ಸರ್ಕಾರವು ದೀಪಾವಳಿ ರಜಾದಿನಗಳನ್ನು ಘೋಷಿಸಿದೆ. ಈ ಬಾರಿ ಅಕೊಬರ್ 31ರಿಂದ ದೀಪಾವಳಿ ಆರಂಭವಾಗಲಿದೆ.ಅಂದರೆ ಅಕೊಬರ್ 31ರಿಂದ  ನವೆಂಬರ 4 ರವರೆಗೆ ಸಾಲು ಸಾಲು ರಜೆ. ಈ ಸಂಬಂಧ ಸರ್ಕಾರಿ ಇಲಾಖೆಗಳಿಗೆ ಆದೇಶ ಕೂಡಾ ಹೊರಡಿಸಲಾಗಿತ್ತು.


COMMERCIAL BREAK
SCROLL TO CONTINUE READING

ಯುಪಿಯ ಯೋಗಿ ಸರ್ಕಾರವು ಪ್ರತಿ ವರ್ಷ ದೀಪಾವಳಿಯ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ಬೆಳಕಿನ ಹಬ್ಬವನ್ನು ಆಯೋಜಿಸುತ್ತದೆ. ಈ ನಿಟ್ಟಿನಲ್ಲಿ ಸರ್ಕಾರಿ ರಜೆಯೇ ಬಗ್ಗೆ ಈಗಾಗಲೇ ಸರ್ಕಾರದ ಮುಖ್ಯ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಈ ಆದೇಶದ ಪ್ರಕಾರ, ದೀಪಾವಳಿ, ಗೋವರ್ಧನ ಪೂಜೆ ಮತ್ತು ಭಾಯಿ ದೂಜ್‌ನಂತಹ ಹಬ್ಬಗಳನ್ನು ಯಾವಾಗ ಆಚರಿಸಲಾಗುತ್ತದೆ ಎನ್ನುವುದನ್ನು  ಸ್ಪಷ್ಟವಾಗಿ ಹೇಳಲಾಗಿದೆ. 


ಇದನ್ನೂ ಓದಿ : Priyanka Gandhi: ಐಷಾರಾಮಿ ಬಂಗಲೆ ಕೋಟ್ಯಾಂತರ ರೂಪಾಯಿ ಆಸ್ತಿಯ ಒಡತಿ ಸೋನಿಯಾ ಗಾಂಧಿ ಪುತ್ರಿ!


ದೀಪಾವಳಿ ಹಬ್ಬವನ್ನು ಅಕ್ಟೋಬರ್ 31 ಅಥವಾ ನವೆಂಬರ್ 1 ರಂದು ಆಚರಿಸಬೇಕೇ ಎನ್ನುವ ಗೊಂದಲ ಈ ಬಾರಿ ಜನರಲ್ಲಿ ಮೂಡಿದೆ. ಈ ಬಾರಿಯ ದೀಪಾವಳಿ ಹಬ್ಬವನ್ನು ಅಕ್ಟೋಬರ್ 31 ರಂದೇ ಆಚರಿಸಲಾಗುವುದು ಎಂದು ಸರ್ಕಾರ ಘೋಷಿಸುವ ಮೂಲಕ ಈ ಗೊಂದಲಕ್ಕೆ ತೆರೆ ಎಳೆದಿದೆ. ಮುಖ್ಯ ಕಾರ್ಯದರ್ಶಿ ದೀಪಕ್ ಕುಮಾರ್ ಅವರು ರಾಜ್ಯದ ಎಲ್ಲಾ ಡಿಎಂ ಮತ್ತು ಖಜಾನೆಗಳಿಗೆ ಹೊರಡಿಸಿದ ಆದೇಶದ ಪ್ರಕಾರ, ದೀಪಾವಳಿಯ ಮೊದಲು ಸರ್ಕಾರಿ ನೌಕರರ ವೇತನ ಬಿಡುಗಡೆ ಮಾಡಲು ಆದೇಶ ನೀಡಲಾಗಿದೆ.


ಇನ್ನು ದೀಪಾವಳಿಯ ರಜೆ ಯಾವೆಲ್ಲಾ ದಿನ ಇರಲಿದೆ ಎನ್ನುವುದನ್ನು ಕೂಡಾ ಹೇಳಲಾಗಿದೆ. ಹಬ್ಬದ ಸಲುವಾಗಿ ಅಕ್ಟೋಬರ್ 31 ರಂದು ಎಲ್ಲಾ ಸರ್ಕಾರಿ ಕಚೇರಿಗಳನ್ನು ಮುಚ್ಚಲಾಗುವುದು ಎಂದು ಸರ್ಕಾರ ಹೊರಡಿಸಿದ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಇದಾದ ನಂತರ ನವೆಂಬರ್ 2ರಂದು ಗೋವರ್ಧನ ಪೂಜೆಯ ಹಬ್ಬವನ್ನು ಆಚರಿಸಲಾಗುತ್ತದೆ ಮತ್ತು ಈ ದಿನವೂ ರಜೆ ಇರುತ್ತದೆ. ಭಾಯಿ ದೂಜ್ ಹಬ್ಬವನ್ನು ನವೆಂಬರ್ 3 ರಂದು ಆಚರಿಸಲಾಗುತ್ತದೆ.ನವೆಂಬರ್ 1ರ ರಜೆಯನ್ನು ಇನ್ನೂ ಸರ್ಕಾರ ಘೋಷಿಸಿಲ್ಲ. ಅಂದರೆ ಸತತ ನಾಲ್ಕು ದಿನ ರಜೆ ಅಂದುಕೊಂಡಿದ್ದ ಸರ್ಕಾರಿ ನೌಕರರಿಗೆ ಇದು ಬೇಸರ ತರಿಸಿದೆ. 


ಇದನ್ನೂ ಓದಿ : 1,50,000 ಕೋಟಿ ಮೌಲ್ಯದ ಸಾಮ್ರಾಜ್ಯದ ಒಡೆಯ !ಆದರೂ ಮೊಬೈಲ್, ಬಂಗಲೆ, ಕಾರು ಬಳಸುವುದೇ ಇಲ್ಲ!ಕೋಟ್ಯಾಧಿಪತಿ ಉದ್ಯಮಿಯ ಸರಳ ಜೀವನ ಇದು


ಪಂಚಾಂಗದ ಪ್ರಕಾರ ಹಬ್ಬ ಎರಡು ದಿನಗಳ ಕಾಲ ಬೀಳುತ್ತಿತ್ತು. ಈ ಬಾರಿಯ ಅಮವಾಸ್ಯೆಯ ತಿಥಿ ಅಕ್ಟೋಬರ್ 31 ಮತ್ತು ನವೆಂಬರ್ 1 ರಂದು ಎರಡು ದಿನಗಳ ಕಾಲ ಬರುತ್ತದೆ. ಇದರಿಂದಾಗಿ ದೀಪಾವಳಿಯನ್ನು ಯಾವಾಗ ಆಚರಿಸಬೇಕು ಎನ್ನುವ ಗೊಂದಲ ಜನರನ್ನು ಕಾಡುತ್ತಿತ್ತು. ನಿಯಮಗಳ ಪ್ರಕಾರ ದೀಪಾವಳಿಯನ್ನು ಅಮಾವಾಸ್ಯೆಯ ರಾತ್ರಿ ಆಚರಿಸಲಾಗುತ್ತದೆ. ಈ ಬಾರಿಯ ಅಮಾವಾಸ್ಯೆಯು ಅಕ್ಟೋಬರ್ 31 ರಂದು ಮಧ್ಯಾಹ್ನ 2:40 ರಿಂದ ಪ್ರಾರಂಭವಾಗಿದ್ದು, ನವೆಂಬರ್ 1 ರ ಮಧ್ಯಾಹ್ನದವರೆಗೆ ಇರುತ್ತದೆ. ಆದರೆ, ನವೆಂಬರ್ 1ರ ರಾತ್ರಿ ಅಮಾವಾಸ್ಯೆ ಇರುವುದಿಲ್ಲ. ದೀಪಾವಳಿ ಹಬ್ಬವನ್ನು ಅಕ್ಟೋಬರ್ 31 ರಂದು ಆಚರಿಸಲಾಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ