ಉಕ್ರೇನ್ - ರಷ್ಯಾ ಯುದ್ಧ ಪರಿಣಾಮ: ರಾಜ್ಯದಲ್ಲಿ ಗರಿಗೆದರಿದ ಹಸಿರು ಇಂಧನ ಕ್ಷೇತ್ರದಲ್ಲಿನ ಹೂಡಿಕೆ
ಉಕ್ರೇನ್ - ರಷ್ಯಾ ಯುದ್ಧದ ಪರಿಣಾಮವಾಗಿ ಈ ಬಾರಿಯ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಅತಿಹೆಚ್ಚು ಹೂಡಿಕೆಯಾಗಿದೆ ಎನ್ನಲಾಗಿದೆ.
ಬೆಂಗಳೂರು: ಉಕ್ರೇನ್ - ರಷ್ಯಾ ಯುದ್ಧದ ಪರಿಣಾಮವಾಗಿ ಈ ಬಾರಿಯ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಅತಿಹೆಚ್ಚು ಹೂಡಿಕೆಯಾಗಿದೆ ಎನ್ನಲಾಗಿದೆ.
ಈ ಕುರಿತಾಗಿ ಮಾತನಾಡಿದ ಕೈಗಾರಿಕೆ ಹಾಗೂ ವಾಣಿಜ್ಯ ಇಲಾಖೆ ಆಯುಕ್ತ ಗುಂಜನ್ ಕೃಷ್ಣಹಸಿರು ಹೈಡ್ರೋಜನ್ ಹಾಗೂ ಉಪ ಉತ್ಪನ್ನಗಳು ಕ್ಷೇತ್ರದಲ್ಲಿ 5 ಹೂಡಿಕೆ 1.57 ಕೋಟಿ ಮೊತ್ತಕ್ಕೆ ಅನುಮೋದನೆ ಸಿಕ್ಕಿದೆ. ಈ ವಲಯದಲ್ಲಿ ಹೆಚ್ಚು ಹೂಡಿಕೆಗೆ ಉದ್ಯಮಿಗಳು ಆಸಕ್ತಿಯನ್ನು ತೋರಿಸಲು ಕಾರಣ ಉಕ್ರೇನ್ ಹಾಗೂ ರಷ್ಯಾ ಯುದ್ಧದ ಪರಿಣಾಮ ಉದ್ಯಮಿಗಳು ಹಸಿರು ಇಂಧನ ಕ್ಷೇತ್ರದಲ್ಲಿ ಹೂಡಿಕೆಗೆ ಹೆಚ್ಚು ಆಸಕ್ತಿ ತೋರಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: 'ಕಬ್ಜ' ಮೇಲೆ ಬಾಲಿವುಡ್ ಕಣ್ಣು : ಉಪ್ಪಿ, ಕಿಚ್ಚನ ಸಿನಿಮಾಗೆ ಹಿಂದಿ ಮಂದಿ ವೆಟಿಂಗ್ ..!
ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಮಾತನಾಡಿ ನವೀಕರಿಸಬಹುದಾದ ಇಂಧನ 72 ಯೋಜನೆಗಳಿಗೆ 29,397 ಲಕ್ಷಕೋಟಿ ಮೊತ್ತಕ್ಕೆ ಅನುಮೋದನೆ ಸಿಕ್ಕಿದೆ ಅಲ್ಲದೆ 24 ಒಡಂಬಡಿಕೆಗೆ ಸಹಿ ಆಗಿದ್ದು, ಅದರ ಮೊತ್ತ 2.99 ಲಕ್ಷ ಕೋಟಿ. ಒಟ್ಟಾರೆಯಾಗಿ ಹಸಿರು ಇಂಧನ ಕ್ಷೇತ್ರದಲ್ಲಿ 105 ಯೋಜನೆಗಳಿಗೆ 6.14 ಲಕ್ಷ ಕೋಟಿ ಹೂಡಿಕೆ ಬಂದಿದೆ.ಈ ಬಾರಿಯ ಜಿಮ್ ನಲ್ಲಿ ಒಟ್ಟು 608 ಅನುಮೋದಿತ ಯೋಜನೆಗಳು ಹಾಗೂ 57 ಒಡಂಬಡಿಕೆಗಳು ಸೇರಿದಂತೆ ಒಟ್ಟು 9.8 ಲಕ್ಷ ಕೋಟಿ ಹೂಡಿಕೆ ಆಗಿದೆ ಎಂದು ಮುರುಗೇಶ್ ನಿರಾಣಿ ತಿಳಿಸಿದರು.
ಇದನ್ನೂ ಓದಿ: Viral Video: ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡಿದ ಚಿರತೆ! ಭಯಾನಕ ವಿಡಿಯೋ ಹೇಗಿದೆ ನೋಡಿ
ಇಷ್ಟೇ ಅಲ್ಲದೆ,ಜಿಮ್ ನಲ್ಲಿ ಅದಾನಿ ಸಂಸ್ಥೆ ಸಿಮೆಂಟ್, ಇಂಧನ, ಅನಿಲ ಸಂಪರ್ಕ, ಅಡುಗೆ ಎಣ್ಣೆ, ಸಾರಿಗೆ ಸೇರಿದಂತೆ ವಿವಿಧ ವಲಯಗಳನ್ನು ಒಳಗೊಂಡು ಒಂದು ಲಕ್ಷ ಕೋಟಿ ಹೂಡಿಕೆ ಮಾಡಲಿದೆ ಎಂದು ಅದಾನಿ ಸಂಸ್ಥೆ ಘೋಷಿಸಿದೆ. ಜೆಎಸ್ ಡಬ್ಯೂ ಸ್ಟೀಲ್ ಹಾಗೂ ಪೇಂಟ್ ಹಾಗೂ ಸಿಮೆಂಟ್, ಹಸಿರು ಇಂಧನ ವಲಯದಲ್ಲಿ 57 ಸಾವಿರ ಕೋಟಿ ಹೂಡಿಕೆ ಮಾಡಲಿದೆ ಎಂದು ಘೋಷಣೆ ಮಾಡಿದೆ.ಈ ಬಾರಿ ಜಿಮ್ ವಿಶೇಷತೆ ಏನೆಂದರೆ ಹೂಡಿಕೆಯ ಶೇ 90% ಭಾಗ ಬೆಂಗಳೂರು ಹೊರತು ಪಡಿಸಿ ಇತರ ಜಿಲ್ಲೆಗಳಲ್ಲಿ ಆಗಿದೆ. ಇದು ಉತ್ತಮ ಬೆಳವಣಿಗೆ ಎಂದು ನಿರಾಣಿ ಅಭಿಪ್ರಾಯಪಟ್ಟರು.
ಉದ್ಯಮಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮೂಲಸೌಕರ್ಯ ಅಭಿವೃದ್ಧಿ ಮಾಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಶಿವಮೊಗ್ಗ ಹಾಸನ ವಿಜಯಪುರ ವಿಮಾನ ನಿಲ್ದಾಣ ಶೀಘ್ರ ಕಾರ್ಯಾಚರಣೆ ನಡೆಸಲಿದೆ. ಹೈವೇ ಅಭಿವೃದ್ಧಿಗೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಇದನ್ನೂ ಓದಿ: ಅಂತೂ ಇಂತೂ ಬೆಣ್ಣೆ ನಗರಿಯ ಜವಾರಿ ಹುಡುಗಿ ಅಧಿತಿಗೆ ಮದ್ವೆ ಫಿಕ್ಸ್...! ಲಗ್ನ ಪತ್ರ ಹೇಗಿದೆ ಗೊತ್ತಾ?
ಕಾರವಾರ ಹಾಗೂ ಮಂಗಳೂರು ಬಂದರು ಪಿಪಿಪಿ ಮಾಡಲ್ ನಲ್ಲಿ ಅಭಿವೃದ್ಧಿಯಾಗಲಿದೆ. ಇದರ ಜೊತೆಗೆ ಭಾರತ್ ಮಾಲಾ, ಸಾಗರದ ಮಾಲಾ - 2 ಯೋಜನೆ ಅಡಿಯಲ್ಲಿ ಪುಣೆ ರಾಷ್ಟ್ರೀಯ ಹೆದ್ದಾರಿ ಹಾಗೂ ಗೋವಾ ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಆಗಲಿದೆ. ಇವೆಲ್ಲವೂ ಕೈಗಾರಿಕೆಗಳಿಗೆ ಸಹಕಾರಿ ಆಗಲಿದೆ ಎಂದರು. ಪ್ರತಿಬಾರಿ ಹೂಡಿಕೆದಾರರ ಸಮಾವೇಶದಲ್ಲಿ ಘೋಷಣೆಯಾದ ಹೂಡಿಕೆ ಕಡಿಮೆ ಪ್ರಮಾಣದಲ್ಲಿ ಜಾರಿಗೊಳ್ಳುತ್ತಿತ್ತು. ಆದರೆ ಆಗಿರುವ ಒಡಂಬಡಿಕೆಯಲ್ಲಿ ಶೇ 70% ಜಾರಿಯಾಗುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.