Interim Budget 2024: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸಂಸತ್ತಿನಲ್ಲಿ ಈ ಬಾರಿಯ ಬಜೆಟ್ ಮಂಡಿಸಿದ್ದಾರೆ. ಮಧ್ಯಂತರ ಬಜೆಟ್ ಮಂಡನೆ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ತಮ್ಮ ಬಜೆಟ್ ಭಾಷಣದಲ್ಲಿ, ಹಣಕಾಸು ಸಚಿವರು ತೆರಿಗೆ ಪಾವತಿದಾರರಿಗೂ ಕೂಡ ಒಂದು ಮಹತ್ವದ ಘೋಷಣೆ ಮಾಡಿದ್ದಾರೆ. ತೆರಿಗೆ ವಿವಾದದ ವಿಷಯಗಳ ಬಗ್ಗೆ ಮಾತನಾಡಿರುವ ಹಣಕಾಸು ಸಚಿವರು 2009-10ನೇ ಸಾಲಿನ 25 ಸಾವಿರ ರೂ.ವರೆಗಿನ ತೆರಿಗೆ ವಿವಾದ ಪ್ರಕರಣಗಳನ್ನು ಮುಕ್ತಾಯಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. 2010-11 ರಿಂದ 2014-15 ರವರೆಗಿನ 10,000 ರೂ.ವರೆಗಿನ ತೆರಿಗೆ ವಿವಾದ ಪ್ರಕರಣಗಳನ್ನು ಮುಕ್ತಾಯಗೊಳಿಸಲಾಗುತ್ತದೆ ಎಂದು ಕೂಡ ಘೋಷಿಸಿದ್ದಾರೆ.
ಬಜೆಟ್ ಭಾಷಣದಲ್ಲಿ, ಮಾತನಾಡಿದ ಸೀತಾರಾಮನ್ , "ಹಲವು ವಿವಾದಿತ ತೆರಿಗೆ ಬೇಡಿಕೆಗಳಿವೆ, ಅವುಗಳಲ್ಲಿ ಕೆಲವು 1962 ಕ್ಕಿಂತಲೂ ಹಿಂದಿನ ವಿವಾದಗಳಾಗಿವೆ, ಅವು ಪ್ರಾಮಾಣಿಕ ತೆರಿಗೆ ಪಾವತಿದಾರರಿಗೆ ಕಳವಳವನ್ನುಂಟುಮಾಡುತ್ತಿವೆ, ಹೀಗಾಗಿ ನಾನು ಆರ್ಥಿಕ ವರ್ಷ 2009-10 ಅವಧಿಗೆ ಸಂಬಂಧಿಸಿದ ರೂ. 25 ಸಾವಿರವರೆಗಿನ, 2010-11 ಮತ್ತು 2014-15 ಅವಧಿಯ ರೂ.10,000 ವರೆಗಿನ ಬಾಕಿ ಟ್ಯಾಕ್ಸ್ ಡಿಮಾಂಡ್ ಹಿಂಪಡೆಯಲು ಪ್ರಸ್ತಾಪ್ಸುತ್ತೇನೆ' ಎಂದಿದ್ದಾರೆ.
ಒಂದು ಕೋಟಿ ತೆರಿಗೆದಾರರಿಗೆ ಲಾಭವಾಗಲಿದೆ
ಒಂದು ಕೋಟಿ ತೆರಿಗೆದಾರರು ಇದರ ಲಾಭ ಪಡೆಯುವ ನಿರೀಕ್ಷೆ ಇದೆ ಎಂದು ಸೀತಾರಾಮನ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. . ಮಧ್ಯಂತರ ಬಜೆಟ್ 2024 ರಲ್ಲಿ, ಅವರು ನೇರ ಅಥವಾ ಪರೋಕ್ಷ ತೆರಿಗೆ ದರಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗುವುದಿಲ್ಲ ಎಂದು ಹೇಳಿದ್ದಾರೆ, ಆದರೂ ಹಣಕಾಸು ಸಚಿವರು ಸ್ಟಾರ್ಟ್-ಅಪ್‌ಗಳು ಮತ್ತು ವೆಲ್ತ್ ಅಂಡ್ ಪೆನ್ಷನ್ ನಿಧಿಗಳಿಗೆ ತೆರಿಗೆ ಪ್ರಯೋಜನಗಳ ಕೊನೆಯ ದಿನಾಂಕವನ್ನು ವಿಸ್ತರಿಸಿದ್ದಾರೆ.
ಇದನ್ನೂ ಓದಿ-Union Budget 2024: ಚಿಕ್ಕ ನಗರಗಳನ್ನು ಸಂಪರ್ಕಿಸಲು 517 ರೂಟ್ ಗಳಲ್ಲಿ ಉಡಾನ್ ಯೋಜನೆ!
ಇದರ ಹೊರತಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024 ರ ಮಧ್ಯಂತರ ಬಜೆಟ್ ಅನ್ನು 1 ಫೆಬ್ರವರಿ 2024 ರಂದು ಮಂಡಿಸುವಾಗ, ಹೊಸ ಮತ್ತು ಹಳೆಯ ಆದಾಯ ತೆರಿಗೆ ಪದ್ಧತಿಯ ತೆರಿಗೆ ಸ್ಲ್ಯಾಬ್ ದರಗಳಲ್ಲಿ ಯಾವುದೇ ಬದಲಾವಣೆಯನ್ನು ಮಾಡಲಾಗಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ