ಕಲ್ಪತರು ನಾಡಿನ ಜನರಿಗೆ ಗುಡ್ ನ್ಯೂಸ್ ನೀಡಿದ ರೈಲ್ವೇ ಇಲಾಖೆ: ಇನ್ಮುಂದೆ ಈ ರೈಲ್ವೆ ನಿಲ್ದಾಣದಲ್ಲೂ ನಿಲ್ಲುತ್ತೇ ವಂದೇ ಭಾರತ್ ಎಕ್ಸ್‌ಪ್ರೆಸ್
Vande Bharat Express: ಬೆಂಗಳೂರು -ಧಾರವಾಡ ನಡುವೆ ಸಂಚಾರ ನಡೆಸುತ್ತಿರುವ ವಂದೇ ಭಾರತ್ ರೈಲು ಇಂದಿನಿಂದ ತುಮಕೂರಿನಲ್ಲೂ ನಿಲುಗಡೆಗೆ ನೀಡಲಿದೆ.
Vande Bharat Express: ಕಲ್ಪತರು ನಾಡು ತುಮಕೂರು ಜಿಲ್ಲೆಗೆ ರೈಲ್ವೆ ಇಲಾಖೆ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಇಂದಿನಿಂದ ತುಮಕೂರಿನ ರೈಲ್ವೆ ನಿಲ್ದಾಣದಿಂದಲೂ "ವಂದೇ ಭಾರತ್ ಎಕ್ಸ್‌ಪ್ರೆಸ್" (Vande Bharat Express) ಸಂಚರಿಸಲಿದೆ.
ಹೌದು, ಬೆಂಗಳೂರು -ಧಾರವಾಡ ನಡುವೆ ಸಂಚಾರ ನಡೆಸುತ್ತಿರುವ ವಂದೇ ಭಾರತ್ ರೈಲು (Vande Bharat Express) ಇಂದಿನಿಂದ ತುಮಕೂರಿನಲ್ಲೂ ನಿಲುಗಡೆಗೆ ನೀಡಲಿದೆ. ಕೇಂದ್ರ ರಾಜ್ಯ ಸಚಿವ ವಿ. ಸೋಮಣ್ಣ ಇಂದು (ಆಗಸ್ಟ್ 23) ಸಂಜೆ ತುಮಕೂರಿನಲ್ಲಿ ವಂದೇ ಭಾರತ್ ರೈಲು ಸೇವೆಗೆ ಅಧಿಕೃತವಾಗಿ ಹಸಿರು ನಿಶಾನೆ ತೋರಿಸಲಿದ್ದಾರೆ.
ಇದನ್ನೂ ಓದಿ- ಅಂಬಾನಿ, ಅದಾನಿ ಅಲ್ಲವೇ ಅಲ್ಲ: ಈ ಭಾರತೀಯ ಕಂಪನಿ "ವಿಶ್ವದ ಪ್ರಬಲ ಬ್ರ್ಯಾಂಡ್"
ಈ ಕುರಿತುತಮ್ಮ ಅಧಿಕೃತ X ಖಾತೆಯಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ (Union Minister V Somanna) ಮಾಹಿತಿ ಹಂಚಿಕೊಂಡಿದ್ದು ವಂದೇ ಭಾರತ್ ರೈಲು ತುಮಕೂರಿನಲ್ಲಿ ಇಂದು ಸಂಜೆ 6.18ಕ್ಕೆ ರೈಲು ಮೊದಲ ಸ್ಟಾಪ್ ನೀಡಲಿದೆ. ಆ ಬಳಿಕ ಆಗಸ್ಟ್ 24 ರಿಂದ ಧಾರವಾಡಕ್ಕೆ ತೆರಳುವಾಗ ಹಾಗೂ ಧಾರವಾಡದಿಂದ ಹಿಂದಿರುಗುವಾಗ ಬೆಳಗ್ಗೆ ಹಾಗೂ ಸಂಜೆ ನಿಲುಗಡೆಯಾಗಲಿದೆ ಎಂದು ತಿಳಿಸಿದ್ದಾರೆ. ಜೊತೆಗೆ ಈ ಕಾರ್ಯಕ್ರಮಕ್ಕೆ ತುಮಕೂರು ಲೋಕಸಭಾ ಕ್ಷೇತ್ರದ ಸಾರ್ವಜನಿಕರು, ಪಕ್ಷದ ಕಾರ್ಯಕರ್ತರು ಆಗಮಿಸಿ, ಯಶಸ್ವಿಗೊಳಿಸಬೇಕೆಂದು ಕೋರಿದ್ದಾರೆ.
ರೈಲಿನ ವೇಳಾಪಟ್ಟಿ ಬದಲಾವಣೆ:
* ರೈಲು ಸಂಖ್ಯೆ 20662 ಧಾರವಾಡ-ಕೆ.ಎಸ್.ಆರ್ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ತುಮಕೂರು ನಿಲ್ದಾಣಕ್ಕೆ ಸಂಜೆ 6.18/6.20 ಘಂಟೆಗೆ ಆಗಮಿಸಿ/ನಿರ್ಗಮಿಸಲಿದೆ. ಉಳಿದಂತೆ ಎಲ್ಲಾ ನಿಲ್ದಾಣಗಳ ಸಮಯ ಈ ಹಿಂದಿನಂತೆ ಇರಲಿದೆ.
ಇದನ್ನೂ ಓದಿ- ಯಶವಂತಪುರ ನಿಲ್ದಾಣದ ಪ್ಲಾಟ್ಫಾರಂಗಳು ಒಂದು ತಿಂಗಳು ಬಂದ್: ಭಾಗಶಃ ರದ್ದಾದ ರೈಲುಗಳ ವಿವರ
* ರೈಲು ಸಂಖ್ಯೆ 20661 ಕೆ.ಎಸ್.ಆರ್ ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ತುಮಕೂರು ನಿಲ್ದಾಣಕ್ಕೆ ಬೆಳಿಗ್ಗೆ 6:32/ಘಂಟೆಗೆ ಆಗಮಿಸಿ 6:34 ಗಂಟೆಗೆ ನಿರ್ಗಮಿಸಲಿದೆ. ಉಳಿದಂತೆ ಎಲ್ಲಾ ನಿಲ್ದಾಣಗಳ ಸಮಯ ಈ ಹಿಂದಿನಂತೆ ಇರಲಿದೆ ಎಂದು ತಿಳಿದು ಬಂದಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.