ತಾಯಿ ಬಳಿ ಚಹಾಗೆ ಬೇಡಿಕೆ ಇಡ್ತಿದೆ ಈ ಪಕ್ಷಿ... ಮುದ್ದಾದ ವಿಡಿಯೋ ನೀವು ನೋಡ್ಲೇಬೇಕು

ಇಂಡೋನೇಷ್ಯಾದ ಉತ್ತರದ ಮಲುಕು ಕಾಡುಗಳಲ್ಲಿ ಕಂಡುಬರುವ ಗಿಳಿಯನ್ನು ಭಾರತದಲ್ಲಿ ಕುಟುಂಬವೊಂದು ಸಾಕುತ್ತಿದೆ. ಈ ಗಿಳಿ ಹಿಂದಿ ಭಾಷೆಯನ್ನು ಚೆನ್ನಾಗಿ ಮಾತನಾಡುತ್ತದೆ. ವೈರಲ್‌ ಆದ ವಿಡಿಯೋದಲ್ಲಿ ಗಿಳಿಯು ತನ್ನ ಮನೆಯೊಡತಿಯನ್ನು ‘ಅಮ್ಮ’ ಎಂದು ಕರೆಯುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಇಷ್ಟೇ ಅಲ್ಲ ಗಿಣಿ ಟೀ ಕೊಡುವಂತೆ ಬೇಡಿಕೆ ಇಟ್ಟಿದೆ. 

Written by - Bhavishya Shetty | Last Updated : May 28, 2022, 01:33 PM IST
  • ಮನೆಯೊಡತಿ ಬಳಿ ಚಹಾ ಕೇಳುವ ಗಿಳಿ
  • ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್
  • ಮನೆಯೊಡತಿ-ಗಿಳಿಯ ಸಂಭಾಷಣೆ ನೀವೇ ಕೇಳಿ
ತಾಯಿ ಬಳಿ ಚಹಾಗೆ ಬೇಡಿಕೆ ಇಡ್ತಿದೆ ಈ ಪಕ್ಷಿ... ಮುದ್ದಾದ ವಿಡಿಯೋ ನೀವು ನೋಡ್ಲೇಬೇಕು title=
Parrot Video,

ಗಿಳಿಗಳು ಮನುಷ್ಯರನ್ನು ಅನುಕರಿಸುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ನಮ್ಮ ದೇಶದಲ್ಲಿ ಅನೇಕರು ಗಿಳಿಗಳನ್ನು ಸಾಕುತ್ತಾರೆ. ಅದರಲ್ಲೂ ಹೆಚ್ಚಾಗಿ ಸಾಕುವುದು ಹಸಿರು ಬಣ್ಣದ ಗಿಳಿಗಳನ್ನು. ಇನ್ನೂ ಕೆಲವರು ವಿದೇಶಿ ತಳಿಯ ಗಿಳಿಗಳನ್ನು ಸಾಕುತ್ತಾರೆ. ಆದರೆ ವಿದೇಶಿ ತಳಿಯ ಗಿಳಿಯನ್ನು ಕುಟುಂಬವೊಂದು ಸಾಕುತ್ತಿದ್ದು, ಅದರ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಗಿಳಿ ತಮ್ಮ ಮನೆಯೊಡತಿ ಬಳಿ ಚಹಾಗೆ ಬೇಡಿಕೆ ಇಡುತ್ತಿದೆ. 

ಇಂಡೋನೇಷ್ಯಾದ ಉತ್ತರದ ಮಲುಕು ಕಾಡುಗಳಲ್ಲಿ ಕಂಡುಬರುವ ಗಿಳಿಯನ್ನು ಭಾರತದಲ್ಲಿ ಕುಟುಂಬವೊಂದು ಸಾಕುತ್ತಿದೆ. ಈ ಗಿಳಿ ಹಿಂದಿ ಭಾಷೆಯನ್ನು ಚೆನ್ನಾಗಿ ಮಾತನಾಡುತ್ತದೆ. ವೈರಲ್‌ ಆದ ವಿಡಿಯೋದಲ್ಲಿ ಗಿಳಿಯು ತನ್ನ ಮನೆಯೊಡತಿಯನ್ನು ‘ಅಮ್ಮ’ ಎಂದು ಕರೆಯುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಇಷ್ಟೇ ಅಲ್ಲ ಗಿಣಿ ಟೀ ಕೊಡುವಂತೆ ಬೇಡಿಕೆ ಇಟ್ಟಿದೆ. 

ಇದನ್ನು ಓದಿ: ಭಾರತದಲ್ಲಿ ಟೆಸ್ಲಾ ಉತ್ಪಾದನಾ ಘಟಕ : ಎಲೋನ್ ಮಸ್ಕ್ ಮಹತ್ವದ ಟ್ವೀಟ್

ಲಿವಿಂಗ್ ರೂಮಿನಲ್ಲಿ ಕೆಂಪು ಗಿಳಿಯೊಂದು ಕುಳಿತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ಸಮಯದಲ್ಲಿ, ಗಿಳಿಯು 'ಅಮ್ಮ' ಎಂದು ಕರೆದು, ಚಹಾಗೆ ಬೇಡಿಕೆ ಇಡುತ್ತದೆ. ಇದಕ್ಕೆ ಉತ್ತರಿಸಿದ ಮನೆಯೊಡತಿ, "ಚಹಾ ತರುತ್ತಿದ್ದೇನೆ ಮಗ" ಎಂದು ಪ್ರೀತಿಯಿಂದ ಹೇಳಿದ್ದಾರೆ.  ಇವರಿಬ್ಬರ ಈ ಸಂಭಾಷಣೆ ಎಲ್ಲರನ್ನೂ ಭಾವನಾತ್ಮಕವಾಗಿ ಮನಮುಟ್ಟಿದೆ. 

 

ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋವನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದರೊಂದಿಗೆ ಅವರು ಶೀರ್ಷಿಕೆಯನ್ನು ಹೀಗೆ ಬರೆದಿದ್ದಾರೆ. "ಈ ಸುಂದರ ಮತ್ತು ಮುಗ್ಧ ಸಂಭಾಷಣೆಯನ್ನು ಕೇಳಿ ನಾವು ಎಲ್ಲಾ ಜೀವಿಗಳೊಂದಿಗೆ ಹೀಗೆ ಮಾತನಾಡಬಹುದು ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದ್ದಾರೆ.  

ಇದನ್ನು ಓದಿ: NRIಗಳೇ ಗಮನಿಸಿ: ಎಕ್ಸ್‌ಪ್ರೆಸ್ ಎಂಟ್ರಿ ಸಿಸ್ಟಮ್‌ನಲ್ಲಿ ಬದಲಾವಣೆ ತರಲು ಕೆನಡಾ ಚಿಂತನೆ

ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದ್ದು, ಇದುವರೆಗೆ 35 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ಅನೇಕರು ಕಮೆಂಟ್‌ಗಳ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News