Vijay Mallya case: ನ್ಯಾಯಾಂಗ ನಿಂದನೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದೇಶಬಿಟ್ಟು ಪಲಾಯನಗೈದ ಮದ್ಯ ದೊರೆ ವಿಜಯ್ ಮಲ್ಯಗೆ  ಸುಪ್ರೀಂ ಕೋರ್ಟ್ 4 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಜೊತೆಗೆ 2000 ರೂಪಾಯಿ ದಂಡವನ್ನೂ ಕೂಡ ವಿಧಿಸಲಾಗಿದೆ. ದಂಡ ಪಾವತಿಸಲು ತಪ್ಪಿದಲ್ಲಿ ಎರಡು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದಲ್ಲದೇ 4 ವಾರಗಳಲ್ಲಿ ವಿದೇಶಕ್ಕೆ ವರ್ಗಾವಣೆಗೊಂಡ 40 ಮಿಲಿಯನ್ ಡಾಲರ್ ಹಣವನ್ನು ವಿಜಯ್ ಮಲ್ಯ ಪಾವತಿಸುವಂತೆ ಕೋರ್ಟ್ ಆದೇಶಿಸಿದೆ. ಸುಮಾರು 9,000 ಕೋಟಿ ರುಪಾಯಿ ಸುಸ್ತಿ ಪ್ರಕರಣದಲ್ಲಿ ವಿಜಯ್ ಮಲ್ಯ ಅವರನ್ನು ಪರಾರಿ ಎಂದು ಘೋಷಿಸಲಾಗಿದೆ.


COMMERCIAL BREAK
SCROLL TO CONTINUE READING

ನ್ಯಾಯಮೂರ್ತಿ ಯು.ಯು ಲಲಿತ್ ನೇತೃತ್ವದ ಪೀಠವು ಈ ಪ್ರಕರಣದಲ್ಲಿ ಮಲ್ಯ ಅವರಿಗೆ 2000 ರೂಪಾಯಿ ದಂಡ ವಿಧಿಸಿದೆ. ಈ ಪ್ರಕರಣದಲ್ಲಿ ಶಿಕ್ಷೆಯ ಅವಧಿಯನ್ನು ನಿಗದಿಪಡಿಸುವ ನಿರ್ಧಾರವನ್ನು ನ್ಯಾಯಾಲಯವು ಮಾರ್ಚ್ 10 ರಂದು ಕಾಯ್ದಿರಿಸಿತ್ತು. ಇದಲ್ಲದೆ ಮಲ್ಯ ವಿರುದ್ಧದ ವಿಚಾರಣೆಯಲ್ಲಿ ಇನ್ನು ಮುಂದೆ ಯಾವುದೇ ಪ್ರಗತಿ ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿತ್ತು. 2017ರಲ್ಲಿ ನ್ಯಾಯಾಂಗ ನಿಂದನೆ ಆರೋಪದಡಿ ಮಲ್ಯಗೆ ಶಿಕ್ಷೆ ವಿಧಿಸಲಾಗಿತ್ತು.


ಇದನ್ನೂ ಓದಿ-New Tyre Design: ವಾಹನ ಸವಾರರಿಗೊಂದು ಕೆಲಸದ ಸುದ್ದಿ, ಅಕ್ಟೋಬರ್ 1 ರಿಂದ ಬದಲಾಗಲಿವೆ ನಿಮ್ಮ ವಾಹನಗಳ ಟೈರ್


2020ರಲ್ಲಿ SC ಅರ್ಜಿಯನ್ನು ತಿರಸ್ಕರಿಸಿತ್ತು
ಇದಾದ ಬಳಿಕ, 2017ರ ತೀರ್ಪಿನ ಮರುಪರಿಶೀಲನೆಗಾಗಿ 2020ರಲ್ಲಿ ವಿಜಯ್ ಮಲ್ಯ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. ನ್ಯಾಯಾಲಯದ ಆದೇಶಗಳನ್ನು ಧಿಕ್ಕರಿಸಿದ ಮತ್ತು ತನ್ನ ಮಕ್ಕಳ ಖಾತೆಗಳಿಗೆ $40 ಮಿಲಿಯನ್ ವರ್ಗಾಯಿಸಿ, ನ್ಯಾಯಾಂಗ ನಿಂದನೆ ಮಾಡಿದ್ದಕ್ಕಾಗಿ ನ್ಯಾಯಾಲಯವು ಈ ಮಲ್ಯಗೆ ಈ ಶಿಕ್ಷೆ ವಿಧಿಸಿತ್ತು. ಮಲ್ಯ ಮಾರ್ಚ್ 2016 ರಿಂದ ಬ್ರಿಟನ್ ನಲ್ಲಿ ತರೆಮರೆಸಿಕೊಂಡಿದ್ದಾರೆ. 2017 ರ ಏಪ್ರಿಲ್ 18 ರಂದು ಸ್ಕಾಟ್ಲೆಂಡ್ ಯಾರ್ಡ್‌ನಿಂದ ಹಸ್ತಾಂತರ ವಾರಂಟ್ ಮೇಲೆ ಮಲ್ಯಗೆ ಜಾಮೀನು ನೀಡಲಾಗಿತ್ತು.


ಇದನ್ನೂ ಓದಿ-EPFO: ದೇಶದ 73 ಲಕ್ಷ ಪಿಂಚಣಿದಾರರಿಗೊಂದು ಸಂತಸದ ಸುದ್ದಿ ! ಶೀಘ್ರದಲ್ಲಿಯೇ ಸರ್ಕಾರ ಈ ವ್ಯವಸ್ಥೆ ಜಾರಿಗೆ ತರಲಿದೆ


ಆದರೆ, ಇದೀಗ ಈ ಪ್ರಕರಣದಲ್ಲಿ ಮಲ್ಯ 4 ವಾರಗಳಲ್ಲಿ ಎಸ್‌ಬಿಐಗೆ 40 ಮಿಲಿಯನ್ ಡಾಲರ್ ಪಾವತಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಈ ಪಾವತಿಯನ್ನು ಬಡ್ಡಿಸಮೇತ ಮಾಡಬೇಕು. 4 ವಾರಗಳಲ್ಲಿ ಪಾವತಿ ಮಾಡದಿದ್ದರೆ, ಆಸ್ತಿಯನ್ನು ಲಗತ್ತಿಸಬಹುದು ಎಂದು ನ್ಯಾಯಪೀಠ ಹೇಳಿದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ