ಕಡಿಮೆ ದರದಲ್ಲಿ ವಂದೇ ಭಾರತ್ ರೈಲು ಪ್ರಯಾಣ ಇನ್ನು ಸಾಧ್ಯ.! ಸಿದ್ದವಾಗಿದೆ ಸ್ಲೀಪರ್ ಕ್ಲಾಸ್
Vande Bharat Sleeper Coach Train : ಇದೀಗ ರೈಲ್ವೆಯು ಸ್ಲೀಪರ್ ಕೋಚ್‌ಗಳೊಂದಿಗೆ ವಂದೇ ಭಾರತ್ ರೈಲು ಆರಂಭಿಸುವ ಯೋಜನೆಗೆ ಮುಂದಾಗಿದೆ. ಇದರಿಂದ ಮಧ್ಯಮ ಆದಾಯ ಹೊಂದಿರುವ ಜನರು ಸಹ ಈ ರೈಲು ಸೇವೆಯ ಪ್ರಯೋಜನವನ್ನು ಪಡೆಯಬಹುದಾಗಿದೆ.
Vande Bharat Sleeper Coach Train : ಭಾರತೀಯ ರೈಲ್ವೆ ಪರಿಚಯಿಸಿರುವ ವಂದೇ ಭಾರತ್ ರೈಲುಗಳು ಜನರ ಮೆಚ್ಚುಗೆಗೆ ಪಾತ್ರವಾಗಿವೆ. ಈ ರೈಲುಗಳ ಮೂಲಕ ಕಡಿಮೆ ಸಮಯದಲ್ಲಿ ಮತ್ತು ಆರಾಮದಾಯಕ ರೀತಿಯಲ್ಲಿ ಪ್ರಯಾಣ ಬೆಳೆಸಬಹುದಾಗಿದೆ. ಇದೀಗ ರೈಲ್ವೆಯು ಸ್ಲೀಪರ್ ಕೋಚ್‌ಗಳೊಂದಿಗೆ ವಂದೇ ಭಾರತ್ ರೈಲು ಆರಂಭಿಸುವ ಯೋಜನೆಗೆ ಮುಂದಾಗಿದೆ. ಇದರಿಂದ ಮಧ್ಯಮ ಆದಾಯ ಹೊಂದಿರುವ ಜನರು ಸಹ ಈ ರೈಲು ಸೇವೆಯ ಪ್ರಯೋಜನವನ್ನು ಪಡೆಯಬಹುದಾಗಿದೆ.
ಸ್ಲೀಪರ್ ಕೋಚ್‌ಗಳೊಂದಿಗೆ ಓಡಾಡಲಿವೆ ವಂದೇ ಭಾರತ್ ರೈಲುಗಳು :
ದೇಶವನ್ನು ಒಗ್ಗೂಡಿಸುವ ಸಲುವಾಗಿ ರೈಲ್ವೇ 200 ವಂದೇ ಭಾರತ್ ರೈಲುಗಳನ್ನು ತಯಾರಿಸುತ್ತಿದೆ. ಈ ರೈಲುಗಳಲ್ಲಿ ಸ್ಲೀಪರ್ ಕೋಚ್‌ಗಳ ಸೌಲಭ್ಯವೂ ಇರಲಿದೆ ಎಂದು ಹೇಳಲಾಗುತ್ತಿದೆ. ರೈಲ್ವೆ ಮೂಲಗಳ ಪ್ರಕಾರ, ಖಾಸಗಿ ಕಂಪನಿಗಳಾದ ಮೇಧಾ ಮತ್ತು ಐಸಿಎಫ್ ಚೆನ್ನೈ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಸ್ಲೀಪರ್ ಕ್ಲಾಸ್‌ನೊಂದಿಗೆ ರೈಲು ತಯಾರಿಸುವ ಆರ್ಡರ್ ಪಡೆದುಕೊಂಡಿವೆ. 2025 ರ ಅಂತ್ಯದ ವೇಳೆಗೆ 278 ವಂದೇ ಭಾರತ್ ರೈಲುಗಳ ಓಡಾಟ ಆರಂಭವಾಗಲಿದೆ.
ಇದನ್ನೂ ಓದಿ : ಕೇಂದ್ರ ಬಜೆಟ್‌ಗೂ ಮೊದಲು ಸರ್ಕಾರದಿಂದ ರೈತಾಪಿ ವರ್ಗಕ್ಕೆ ಭರ್ಜರಿ ಉಡುಗೊರೆ
ಆಗಸ್ಟ್ 15 ರೊಳಗೆ 78 ರೈಲುಗಳನ್ನು ತಯಾರಿಸುವ ಗುರಿ :
ರೈಲ್ವೆ ಅಧಿಕಾರಿಗಳ ಪ್ರಕಾರ, ವಂದೇ ಭಾರತ್ ಸರಣಿಯ ಮೊದಲ ಹಂತದಲ್ಲಿ 78 ರೈಲುಗಳನ್ನು ತಯಾರಿಸುವ ಕೆಲಸ ನಡೆಯುತ್ತಿದೆ. ಈ ಎಲ್ಲಾ ರೈಲುಗಳು ಕಡಿಮೆ ದೂರವನ್ನು ಕ್ರಮಿಸುವಂಥದ್ದು. ಇವುಗಳಲ್ಲಿ ಚೇರ್ ಕಾರ್‌ಗಳು ಸಹಾ ಇವೆ. ಪ್ರಸ್ತುತ, ದೇಶದಲ್ಲಿ 8 ರೈಲುಗಳು ಕಾರ್ಯಾಚರಣೆ ನಡೆಸುತ್ತಿವೆ. ಆಗಸ್ಟ್ 15, 2023 ರ ವೇಳೆಗೆ ದೇಶದಲ್ಲಿ 75 ವಂದೇ ಭಾರತ್ ರೈಲುಗಳು ಓಡಾಟ ಪ್ರಾರಂಭಿಸಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು. ಇದೀಗ ಈ ಗಡುವು ಹತ್ತಿರವಾಗುತ್ತಿದೆ.
ಬದಲಾಗಲಿದೆ ಪ್ರಯಾಣದ ಅನುಭವ :
ಚೇರ್ ಕಾರ್ ಗಳಿರುವ 78 ರೈಲುಗಳ ಓಡಾಟದ ನಂತರ, ಸ್ಲೀಪರ್ ಕೋಚ್ ಗಳಿರುವ 200 ವಂದೇ ಭಾರತ್ ಸ್ಲೀಪರ್ ಕೋಚ್ ರೈಲುಗಳ ನಿರ್ಮಾಣ ಕಾರ್ಯ ಆರಂಭವಾಗಲಿದೆ. ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಪ್ರಕಾರ, 2025ರ ಅಂತ್ಯದ ವೇಳೆಗೆ 278 ವಂದೇ ಭಾರತ್ ರೈಲುಗಳು ಹಳಿಗಳ ಮೇಲೆ ಓಡಲಿವೆ. 2027 ರ ವೇಳೆಗೆ, 478 ವಂದೇ ಭಾರತ್ ರೈಲುಗಳು ದೇ ಶಾದ್ಯಂತ ಸಂಚರಿಸಲಿವೆ. ಈ ರೈಲುಗಳು ಸ್ಲೀಪರ್ ಮತ್ತು ಚೇರ್ ಕಾರ್ ರೈಲುಗಳನ್ನು ಹೊಂದಿರಲಿವೆ.
ಇದನ್ನೂ ಓದಿ : ತನ್ನ ಗ್ರಾಹಕರಿಗೆ ಬಿಗ್ ಶಾಕ್ ನೀಡಿದ ಎಸ್ಬಿಐ! ಯಾವುದೇ ವ್ಯವಹಾರ ನಡೆಸದಿದ್ದರೂ ಆಟೋ ಡೆಬಿಟ್ ಆಗುತ್ತಿದೆ ಹಣ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.