ಪ್ಯಾನ್ ಕಾರ್ಡ್ ಬಳಕೆದಾರರ ಗಮನಕ್ಕೆ! ಮರೆತು ಕೂಡ ಈ ತಪ್ಪನ್ನು ಮಾಡಬೇಡಿ, ಬೀಳಲಿದೆ 10 ಸಾವಿರ ದಂಡ

ಪ್ಯಾನ್ ಕಾರ್ಡ್‌ನಲ್ಲಿ ನೀಡಿರುವ ಹತ್ತು ಅಂಕಿಗಳ ಪ್ಯಾನ್ ಸಂಖ್ಯೆಯನ್ನು ಬಹಳ ಎಚ್ಚರಿಕೆಯಿಂದ ತುಂಬಬೇಕು. ಅಲ್ಲಿ ಯಾವುದೇ ಕಾಗುಣಿತ ತಪ್ಪು ಅಥವಾ ಸಂಖ್ಯೆಗೆ ಸಂಬಂಧಿಸಿದ ತಪ್ಪು ಆಗದಂತೆ ನೋಡಿಕೊಳ್ಳಿ..    

Written by - Ranjitha R K | Last Updated : Sep 14, 2021, 02:00 PM IST
  • ಪ್ಯಾನ್ ಕಾರ್ಡ್ ಬಹಳ ಮುಖ್ಯವಾದ ದಾಖಲೆಯಾಗಿದೆ
  • 10 ಸಾವಿರ ರೂಪಾಯಿ ದಂಡ ವಿಧಿಸಬಹುದು
  • ನಿಮ್ಮ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಬಹುದು
ಪ್ಯಾನ್ ಕಾರ್ಡ್ ಬಳಕೆದಾರರ ಗಮನಕ್ಕೆ!  ಮರೆತು ಕೂಡ ಈ ತಪ್ಪನ್ನು  ಮಾಡಬೇಡಿ, ಬೀಳಲಿದೆ 10 ಸಾವಿರ ದಂಡ  title=
ಪ್ಯಾನ್ ಕಾರ್ಡ್ ಬಹಳ ಮುಖ್ಯವಾದ ದಾಖಲೆಯಾಗಿದೆ (file photo)

ನವದೆಹಲಿ : PAN Card Latest News: ಇಂದಿನ ದಿನಗಳಲ್ಲಿ ಆಧಾರ್ ಕಾರ್ಡ್ ನಂತೆಯೇ ಪ್ಯಾನ್ ಕಾರ್ಡ್ (PAN Card) ಕೂಡಾ ಅಗತ್ಯ ದಾಖಲೆಯಾಗಿದೆ. ಈ ಕಾರ್ಡ್ ಇಲ್ಲದೆ, ಹಲವು ಪ್ರಮುಖ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ. ಪ್ರತಿ ಹಣಕಾಸಿನ ವಹಿವಾಟು ಮಾಡುವಾಗ ಮತ್ತು ಬ್ಯಾಂಕಿನಲ್ಲಿ ಖಾತೆ ತೆರೆಯುವ ಸಂದರ್ಭದಲ್ಲಿ ಪಾನ್ ಕಾರ್ಡ್ ಅಗತ್ಯವಾಗಿರುತ್ತದೆ. ಪ್ಯಾನ್ ಕಾರ್ಡ್ ಅನ್ನು ಆಧಾರ್ ನೊಂದಿಗೆ ಲಿಂಕ್ (Aadhaar PAN Link) ಮಾಡುವುದು ಈಗ ಕಡ್ಡಾಯವಾಗಿದೆ. ಇದರೊಂದಿಗೆ, ಪ್ಯಾನ್ ಕಾರ್ಡ್‌ಗೆ ಸಂಬಂಧಿಸಿದ ತಪ್ಪುಗಳು 10 ಸಾವಿರ ರೂಪಾಯಿಗಳ ದಂಡಕ್ಕೆ ಕಾರಣವಾಗಬಹುದು.  

ಎರಡು ಕಾರ್ಡುಗಳಿದ್ದರೆ ಎದುರಾಗುತ್ತವೆ ಸಮಸ್ಯೆಗಳು :
ಪ್ಯಾನ್ ಕಾರ್ಡ್‌ನಲ್ಲಿ (PAN Card) ನೀಡಿರುವ ಹತ್ತು ಅಂಕಿಗಳ ಪ್ಯಾನ್ ಸಂಖ್ಯೆಯನ್ನು ಬಹಳ ಎಚ್ಚರಿಕೆಯಿಂದ ತುಂಬಬೇಕು. ಅಲ್ಲಿ ಯಾವುದೇ ಕಾಗುಣಿತ ತಪ್ಪು ಅಥವಾ ಸಂಖ್ಯೆಗೆ ಸಂಬಂಧಿಸಿದ ತಪ್ಪು ಆಗದಂತೆ ನೋಡಿಕೊಳ್ಳಿ. ಇಲ್ಲವಾದರೆ ಭಾರೀ ದಂಡವನ್ನು ತೆರಬೇಕಾದೀತು. ಇನ್ನು, ಎರಡು ಪ್ಯಾನ್ ಕಾರ್ಡ್‌ಗಳನ್ನು ಹೊಂದಿದ್ದರೂ ಸಹ, ದಂಡ ಪಾವತಿಸಬೇಕಾಗಬಹುದು. ಅಲ್ಲದೆ ನಿಮ್ಮ ಬ್ಯಾಂಕ್ ಖಾತೆಯನ್ನು (Bank account) ಸ್ಥಗಿತಗೊಳಿಸಬಹುದು. ಆದ್ದರಿಂದ, ಎರಡು ಪ್ಯಾನ್ ಕಾರ್ಡ್‌ಗಳನ್ನು ಹೊಂದಿದ್ದರೆ, ತಕ್ಷಣವೇ ನಿಮ್ಮ ಎರಡನೇ ಪ್ಯಾನ್ ಕಾರ್ಡ್ ಅನ್ನು ಇಲಾಖೆಗೆ ಒಪ್ಪಿಸಬೇಕು. 

ಇದನ್ನೂ ಓದಿ : ನಿಮ್ಮ ಮೊಬೈಲ್ ಸಂಖ್ಯೆ ಬದಲಾಗಿದೆಯೇ? ಆಧಾರ್ ಕಾರ್ಡ್‌ಗೆ ತ್ವರಿತವಾಗಿ ಲಿಂಕ್ ಮಾಡಿ, ಹಂತ ಹಂತದ ಪ್ರಕ್ರಿಯೆ ಇಲ್ಲಿದೆ

ಇನ್ನೊಂದು ಪ್ಯಾನ್ ಕಾರ್ಡ್ ಅನ್ನು ಒಪ್ಪಿಸುವುದು ಹೇಗೆ ?
ಪ್ಯಾನ್ ಸಲ್ಲಿಸುವ ಪ್ರಕ್ರಿಯೆ ಸುಲಭ. ಇದಕ್ಕಾಗಿ ಸಾಮಾನ್ಯ ಫಾರ್ಮ್ ಇರುತ್ತದೆ, ಅದನ್ನು  ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ನಿಂದ ಡೌನ್‌ಲೋಡ್ (Download) ಮಾಡಬೇಕಾಗುತ್ತದೆ. ಇದಕ್ಕಾಗಿ, ವೆಬ್‌ಸೈಟ್‌ನಲ್ಲಿ Request For New PAN Card Or/ And Changes Or Correction in PAN Data' ಲಿಂಕ್ ಅನ್ನು ಕ್ಲಿಕ್ ಮಾಡಬೇಕು.  ನಂತರ, ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ಅದನ್ನು ಯಾವುದೇ NSDL ಕಚೇರಿಗೆ ಸಲ್ಲಿಸಿ. ಎರಡನೇ ಪ್ಯಾನ್ ಕಾರ್ಡ್ ಅನ್ನು ಒಪ್ಪಿಸುವಾಗ, ಅದನ್ನು ಭರ್ತಿ ಮಾಡಿದ ಫಾರ್ಮ್ ಜೊತೆಗೆ ಸಲ್ಲಿಸಿ.  ಆನ್‌ಲೈನ್‌ನಲ್ಲಿ (Online) ಕೂಡ  ಈ ಕೆಲಸ ಮಾಡಬಹುದು.

ಇದನ್ನೂ ಓದಿ : Ration Card: ಮನೆಯಲ್ಲಿಯೇ ಕುಳಿತು ನಿಮ್ಮ ಪಡಿತರ ಚೀಟಿಯಲ್ಲಿ ಮೊಬೈಲ್ ಸಂಖ್ಯೆಯನ್ನು ಈ ರೀತಿ ಬದಲಾಯಿಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News