Interim Budget 2024: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರದ ಮಧ್ಯಂತರ ಬಜೆಟ್ ಅನ್ನು ಇಂದು ಸಂಸತ್ತಿನಲ್ಲಿ ಮಂಡಿಸಿದ್ದಾರೆ. ಬಜೆಟ್ ಮಂಡನೆ ವೇಳೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಸರ್ಕಾರದ ಸಾಧನೆಗಳನ್ನು ಪ್ರಸ್ತಾಪಿಸಿದ್ದಾರೆ. ಪ್ರಧಾನ ಮಂತ್ರಿ ಆವಾಸ್ ಅಡಿಯಲ್ಲಿ ಮೂರು ಕೋಟಿ ಮನೆಗಳನ್ನು ನಿರ್ಮಿಸಲಾಗಿದೆ ಮತ್ತು 5 ವರ್ಷಗಳಲ್ಲಿ ಇನ್ನೂ 2 ಕೋಟಿ ಮನೆಗಳನ್ನು ನಿರ್ಮಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. (Budget 2024 News In Kannada / Business News In Kannada)


COMMERCIAL BREAK
SCROLL TO CONTINUE READING

"ಹೊಸ ವೈದ್ಯಕೀಯ ಕಾಲೇಜುಗಳನ್ನು ತೆರೆಯಲಾಗುವುದು... ಗರ್ಭಕಂಠದ ಕ್ಯಾನ್ಸರ್ ಲಸಿಕೆಯನ್ನು ಉತ್ತೇಜಿಸಲಾಗುವುದು ಮತ್ತು 9-14 ವರ್ಷ ವಯಸ್ಸಿನ ಹೆಣ್ಣುಮಕ್ಕಳಿಗೆ ಲಸಿಕೆ ಹಾಕುವ ಬಗ್ಗೆ ಸರ್ಕಾರ ಗಮನ ಹರಿಸಲಿದೆ" ಎಂದು ಹೇಳಿದ್ದಾರೆ.. ಅಭಿವೃದ್ಧಿ ಹೊಂದಿದ ಭಾರತವನ್ನಾಗಿ ಮಾಡಲು ಕೇಂದ್ರ ಸರ್ಕಾರ ಬದ್ಧವಾಗಿದ್ದು, ಬಡವರ ಕಲ್ಯಾಣವೇ ದೇಶದ ಕಲ್ಯಾಣ...ಆರ್ಥಿಕ ಕ್ಷೇತ್ರವನ್ನು ನಿರಂತರವಾಗಿ ಸದೃಢಗೊಳಿಸಲಾಗುತ್ತಿದೆ" ಎಂದು ನಿರ್ಮಲಾ ಸೀತಾರಾಮನ್ ಈ ಸಂದರ್ಭದಲ್ಲಿ ಹೇಳಿದ್ದಾರೆ. 


ಮಧ್ಯಮ ವರ್ಗದ ಜನರಿಗೆ 2 ಕೋಟಿ ಮನೆಗಳು
ಚುನಾವಣೆಗೂ ಮುನ್ನ ಮಂಡನೆಯಾದ ಈ ಬಜೆಟ್ ನಲ್ಲಿ ಮಧ್ಯಮ ವರ್ಗದ ಜನರನ್ನು ಸೆಳೆಯಲು ವಿತ್ತ ಸಚಿವರು ವಿಶೇಷ ವಸತಿ ಯೋಜನೆಯನ್ನು ಆರಂಭಿಸುವುದಾಗಿ ತಮ್ಮ ಬಜೆಟ್ ನಲ್ಲಿ ಘೋಷಣೆ ಮಾಡಿದ್ದಾರೆ. ಈ ಯೋಜನೆಯ ಅಡಿ ಬಾಡಿಗೆ ಮನೆಯಲ್ಲಿ ವಾಸಿಸುವ, ಕೊಳಗೇರಿಯಲ್ಲಿ ವಾಸಿಸುವ, ಕಾಲೋನಿಗಳಲ್ಲಿ ವಾಸಿಸುವ 2 ಕೋಟಿ ಕುಟುಂಬಗಳಿಗೆ ಈ ಲಾಭ ಸಿಗಲಿದೆ ಎಂದು ವಿತ್ತ ಸಚಿವರು ಹೇಳಿದ್ದಾರೆ. 


ಇದನ್ನೂ ಓದಿ-Union Budget 2024: ದೇಶದ ಒಂದು ಕೋಟಿ ತೆರಿಗೆ ಪಾವತಿದಾರರಿಗೆ ಭಾರಿ ನೆಮ್ಮದಿಯ ಸುದ್ದಿ

ಪಿಎಂ ಮುದ್ರಾ ಯೋಜನೆ
ಪಿಎಂ ಮುದ್ರಾ ಯೋಜನೆಯ ಕುರಿತು ತಮ್ಮ ಬಜೆಟ್ ನಲ್ಲಿ ಉಲ್ಲೇಖಿಸಿದ ಸೀತಾರಾಮನ್ ಈ ಯೋಜನೆಯ ಅಡಿ ಸರ್ಕಾರ ಒಟ್ಟು 22.5 ಲಕ್ಷ ಕೋಟಿ ರೂ.ಗಳ 42 ಕೋಟಿ ಸಾಲಗಳನ್ನು ನೀಡಿದೆ ಎಂದಿದಾರೆ. ಕಳೆದ 10 ವರ್ಷಗಳಲ್ಲಿ ಮಹಿಳೆಯರಿಗಾಗಿ 30 ಕೋಟಿ ಮುದ್ರಾ ಯೋಜನೆಯ ಸಾಲ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ. 


ಇದನ್ನೂ ಓದಿ-Union Budget 2024: ಸರ್ವೈಕಲ್ ಕ್ಯಾನ್ಸರ್ ನಿವಾರಣೆಗೆ ವ್ಯಾಕ್ಸಿನೇಶನ್, ರಕ್ಷಣಾ ಕ್ಷೇತ್ರದಲ್ಲಿ ಡೀಪ್ ತಂತ್ರಜ್ಞಾನಕ್ಕೆ ಒತ್ತು

ಮುಂದಿನ 5 ವರ್ಷಗಳವರೆಗೆ ಉಚಿತ ಪಡಿತರ ಯೋಜನೆ ವಿಸ್ತರಣೆ
ಉಚಿತ ಪಡಿತರ ಯೋಜನೆಯ ಕುರಿತು ತಮ್ಮ ಮಧ್ಯಂತರ ಬಜೆಟ್ ನಲ್ಲಿ ಮಾತನಾಡಿರುವ ನಿರ್ಮಲಾ ಸೀತಾರಾಮನ್, ದೇಶದ 80 ಕೋಟಿ ಜನರಿಗೆ ಉಚಿತ ಪಡಿತರ ವಿತರಿಸಲಾಗುತ್ತಿದ್ದು, ಮುಂದಿನ ಐದು ವರ್ಷಗಳವರೆಗೆ ಈ ಯೋಜನೆ ಮುಂದುವರೆಯಲಿದೆ ಹೇಳಿದ್ದಾರೆ. 


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ