ನವದೆಹಲಿ: ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಸರ್ಕಾರವು 1 ಫೆಬ್ರವರಿ 2024 ರ ಬಜೆಟ್‌ನಲ್ಲಿ ಮಹಿಳೆಯರಿಗಾಗಿ ಮಧ್ಯ ಪ್ರದೇಶ ಸರ್ಕಾರ ನಡೆಸುತ್ತಿರುವ 'ಲಾಡ್ಲಿ ಬೆಹೇನ್' ಯೋಜನೆಯಂತಹ ಯೋಜನೆಯನ್ನು ದೇಶಾದ್ಯಂತ ಜಾರಿಗೆ ತರುವ ಸಾಧ್ಯತೆ ಇದೆ ಎನ್ನಲಾಗಿದೆ. ಚುನಾವಣೆಗೂ ಮುನ್ನ ಕೇಂದ್ರ ಸರ್ಕಾರ ಬಜೆಟ್ ಮೂಲಕ ಮಹಿಳೆಯರಿಗೆ ಈ ದೊಡ್ಡ ಉಡುಗೊರೆ ನೀಡಬಹುದು ಎಂದು ಮಾಧ್ಯಮ ಮೂಲಗಳು ವರದಿ ಮಾಡಿವೆ. ಚುನಾವಣೆಯಲ್ಲಿ ಮಹಿಳಾ ವೋಟ್ ಬ್ಯಾಂಕ್ ಓಲೈಸಲು ಮೋದಿ ಸರ್ಕಾರ ಖಂಡಿತವಾಗಿಯೂ ಮಹಿಳೆಯರಿಗಾಗಿ ಕೆಲವು ಯೋಜನೆಗಳನ್ನು ತರಲಿದೆ ಎನ್ನಲಾಗುತ್ತದೆ. ಮಧ್ಯಪ್ರದೇಶ ರಾಜ್ಯ ಚುನಾವಣೆಯಲ್ಲಿ ಲಾಡ್ಲಿ ಬೆಹೇನ್ ಯೋಜನೆ ಚಮತ್ಕಾರವೇ ಮಾಡಿದೆ, ಹೀಗಾಗಿ ಮೋದಿ ಸರ್ಕಾರವು ಬಜೆಟ್‌ನಲ್ಲಿ ಮಹಿಳೆಯರಿಗಾಗಿ ಇದೇ ರೀತಿಯ ಯೋಜನೆಯನ್ನು ದೇಶಾದ್ಯಂತ ಜಾರಿಗೆ ತರಬಹುದು ಎನ್ನಲಾಗುತ್ತಿದೆ. (Business News In Kannada)

COMMERCIAL BREAK
SCROLL TO CONTINUE READING

2023 ರ ಬಜೆಟ್‌ನಲ್ಲಿ 'ಆಜಾದಿ ಕಾ ಅಮೃತ್ ಮಹೋತ್ಸವ'ವನ್ನು ಆಚರಿಸಲು, ಮಹಿಳಾ ಹೂಡಿಕೆದಾರರಿಗಾಗಿ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಈ ಯೋಜನೆಯು ಒಂದು ಬಾರಿಯ ಸಣ್ಣ ಉಳಿತಾಯ ಯೋಜನೆಯಾಗಿದ್ದು, ಮಾರ್ಚ್ 2025 ರವರೆಗೆ ಎರಡು ವರ್ಷಗಳವರೆಗೆ ಲಭ್ಯವಿರುತ್ತದೆ.


ಇದನ್ನೂ ಓದಿ-Ration Card ನಲ್ಲಿ ಮಕ್ಕಳ ಹೆಸರು ಸೇರಿಸಬೇಕೆ? ಸರ್ಕಾರಿ ಕಚೇರಿಗೆ ಹೋಗುವ ಅವಶ್ಯಕತೆ ಇಲ್ಲ, ಇಲ್ಲಿದೆ ಡೀಟೈಲ್ಸ್!

ಈ ಯೋಜನೆಯಡಿಯಲ್ಲಿ, ಮಹಿಳೆಯರು ಮತ್ತು ಹುಡುಗಿಯರು ಎರಡು ವರ್ಷಗಳ ಅವಧಿಗೆ 2 ಲಕ್ಷದವರೆಗೆ ವಾರ್ಷಿಕ 7.5 ಶೇಕಡಾ ಬಡ್ಡಿದರದಲ್ಲಿ ಭಾಗಶಃ ಹಿಂತೆಗೆದುಕೊಳ್ಳುವ ಸೌಲಭ್ಯದೊಂದಿಗೆ ಹೂಡಿಕೆ ಮಾಡಬಹುದು.


ಇದನ್ನೂ ಓದಿ-Union Budget 2024: ದೇಶಾದ್ಯಂತದ ಕೋಟ್ಯಾಂತರ ರೈತ ಬಾಂಧವರಿಗೊಂದು ಭಾರಿ ಸಂತಸದ ಸುದ್ದಿ!

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯು ಮಹಿಳಾ ಹೂಡಿಕೆದಾರರಿಗೆ ತಮ್ಮ ಅಲ್ಪಾವಧಿಯ ಆರ್ಥಿಕ ಗುರಿಗಳು ಮತ್ತು ಅಗತ್ಯಗಳಿಗಾಗಿ ಹೂಡಿಕೆ ಮಾಡಲು ಸಹಾಯ ಮಾಡುತ್ತದೆ. ಇತರ ಸಣ್ಣ ಉಳಿತಾಯ ಯೋಜನೆಗಳಿಗೆ ಹೋಲಿಸಿದರೆ ಸುಕನ್ಯಾ ಸಮೃದ್ಧಿ ಯೋಜನೆಯು ಒಂದು ಹಣಕಾಸು ವರ್ಷದಲ್ಲಿ 1.5 ಲಕ್ಷ ರೂಪಾಯಿಗಳ ಗರಿಷ್ಠ ಹೂಡಿಕೆ ಮಿತಿಯನ್ನು ಹೊಂದಿದೆ ಮತ್ತು 21 ವರ್ಷಗಳ ದೀರ್ಘ ಲಾಕ್-ಇನ್ ಅವಧಿಯನ್ನು ಹೊಂದಿದೆ. ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರವು ಎರಡು ವರ್ಷಗಳ ಅವಧಿಗೆ ರೂ 2 ಲಕ್ಷ ಹೂಡಿಕೆ ಮಾಡಲು ಅವಕಾಶವನ್ನು ಒದಗಿಸುತ್ತದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ