Unclaimed Amount In Banks: ದೇಶದ ಹಲವರು ಬ್ಯಾಂಕ್ ಗಳು ಹಾಗೂ ವಿಮಾ ಕಂಪನಿಗಳ ಬಳಿ ವಾರಸುದಾರರೆ ಇಲ್ಲದ ಸುಮಾರು 50 ಸಾವಿರ ಕೋಟಿ ರೂ.ಗಳಿವೆ ಎಂದು ವರದಿಯಾಗಿದೆ. ಈ ಕುರಿತು ಖುದ್ದು ಸರ್ಕಾರವೇ ಸಂಸತ್ತಿಗೆ (Parliament) ಮಾಹಿತಿಯನ್ನು ನೀಡಿದೆ. ಒಂದು ಅಂದಾಜಿನ ಪ್ರಕಾರ, ಕೇವಲ 2020ರಲ್ಲಿ ಸುಮಾರು 5977 ಕೋಟಿ ರೂ.ಗಳು ಈ ರಾಶಿಗೆ ಸೇರ್ಪಡೆಯಾಗಿದೆ . ಅಂದರೆ, ಹಲವರು ಬ್ಯಾಂಕುಗಳಲ್ಲಿ ಹಣವಿಟ್ಟು ಮರೆತುಹೋದರೆ, ಲಕ್ಷಾಂತರ ಜನರು ಪಾಲಸಿ (No Claim Insurance Companies) ತೆಗೆದುಕೊಂಡು ಮರೆತುಹೋಗಿದ್ದಾರೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Google ಮೂಲಕ ಕುಳಿತಲ್ಲೇ ಸಂಪಾದಿಸಿ 50 ಸಾವಿರ ರೂಪಾಯಿ, ಮಾಡಬೇಕಾಗಿರುವುದು ಇಷ್ಟೇ


ಬ್ಯಾಂಕ್, ವಿಮಾ ಕಂಪನಿಗಳ ಬಳಿ ಇವೆ 50,000 ಕೋಟಿ ರೂ.ಗಳು 
ಈ ಕುರಿತು ಲೋಕಸಭೆಯಲ್ಲಿ ಕೇಳಲಾಗಿರುವ  ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ಹಣಕಾಸು ರಾಜ್ಯ ಸಚಿವರಾಗಿರುವ ಭಗವತ್ ಕರಾಡ್, ಮಾರ್ಚ್ 31, 2020 ರವರೆಗಿನ ರಿಸರ್ವ್ ಬ್ಯಾಂಕ್ ಅಂಕಿ-ಅಂಶಗಳ ಪ್ರಕಾರ, ದೇಶಾದ್ಯಂತದ ಬ್ಯಾಂಕುಗಳ ಬಳಿ ಇರುವ  24,356 ಕೋಟಿ ಮೊತ್ತಕ್ಕೆ ವಾರಸುದಾರದೆ (Funds Lyind Unclaimed) ಇಲ್ಲ ಎನ್ನಲಾಗಿದೆ. ಇನ್ಸೂರೆನ್ಸ್ ಕಂಪನಿಗಳ ಬಳಿಯೂ ಕೂಡ ಆರ್ಥಿಕ ವರ್ಷ 2020ರಲ್ಲಿ 8.1 ಕೋಟಿ ರೂ.ಗಳು ಖಾತೆಯಲ್ಲಿವೆ. ವಿತ್ತ ರಾಜ್ಯ ಸಚಿವರ ಪ್ರಕಾರ, ರಿಸರ್ವ್ ಬ್ಯಾಂಕ್ ಗಳ ನಿಯಮಗಳ ಪ್ರಕಾರ ವಾರಸುದಾರರಿಲ್ಲದ ಈ ಹಣವನ್ನು ಬ್ಯಾಂಕ್ ಗಳಲ್ಲಿ ಹಣ ಹೂಡಿಕೆ ಮಾಡುವವರ ಹಿತ ಕಾಪಾಡುವ ಪ್ರಚಾರಕ್ಕಾಗಿ ಬಳಸಬಹುದಾಗಿದೆ ಎಂದಿದ್ದಾರೆ. 


ಇದನ್ನೂ ಓದಿ-SBI YONO App: ಆನ್‌ಲೈನ್ ಬ್ಯಾಂಕಿಂಗ್ ನಿಯಮಗಳನ್ನು ಬದಲಾಯಿಸಿದ ಎಸ್‌ಬಿಐ


ಪ್ರತಿ ಖಾತೆಯಲ್ಲಿ ಸರಾಸರಿ 3000 ರೂಗಳಿವೆ
ಮಾಹಿತಿಗಳ ಪ್ರಕಾರ ಪ್ರತಿ ಖಾತೆಯಲ್ಲಿ ಸರಾಸರಿ ರೂ.3000ರೂ.ಗಳಿವೆ ಎನ್ನಲಾಗಿದೆ. ಇದುವರೆಗೆ ಈ ಹಣದ ಮೇಲೆ ಯಾರೂ ಕೂಡ ತಮ್ಮ ಹಕ್ಕು ಮಂಡಿಸಿಲ್ಲ. ಅದರಲ್ಲೋ ವಿಶೇಷವಾಗಿ ಸರ್ಕಾರಿ ಬ್ಯಾಂಕುಗಳ ಖಾತೆಯ ಸರಾಸರಿ ಬಾಕಿ 3030 ರೂ. ಇದೆ.  ಅಂದರೆ ಎಸ್‌ಬಿಐನಲ್ಲಿ 2,710 ರೂ. ಇದ್ದರೆ,  ಖಾಸಗಿ ಬ್ಯಾಂಕ್‌ಗಳಲ್ಲಿ ಸರಾಸರಿ 3,340 ರೂ.ಗಳಿವೆ. ವಿದೇಶಿ ಬ್ಯಾಂಕುಗಳಲ್ಲಿ ಈ ಸರಾಸರಿ ಮೊತ್ತ 9,250 ರೂ. ಇದೆ. ಅಂದರೆ, 6.6 ಲಕ್ಷ ಖಾತೆಗಳಲ್ಲಿ ಈ ಹಣ ವಾರಸುದಾರದಿಲ್ಲದೆ ಹಾಗೆಯೇ ಉಳಿದುಕೊಂಡಿದೆ.  ಸ್ಮಾಲ್ ಫೈನಾನ್ಸ್ ಬ್ಯಾಂಕ್ ಗಳ ಬಳಿ ಅತಿ ಕಡಿಮೆ ಮೊತ್ತ ಅಂದರೆ, ಪ್ರತಿ ಖಾತೆಯಲ್ಲಿ ಸರಾಸರಿ ರೂ.655 ಗಳಿದ್ದಾರೆ. ಗ್ರಾಮೀಣ ಬ್ಯಾಂಕ್ ಗಳ ಬಳಿ ಸರಾಸರಿ ರೂ.1600 ಪ್ರತಿ ಖಾತೆಯಲ್ಲಿವೆ.


ಇದನ್ನೂ ಓದಿ-PM Kisan: ಈ ರೈತರು ಪಿಎಂ ಕಿಸಾನ್ ಯೋಜನೆ ಹಣ ವಾಪಸ್ ನೀಡಬೇಕಾಗುತ್ತೆ! ನಿಮ್ಮ ಹೆಸರು ಪಟ್ಟಿಯಲ್ಲಿದೆಯೇ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ