Bank Union Strike : ಈ ಎರಡು ದಿನ ನಡೆಯುವುದಿಲ್ಲ ಬ್ಯಾಂಕ್ ವ್ಯವಹಾರ, ಮೊದಲೇ ಪೂರೈಸಿಕೊಳ್ಳಿ ಎಲ್ಲಾ ಕೆಲಸ
ಫೆಬ್ರವರಿಯಲ್ಲಿ ಬ್ಯಾಂಕ್ ಮುಷ್ಕರವೂ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಎರಡು ದಿನಗಳವರೆಗೆ ಬ್ಯಾಂಕ್‌ಗಳ ಕೆಲಸ ಸ್ಥಗಿತಗೊಳ್ಳಲಿದೆ.
ನವದೆಹಲಿ : Bank Union Strike: ಆರ್‌ಬಿಐ (RBI) ಬಿಡುಗಡೆ ಮಾಡಿದ ಫೆಬ್ರವರಿಯ ರಜಾ ದಿನಗಳ ಪಟ್ಟಿಯ (February Holiday list) ಪ್ರಕಾರ, ಈ ತಿಂಗಳು ಒಟ್ಟು 9 ದಿನಗಳವರೆಗೆ ಬ್ಯಾಂಕಿಗೆ ರಜೆ ಇರಲಿದೆ. ಆದರೆ ಇದು ಎರಡನೇ ಶನಿವಾರ , ನಾಲ್ಕನೇ ಶನಿವಾರ , ಭಾನುವಾರದ ರಜೆಗಳನ್ನು ಕೂಡಾ ಒಳಗೊಂಡಿದೆ. ಇದರ ಮಧ್ಯೆ, ಫೆಬ್ರವರಿಯಲ್ಲಿ ಬ್ಯಾಂಕ್ ಮುಷ್ಕರವೂ (Bank Strike) ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಎರಡು ದಿನಗಳವರೆಗೆ ಬ್ಯಾಂಕ್‌ಗಳ ಕೆಲಸ ಸ್ಥಗಿತಗೊಳ್ಳಲಿದೆ.
ದೇಶಾದ್ಯಂತ ಬ್ಯಾಂಕ್ ಮುಷ್ಕರ :
ದೇಶದ ಸರ್ಕಾರಿ ಬ್ಯಾಂಕ್ ನೌಕರರು (Bank employees) ಫೆಬ್ರವರಿ 23 ಮತ್ತು 24 ರಂದು ಎರಡು ದಿನಗಳ ಕಾಲ ಬ್ಯಾಂಕ್ ಮುಷ್ಕರ (Bank Strike) ನಡೆಸಲಿದ್ದಾರೆ. ಈ ಮಾಹಿತಿಯನ್ನು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ನೀಡಿದೆ. ಬ್ಯಾಂಕ್‌ಗಳ ಖಾಸಗೀಕರಣ (Bank Privatisation) ವಿರೋಧಿಸಿ ಈ ಮುಷ್ಕರ ನಡೆಸಲಾಗುತ್ತಿದೆ.
ಇದನ್ನೂ ಓದಿ : ಜಿಯೋ ಬಳಕೆದಾರರಿಗೆ ಸಿಹಿಸುದ್ದಿ: ದಿನಕ್ಕೆ 1GB ಡೇಟಾ, ಉಚಿತ ಕರೆ ಇನ್ನೂ ಹೆಚ್ಚಿನ ಪ್ರಯೋಜನ ಪಡೆಯಿರಿ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitaraman) ಅವರು ಫೆಬ್ರವರಿ 1, 2021 ರಂದು ಮಂಡಿಸಿದ ಬಜೆಟ್‌ನಲ್ಲಿ ಎರಡು ಬ್ಯಾಂಕ್‌ಗಳ ಖಾಸಗೀಕರಣವನ್ನು ಘೋಷಿಸಿದ್ದರು. ಇದರ ಬೆನ್ನಲ್ಲೇ ಸರ್ಕಾರ ಬ್ಯಾಂಕ್ ಖಾಸಗೀಕರಣ (Bank Privatisation) ಸಿದ್ಧತೆಯನ್ನೂ ಆರಂಭಿಸಿದೆ.
ಮುಷ್ಕರಕ್ಕೆ ಕಾರಣವೇನು ?
ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (AIBOC) ಘೋಷಿಸಿತ್ತು. ಸರ್ಕಾರವು ಹೂಡಿಕೆಯನ್ನು ಕಡಿತಗೊಳಿಸಿದ ಬ್ಯಾಂಕುಗಳಲ್ಲಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ ಮತ್ತು ಬ್ಯಾಂಕ್ ಆಫ್ ಇಂಡಿಯಾ ಸೇರಿದೆ.
ಇದನ್ನೂ ಓದಿ : Arecanut Price Today: ರಾಜ್ಯದ ಮಾರುಕಟ್ಟೆಯಲ್ಲಿನ ಅಡಿಕೆ ಧಾರಣೆ ಇಲ್ಲಿದೆ ನೋಡಿ
ಖಾಸಗೀಕರಣದ ನಂತರ ನೌಕರರಿಗೆ ಏನಾಗುತ್ತದೆ?
ಮಾಧ್ಯಮ ವರದಿಗಳ ಪ್ರಕಾರ, ಖಾಸಗೀಕರಣದ ಮೊದಲು, ಈ ಬ್ಯಾಂಕುಗಳು ತಮ್ಮ ಉದ್ಯೋಗಿಗಳಿಗೆ ಆಕರ್ಷಕ ಸ್ವಯಂ ನಿವೃತ್ತಿ ಯೋಜನೆಯನ್ನು (VRS) ನೀಡಬಹುದು. ಅಂದರೆ, ಈ ಬ್ಯಾಂಕ್ ನ ಉದ್ಯೋಗಿಗಳಿಗೂ ಇದು ಆತಂಕದ ವಿಷಯವಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.