ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ ದೇಶವಾಗಿ ಹೊರಹೊಮ್ಮಿದ ಅಮೆರಿಕಾ
ಅಮೇರಿಕಾ (ಯುಎಸ್ಎ) 2021-22ರಲ್ಲಿ ಚೀನಾವನ್ನು ಹಿಂದಿಕ್ಕಿ ಭಾರತದ ಅಗ್ರ ವ್ಯಾಪಾರ ಪಾಲುದಾರ ದೇಶವಾಗಿ ಹೊರಹೊಮ್ಮಿದೆ. ಇದು ಈಗ ಎರಡು ರಾಷ್ಟ್ರಗಳ ನಡುವಿನ ಆರ್ಥಿಕ ಸಂಬಂಧವನ್ನು ಮತ್ತಷ್ಟು ಬಳಪಡಿಸುವ ನಿಟ್ಟಿನಲ್ಲಿ ಸಹಕಾರಿಯಾಗಲಿದೆ.
ನವದೆಹಲಿ: ಅಮೇರಿಕಾ (ಯುಎಸ್ಎ) 2021-22ರಲ್ಲಿ ಚೀನಾವನ್ನು ಹಿಂದಿಕ್ಕಿ ಭಾರತದ ಅಗ್ರ ವ್ಯಾಪಾರ ಪಾಲುದಾರ ದೇಶವಾಗಿ ಹೊರಹೊಮ್ಮಿದೆ. ಇದು ಈಗ ಎರಡು ರಾಷ್ಟ್ರಗಳ ನಡುವಿನ ಆರ್ಥಿಕ ಸಂಬಂಧವನ್ನು ಮತ್ತಷ್ಟು ಬಳಪಡಿಸುವ ನಿಟ್ಟಿನಲ್ಲಿ ಸಹಕಾರಿಯಾಗಲಿದೆ.
ವಾಣಿಜ್ಯ ಸಚಿವಾಲಯದ ಅಂಕಿ-ಅಂಶಗಳ ಪ್ರಕಾರ, 2021-22 ರಲ್ಲಿ, ಯುಎಸ್ ಮತ್ತು ಭಾರತದ ನಡುವಿನ ದ್ವಿಪಕ್ಷೀಯ ವ್ಯಾಪಾರವು 2020-21 ರಲ್ಲಿ $ 80.51 ಶತಕೋಟಿಯಿಂದ $ 119.42 ಬಿಲಿಯನ್ ಆಗಿತ್ತು.ಯುಎಸ್ ಗೆ ರಫ್ತುಹಿಂದಿನ ಹಣಕಾಸು ವರ್ಷದಲ್ಲಿ $51.62 ಶತಕೋಟಿಯಿಂದ 2021-22 ರಲ್ಲಿ $76.11 ಶತಕೋಟಿಗೆ ಏರಿಕೆಯಾಗಿದೆ
ಆಮದುಗಳು 2020-21 ರಲ್ಲಿ $29 ಶತಕೋಟಿಗೆ ಹೋಲಿಸಿದರೆ $43.31 ಶತಕೋಟಿಗೆ ಏರಿಕೆಯಾಗಿದ್ದು, 2021-22ರಲ್ಲಿ, ಚೀನಾದೊಂದಿಗಿನ ಭಾರತದ ದ್ವಿಮುಖ ವಾಣಿಜ್ಯವು 2020-21ರಲ್ಲಿ $86.4 ಶತಕೋಟಿಗೆ ಹೋಲಿಸಿದರೆ $115.42 ಶತಕೋಟಿಗೆ ಹೆಚ್ಚಳವಾಗಿದೆ ಎಂದು ಡೇಟಾ ತೋರಿಸಿದೆ.ಚೀನಾಕ್ಕೆ ರಫ್ತುಗಳು 2020-21ರಲ್ಲಿ $21.18 ಶತಕೋಟಿಯಿಂದ ಕಳೆದ ಆರ್ಥಿಕ ವರ್ಷದಲ್ಲಿ $21.25 ಶತಕೋಟಿಗೆ ಏರಿಕೆಯಾಗಿದೆ, ಆದರೆ ಆಮದುಗಳು 2020-21ರಲ್ಲಿ $65.21 ಶತಕೋಟಿಯಿಂದ $94.16 ಶತಕೋಟಿಗೆ ಏರಿದೆ. ಹಿಂದಿನ ಹಣಕಾಸು ವರ್ಷದಲ್ಲಿ $44 ಶತಕೋಟಿಯಿಂದ 2021-22ರಲ್ಲಿ ವ್ಯಾಪಾರದ ಅಂತರವು $72.91 ಶತಕೋಟಿಗೆ ಏರಿತು.ತಾಯಿ ಬಳಿ ಚಹಾಗೆ ಬೇಡಿಕೆ ಇಡ್ತಿದೆ ಈ ಪಕ್ಷಿ... ಮುದ್ದಾದ ವಿಡಿಯೋ ನೀವು ನೋಡ್ಲೇಬೇಕು
ಹೊಸದಿಲ್ಲಿ ಮತ್ತು ವಾಷಿಂಗ್ಟನ್ ಆರ್ಥಿಕ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವಲ್ಲಿ ತೊಡಗಿರುವ ಕಾರಣ ಮುಂಬರುವ ವರ್ಷಗಳಲ್ಲಿಯೂ ಯುಎಸ್ ಜೊತೆಗಿನ ದ್ವಿಪಕ್ಷೀಯ ವ್ಯಾಪಾರವನ್ನು ಹೆಚ್ಚಿಸುವ ಪ್ರವೃತ್ತಿಯು ಮುಂದುವರಿಯುತ್ತದೆ ಎಂದು ವ್ಯಾಪಾರ ತಜ್ಞರು ನಂಬಿದ್ದಾರೆ.ಭಾರತೀಯ ರಫ್ತು ಸಂಸ್ಥೆಗಳ ಒಕ್ಕೂಟದ ಉಪಾಧ್ಯಕ್ಷ ಖಾಲಿದ್ ಖಾನ್ ಮಾತನಾಡಿ, ಭಾರತವು ವಿಶ್ವಾಸಾರ್ಹ ವ್ಯಾಪಾರ ಪಾಲುದಾರನಾಗಿ ಹೊರಹೊಮ್ಮುತ್ತಿದೆ ಮತ್ತು ಜಾಗತಿಕ ಸಂಸ್ಥೆಗಳು ತಮ್ಮ ಸರಬರಾಜುಗಳಿಗಾಗಿ ಚೀನಾದ ಮೇಲೆ ಮಾತ್ರ ಅವಲಂಬನೆಯನ್ನು ಕಡಿಮೆ ಮಾಡುತ್ತಿವೆ ಮತ್ತು ಭಾರತದಂತಹ ಇತರ ದೇಶಗಳಿಗೆ ವ್ಯಾಪಾರವನ್ನು ವೈವಿಧ್ಯಗೊಳಿಸುತ್ತಿವೆ.
'ಮುಂಬರುವ ವರ್ಷಗಳಲ್ಲಿ, ಭಾರತ ಮತ್ತು ಯುಎಸ್ ನಡುವಿನ ದ್ವಿಪಕ್ಷೀಯ ವ್ಯಾಪಾರವು ಬೆಳೆಯಲು ಮುಂದುವರಿಯುತ್ತದೆ. ಇಂಡೋ-ಪೆಸಿಫಿಕ್ ಆರ್ಥಿಕ ಚೌಕಟ್ಟನ್ನು (ಐಪಿಇಎಫ್) ಸ್ಥಾಪಿಸಲು ಭಾರತವು ಯುಎಸ್ ನೇತೃತ್ವದ ಉಪಕ್ರಮವನ್ನು ಸೇರಿಕೊಂಡಿದೆ ಮತ್ತು ಈ ಕ್ರಮವು ಆರ್ಥಿಕ ಸಂಬಂಧಗಳನ್ನು ಮತ್ತಷ್ಟು ಹೆಚ್ಚಿಸಲು ಸಹಾಯ ಮಾಡುತ್ತದೆ." ಎಂದು ಖಾನ್ ಹೇಳಿದರು.ಭಾರತದೊಂದಿಗೆ ವ್ಯಾಪಾರ ಹೆಚ್ಚುವರಿ ಹೊಂದಿರುವ ಕೆಲವೇ ದೇಶಗಳಲ್ಲಿ ಅಮೆರಿಕವೂ ಒಂದು.2021-22 ರಲ್ಲಿ, ಭಾರತವು ಅಮೆರಿಕಾನೊಂದಿಗೆ $ 32.8 ಶತಕೋಟಿ ವ್ಯಾಪಾರದ ಹೆಚ್ಚುವರಿ ಹೊಂದಿತ್ತು. 2013-14 ರಿಂದ 2017-18 ರವರೆಗೆ ಮತ್ತು 2020-21 ರಲ್ಲಿ ಚೀನಾ ಭಾರತದ ಅಗ್ರ ವ್ಯಾಪಾರ ಪಾಲುದಾರ ಎಂದು ಡೇಟಾ ತೋರಿಸಿದೆ. ಚೀನಾಕ್ಕಿಂತ ಮೊದಲು, ಯುಎಇ ದೇಶದ ಅತಿದೊಡ್ಡ ವ್ಯಾಪಾರ ಪಾಲುದಾರ ಆಗಿತ್ತು.
ಇದನ್ನೂ ಓದಿ: Elon Musk : ಭಾರತದಲ್ಲಿ ಟೆಸ್ಲಾ ಉತ್ಪಾದನಾ ಘಟಕ : ಎಲೋನ್ ಮಸ್ಕ್ ಮಹತ್ವದ ಟ್ವೀಟ್
2021-22 ರಲ್ಲಿ, ಯುಎಇ $72.9 ಶತಕೋಟಿಯೊಂದಿಗೆ, ಭಾರತದ ಮೂರನೇ ಅತಿದೊಡ್ಡ ವ್ಯಾಪಾರ ಪಾಲುದಾರ ಆಗಿತ್ತು. ಅದರ ನಂತರ ಸೌದಿ ಅರೇಬಿಯಾ ($42,85 ಶತಕೋಟಿ), ಇರಾಕ್ ($34.33 ಶತಕೋಟಿ) ಮತ್ತು ಸಿಂಗಾಪುರ ($30 ಶತಕೋಟಿ) ದೇಶಗಳಿವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.