹೊಂದಿದ್ದವರಲ್ಲಿ ಸರ್ಕಾರಿ ನೌಕರರು ಇರುವುದು ವಿಪರ್ಯಾಸ ಎಂದು ಹೇಳಿದೆ. 

ಇದನ್ನೂ ಓದಿ- ಎರಡ್ಮೂರು ತಿಂಗಳ ಗೃಹಲಕ್ಷ್ಮೀ ಯೋಜನೆಯ ಬಾಕಿ ಹಣಕ್ಕೆ ಬೀಳುತ್ತಾ ಕತ್ತರಿ: ವದಂತಿ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ..! 

ಎಷ್ಟು ಕಾರ್ಡ್ ರದ್ದು..? 
1.20 ಲಕ್ಷ ರೂ. ವಾರ್ಷಿಕ ಆದಾಯ ಹೊಂದಿದ್ದ 11,753 ಬಿಪಿಎಲ್  ಪಡಿತರ ಚೀಟಿಗಳನ್ನು ರದ್ದು ಮಾಡಲಾಗಿದೆ. ಇನ್ನು, 69 ಮಂದಿ ಸರ್ಕಾರಿ ನೌಕರರು ಕೂಡ ಬಿಪಿಎಲ್ ಕಾರ್ಡ್ ಹೊಂದಿದ್ದರು. ಇವರ ಕಾರ್ಡ್ ಗಳನ್ನು ಕೂಡ ರದ್ದು ರದ್ದು ಮಾಡಲಾಗಿದೆ‌ ಎಂದು ಚಾಮರಾಜನಗರ ಆಹಾರ ಇಲಾಖೆಯಿಂದ ಮಾಹಿತಿ ಲಭ್ಯವಾಗಿದೆ. 

ಇದನ್ನೂ ಓದಿ- ಕತ್ತೆಗೂ ಬಂತು ಒಳ್ಳೆ ಕಾಲ, ಕತ್ತೆ ಖರೀದಿಗೆ ಮುಗಿ ಬಿದ್ದ ಜನ..

ಪಡಿತರ ಪಡೆಯದವರಿಗೂ ಶಾಕ್: 
6 ತಿಂಗಳ ಕಾಲ ಪಡಿತರ ಪಡೆಯದವರಿಗೂ ಆಹಾರ ಇಲಾಖೆ ಶಾಕ್ ಕೊಟ್ಟಿದ್ದು 2084 ಬಿಪಿಎಲ್ ಕಾರ್ಡ್ ಗಳನ್ನು ಅಮಾನತು ಪಡಿ ಇವುಗಳನ್ನು ಎಪಿಎಲ್ ಆಗಿ ಪರಿವರ್ತನೆ ಮಾಡಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News