Vote without Voter ID: ವೋಟರ್ ಐಡಿ ಇಲ್ಲದಿದ್ದರೂ ಮತ ಚಲಾಯಿಸಬಹುದು, ಸರಿಯಾದ ವಿಧಾನ ತಿಳಿಯಿರಿ
ಮತದಾರರ ಗುರುತಿನ ಚೀಟಿ ಇಲ್ಲದಿದ್ದರೆ, ಚುನಾವಣಾ ಆಯೋಗವು 11 ರೀತಿಯ ಇತರ ದಾಖಲೆಗಳನ್ನು ಗುರುತಿನ ಚೀಟಿ ಎಂದು ಗುರುತಿಸಿದೆ. ಈ ದಾಖಲೆಗಳನ್ನು ತೋರಿಸಿ ಮತ ಚಲಾಯಿಸುವುದು ಸಾಧ್ಯವಾಗುತ್ತದೆ.
ನವದೆಹಲಿ : ಮುಂದಿನ ವರ್ಷ 5 ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ (Assembly election) ನಡೆಯಲಿದೆ. ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಗೆಲುವಿಗಾಗಿ ಶತಾಯಗತಾಯ ಪ್ರಯತ್ನ ನಡೆಸುತ್ತಿವೆ. ಈಗ ಯಾರನ್ನು ಆಯ್ಕೆ ಮಾಡಬೇಕೆಂದು ಮತದಾರ ನಿರ್ಧರಿಸಬೇಕು. ಯಾವುದೇ ಪಕ್ಷ ಗೆಲ್ಲಲು ಮತದಾನ ಅಗತ್ಯ. ಮತದಾನದ ದಿನದಂದು ಮತ ಚಲಾಯಿಸಲು ಗುರುತಿನ ಚೀಟಿಯಾಗಿ (Voter ID), ಚುನಾವಣಾ ಆಯೋಗವು ಎಲ್ಲಾ ಮತದಾರರಿಗೆ ಮತದಾರರ ಗುರುತಿನ ಚೀಟಿಯನ್ನು ನೀಡುತ್ತದೆ. ಅಂದರೆ ಮತದಾರರ ಗುರುತಿನ ಚೀಟಿ. ಮತದಾರರಲಿ ಒಂದು ವೇಳೆ ಗುರುತಿನ ಚೀಟಿ ಇಲ್ಲದೆ ಹೋದರೆ ಚಿಂತೆ ಮಾಡಬೇಕಿಲ್ಲ. ವೋಟರ್ ಕಾರ್ಡ್ ಇಲ್ಲದೆಯೂ ಮತ ಚಲಾಯಿಸುವುದು ಸಾಧ್ಯವಾಗುತ್ತದೆ.
ಮತದಾರರ ಪಟ್ಟಿಯಲ್ಲಿ ಹೆಸರು ಇರಬೇಕು:
ಇದಕ್ಕಾಗಿ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇರಬೇಕು. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಮತ್ತು ನಿಮ್ಮ ಬಳಿ ಮತದಾರರ ಗುರುತಿನ ಚೀಟಿ (Voter ID) ಇಲ್ಲದಿದ್ದರೆ, ಚುನಾವಣಾ ಆಯೋಗವು 11 ರೀತಿಯ ಇತರ ದಾಖಲೆಗಳನ್ನು ಗುರುತಿನ ಚೀಟಿ ಎಂದು ಗುರುತಿಸಿದೆ. ಈ ದಾಖಲೆಗಳನ್ನು ತೋರಿಸಿ ಮತ ಚಲಾಯಿಸುವುದು ಸಾಧ್ಯವಾಗುತ್ತದೆ. ಮತದಾರ ಪಟ್ಟಿಯಲ್ಲಿ ಹೆಸರಿಲ್ಲದೆ ಹೋದರೆ ಮಾತ್ರ ಯಾವ ದಾಖಲೆಯೂ ಕೂಡಾ ಕೆಲಸಕ್ಕೆ ಬರುವುದಿಲ್ಲ.
ಇದನ್ನೂ ಓದಿ : ಎಂಟು ರೂಪಾಯಿಯಷ್ಟು ಅಗ್ಗವಾಯಿತು ಪೆಟ್ರೋಲ್, ಇಂದು ಮಧ್ಯರಾತ್ರಿಯಿಂದಲೇ ಜಾರಿ
ಈ ದಾಖಲೆಗಳ ಆಧಾರದ ಮೇಲೆ ಮತ ಚಲಾಯಿಸಬಹುದು :
ನಿಮ್ಮ ಬಳಿ ಮತದಾರರ ಗುರುತಿನ ಚೀಟಿ ಇಲ್ಲದಿದ್ದರೆ, ಇತರ ದಾಖಲೆಗಳನ್ನು ಬಳಸಿ ಮತದಾನ ಮಾಡಬಹುದು. ಮತದಾರರ ಗುರುತಿನ ಚೀಟಿಯನ್ನು ಹೊರತುಪಡಿಸಿ, ಚುನಾವಣಾ ಆಯೋಗವು (Election commission) ಈ 11 ಇತರ ರೀತಿಯ ದಾಖಲೆಗಳನ್ನು ಸಹ ಗುರುತಿಸಿದೆ.
1. ಪಾಸ್ಪೋರ್ಟ್.
2. ಡ್ರೈವಿಂಗ್ ಲೈಸೆನ್ಸ್.
3.ಕೇಂದ್ರ ಮತ್ತು ರಾಜ್ಯ ಸರ್ಕಾರದ ಉದ್ಯೋಗಿಯಾಗಿದ್ದರೆ ಅಥವಾ PSU ಮತ್ತು ಪಬ್ಲಿಕ್ ಲಿಮಿಟೆಡ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಕಂಪನಿಯ ಫೋಟೋ ID ಆಧಾರದ ಮೇಲೆ ಮತದಾನವನ್ನು ಮಾಡಬಹುದು.
4. ಪ್ಯಾನ್ ಕಾರ್ಡ್ (PAN Card).
5. ಆಧಾರ್ ಕಾರ್ಡ್ (Aadhaar card).
6. ಪೋಸ್ಟ್ ಆಫೀಸ್ ಮತ್ತು ಬ್ಯಾಂಕ್ ನೀಡಿದ ಪಾಸ್‌ಬುಕ್.
7. MGNREGA ಜಾಬ್ ಕಾರ್ಡ್.
8. ಕಾರ್ಮಿಕ ಸಚಿವಾಲಯ ನೀಡಿದ ಆರೋಗ್ಯ ವಿಮಾ ಕಾರ್ಡ್.
9. ನಿಮ್ಮ ಫೋಟೋವನ್ನು ಅಂಟಿಸುವ ಮತ್ತು ದೃಢೀಕರಿಸಿದ ಪಿಂಚಣಿ ಕಾರ್ಡ್.
10. ರಾಷ್ಟ್ರೀಯ ಜನಸಂಖ್ಯಾ ನೋಂದಣಿ (NPR) ಮೂಲಕ ನೀಡಲಾದ ಸ್ಮಾರ್ಟ್ ಕಾರ್ಡ್.
11. MPಗಳು/MLAಗಳು/MLCಗಳು ನೀಡಿದ ಅಧಿಕೃತ ಗುರುತಿನ ಚೀಟಿ.
ಇದನ್ನೂ ಓದಿ : Petrol Diesel Price Today: ವಾಹನ ಸವಾರರೇ ಗಮನಿಸಿ, ಇಂದಿನ ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಸ್ಥಿರ
ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಹೇಗೆ ಪರಿಶೀಲಿಸುವುದು ?
ಪ್ರತಿ ಚುನಾವಣೆಗೂ ಮುನ್ನ ಚುನಾವಣಾ ಆಯೋಗವು ಮತದಾರರ ಪಟ್ಟಿಯನ್ನು ಪರಿಷ್ಕರಿಸುತ್ತದೆ. ಈ ಸಂದರ್ಭದಲ್ಲಿ, ಹೊಸ ಮತದಾರರ ಹೆಸರನ್ನು ಸೇರಿಸಲಾಗುತ್ತದೆ. ಕೆಲವೊಮ್ಮೆ ಮತದಾರರ ಪಟ್ಟಿಯಿಂದ ಮತದಾರರ ಹೆಸರನ್ನು ಕಡಿತಗೊಳಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಚುನಾವಣೆಗೂ ಮುನ್ನ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದಿದ್ದಲ್ಲಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುವ ಮೂಲಕ ಮತ್ತೊಮ್ಮೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಳ್ಳಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.