PAN ಕಾರ್ಡಿಗೆ ಸಂಬಂಧಿಸಿದ ಈ ಕೆಲಸವನ್ನು ಸೆ.30ರ ಮೊದಲು ತಪ್ಪದೇ ಮುಗಿಸಿ
PAN Aadhaar Link: ನೀವು ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡದಿದ್ದರೆ, ಸರ್ಕಾರದ ನಿಯಮಗಳ ಪ್ರಕಾರ, 30 ಸೆಪ್ಟೆಂಬರ್ 2021 ರ ನಂತರ ನಿಮ್ಮ ಪ್ಯಾನ್ ಅಮಾನ್ಯವಾಗುತ್ತದೆ.
ನವದೆಹಲಿ: PAN Aadhaar Link- ಪ್ಯಾನ್ ಕಾರ್ಡ್ ಹೊಂದಿರುವವರಿಗೆ ಪ್ರಮುಖ ಸುದ್ದಿಯಿದೆ. ಪ್ಯಾನ್ ಮತ್ತು ಆಧಾರ್ ಅನ್ನು ಸೆಪ್ಟೆಂಬರ್ 30 ರೊಳಗೆ ಲಿಂಕ್ ಮಾಡದಿದ್ದರೆ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗುತ್ತದೆ ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಭಾರತದ ಪ್ರಮುಖ ದಾಖಲೆಗಳಾಗಿವೆ. ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸುವುದರಿಂದ ಹಿಡಿದು ಬ್ಯಾಂಕಿಂಗ್ ವಹಿವಾಟುಗಳವರೆಗೆ, ಪ್ಯಾನ್ ಕಾರ್ಡ್ ಜೊತೆ ಆಧಾರ್ ಲಿಂಕ್ ಮಾಡುವುದು ಅತ್ಯಗತ್ಯವಾಗಿದೆ.
ಇದರ ಹೊರತಾಗಿ, ಎಲ್ಲಾ ರೀತಿಯ ಹಣಕಾಸು ಕೆಲಸಗಳಿಗೆ ಪ್ಯಾನ್ ಕಾರ್ಡ್ (Pan Card) ಹೊಂದಿರುವುದು ಕಡ್ಡಾಯವಾಗಿದೆ. ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ಆದಾಯ ತೆರಿಗೆ ಇಲಾಖೆ ಸೆಪ್ಟೆಂಬರ್ 30 ಅನ್ನು ಕೊನೆಯ ದಿನಾಂಕವಾಗಿ ನಿಗದಿಪಡಿಸಿದೆ. ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡದಿದ್ದರೆ, ಭಾರೀ ದಂಡವನ್ನು ಪಾವತಿಸಬೇಕಾಗಬಹುದು ಎಂಬುದನ್ನು ನೆನಪಿನಲ್ಲಿಡಿ.
ಇದನ್ನೂ ಓದಿ- PAN Card ಕಳೆದುಹೋದರೆ ಚಿಂತೆ ಬೇಡ, ಈ ವೆಬ್ ಸೈಟ್ ಮೂಲಕ ಸುಲಭವಾಗಿ ಡೌನ್ ಲೋಡ್ ಮಾಡಬಹುದು
ಪ್ಯಾನ್ ಅಮಾನ್ಯವಾಗಿರುತ್ತದೆ:
ಆದಾಯ ತೆರಿಗೆ ಇಲಾಖೆಯ ಪ್ರಕಾರ, ನೀವು ಅದನ್ನು ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಜೊತೆಗೆ ಲಿಂಕ್ (PAN-Aadhaar Link) ಮಾಡದಿದ್ದರೆ, ನಿಮ್ಮ ಪ್ಯಾನ್ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ -139 ಎಎ ಅಡಿಯಲ್ಲಿ ಅಮಾನ್ಯವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಐಟಿಆರ್ ಅನ್ನು ಆನ್‌ಲೈನ್‌ನಲ್ಲಿ ಸಲ್ಲಿಸಲು ಸಾಧ್ಯವಾಗುವುದಿಲ್ಲ. ಇದರಲ್ಲಿ ನಿಮ್ಮ ತೆರಿಗೆ ಮರುಪಾವತಿಯನ್ನು ನಿಲ್ಲಿಸಬಹುದು. ಇದನ್ನು ಹೊರತುಪಡಿಸಿ, ನೀವು ಯಾವುದೇ ಹಣಕಾಸಿನ ವಹಿವಾಟಿನಲ್ಲಿ ಪ್ಯಾನ್ ಅನ್ನು ಬಳಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ನಿಗದಿತ ಸಮಯದೊಳಗೆ ಪ್ಯಾನ್-ಆಧಾರ್ ಎರಡನ್ನೂ ಲಿಂಕ್ ತಪ್ಪದೇ ಲಿಂಕ್ ಮಾಡಿ.
ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡುವುದು ಹೇಗೆ ? (How to link Pan-Aadhaar)
1. ಮೊದಲಿಗೆ ಆದಾಯ ತೆರಿಗೆ ವೆಬ್‌ಸೈಟ್‌ಗೆ ಹೋಗಿ.
2. ಆಧಾರ್ ಕಾರ್ಡ್ (Aadhaar Card) ನಲ್ಲಿ ನೀಡಿರುವಂತೆ ಹೆಸರು, ಪ್ಯಾನ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಿ.
3. ಆಧಾರ್ ಕಾರ್ಡ್ ನಲ್ಲಿ ಹುಟ್ಟಿದ ವರ್ಷವನ್ನು ಮಾತ್ರ ನೀಡಿದರೆ ಚೌಕವನ್ನು ಟಿಕ್ ಮಾಡಿ.
4. ಈಗ ಕೊಟ್ಟಿರುವ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ.
5. ಬಳಿಕ ಲಿಂಕ್ ಆಧಾರ್ ಬಟನ್ ಮೇಲೆ ಕ್ಲಿಕ್ ಮಾಡಿ.
6. ನಿಮ್ಮ ಪ್ಯಾನ್ ಅನ್ನು ಆಧಾರ್ ಜೊತೆ ಲಿಂಕ್ ಮಾಡಲಾಗುತ್ತದೆ.
ಇದನ್ನೂ ಓದಿ- ಪ್ಯಾನ್ ಕಾರ್ಡ್ ಬಳಕೆದಾರರ ಗಮನಕ್ಕೆ! ಮರೆತು ಕೂಡ ಈ ತಪ್ಪನ್ನು ಮಾಡಬೇಡಿ, ಬೀಳಲಿದೆ 10 ಸಾವಿರ ದಂಡ
ಪ್ಯಾನ್ ಕಾರ್ಡ್ ರದ್ದಾದರೆ ನಿರುಪಯುಕ್ತವಾಗುತ್ತದೆ :
ಪ್ಯಾನ್ ಕಾರ್ಡ್ ರದ್ದಾದ ನಂತರ, ಅದನ್ನು ಮತ್ತೆ ಕಾರ್ಯಗತಗೊಳಿಸಬಹುದು. ಆದರೆ ಈ ಮಧ್ಯೆ ಯಾರಾದರೂ ರದ್ದಾದ ಪ್ಯಾನ್ ಕಾರ್ಡ್ (Inoperative Pan card) ಬಳಸಿದರೆ, ಅದನ್ನು ಆದಾಯ ತೆರಿಗೆ ಕಾಯಿದೆಯಡಿ ಸೆಕ್ಷನ್ 272 ಬಿ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಪ್ಯಾನ್ ಹೊಂದಿರುವವರು 10000ರೂ.ವರೆಗೆ ದಂಡವನ್ನು ಪಾವತಿಸಬೇಕಾಗುತ್ತದೆ. ಇದು ಮಾತ್ರವಲ್ಲ, ರದ್ದಾದ ಪ್ಯಾನ್ ಕಾರ್ಡ್ ಅನ್ನು ಮತ್ತೆ ಎಲ್ಲೋ ಬಳಸಿದರೆ, ದಂಡವನ್ನು ಕೂಡ ಹೆಚ್ಚಿಸಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್