Voter ID Card: ಮನೆಯಲ್ಲಿ ಕುಳಿತು ಆನ್‌ಲೈನ್‌ನಲ್ಲಿ ವೋಟರ್ ಐಡಿ ಪಡೆಯಲು ಈ ರೀತಿ ಅರ್ಜಿ ಸಲ್ಲಿಸಿ

How to get Voter ID Card: ತಮ್ಮ ಮೊದಲ ಮತವನ್ನು ಚಲಾಯಿಸಲು ಎಲ್ಲರೂ ಉತ್ಸುಕರಾಗಿರುತ್ತಾರೆ. ನೀವು 18 ವರ್ಷ ವಯಸ್ಸಿನವರಾಗಿದ್ದರೆ ಮತ್ತು ನಿಮ್ಮ ಮತವನ್ನು ಚಲಾಯಿಸಲು ಬಯಸಿದರೆ,  ಮನೆಯಲ್ಲಿಯೇ ಕುಳಿತು ನಿಮ್ಮ ಮತದಾರರ ಗುರುತಿನ ಚೀಟಿ ಅಂದರೆ ವೋಟರ್ ಐಡಿ ಪಡೆಯುವ ಒಂದು ಮಾರ್ಗವನ್ನು ನಾವು ನಿಮಗೆ ಹೇಳುತ್ತೇವೆ. 

Written by - Yashaswini V | Last Updated : Sep 17, 2021, 08:50 AM IST
  • ಆನ್‌ಲೈನ್‌ನಲ್ಲಿ ವೋಟರ್ ಐಡಿ ಕಾರ್ಡ್ ಮಾಡಬಹುದು
  • ಹೊಸ ವೋಟರ್ ಐಡಿಗಾಗಿ ನೋಂದಾಯಿಸಿಕೊಂಡವರಿಗೆ 1 ತಿಂಗಳಲ್ಲಿ ಮತದಾರರ ಚೀಟಿಯು ನಿಮ್ಮ ಮನೆ ಬಾಗಿಲಿಗೇ ಬರುತ್ತದೆ
  • ಇ-ವೋಟರ್ ಐಡಿ ಕಾರ್ಡ್ ಕೂಡ ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತದೆ
Voter ID Card: ಮನೆಯಲ್ಲಿ ಕುಳಿತು ಆನ್‌ಲೈನ್‌ನಲ್ಲಿ ವೋಟರ್ ಐಡಿ ಪಡೆಯಲು ಈ ರೀತಿ ಅರ್ಜಿ ಸಲ್ಲಿಸಿ title=
How to get Voter ID Card in online: ಮನೆಯಲ್ಲಿ ಕುಳಿತು ಆನ್‌ಲೈನ್‌ನಲ್ಲಿ ವೋಟರ್ ಐಡಿ ಪಡೆಯಲು ಈ ರೀತಿ ಅರ್ಜಿ ಸಲ್ಲಿಸಿ

ನವದೆಹಲಿ: How to get Voter ID Card- ಮುಂದಿನ ವರ್ಷ ಅಂದರೆ 2022 ರಲ್ಲಿ, ದೇಶದ ಅತಿದೊಡ್ಡ ಜನಸಂಖ್ಯೆಯ ರಾಜ್ಯವಾದ ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಸಿದ್ಧತೆಯಲ್ಲಿ ನಿರತವಾಗಿವೆ. ಚುನಾವಣೆಯನ್ನು ಪ್ರಜಾಪ್ರಭುತ್ವದ ಹಬ್ಬವೆಂದು ಪರಿಗಣಿಸಲಾಗುತ್ತದೆ ಮತ್ತು ಜನ ಸಾಮಾನ್ಯರ ಮತವನ್ನು ಆಯುಧ ಎಂದು ಕರೆಯಲಾಗುತ್ತದೆ. ಆದರೆ ಮತ ಚಲಾಯಿಸಲು ಕೆಲವು ನಿಯಮಗಳಿವೆ. 18 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿ ಮತ ಚಲಾಯಿಸಬಹುದು, ಆದರೆ ಅದಕ್ಕಾಗಿ ಮತದಾರರ ಗುರುತಿನ ಚೀಟಿ ಅಂದರೆ ವೋಟರ್ ಐಡಿ ಅನ್ನು ಹೊಂದಿರಬೇಕು.

ಇಂದು ನಾವು ನಿಮಗೆ ಅಂತಹ ಒಂದು ಮಾರ್ಗವನ್ನು ಹೇಳಲಿದ್ದೇವೆ, ಅದನ್ನು ಬಳಸಿಕೊಂಡು ಒಂದು ರೂಪಾಯಿ ಅನ್ನೂ ಖರ್ಚು ಮಾಡದೆ ನಿಮ್ಮ ಮತದಾರರ ಗುರುತಿನ ಚೀಟಿಯನ್ನು ಮನೆಯಲ್ಲಿಯೇ ಕುಳಿತು ಪಡೆಯಬಹುದು. ಆದ್ದರಿಂದ ಆನ್‌ಲೈನ್‌ನಲ್ಲಿ ಮತದಾರರ ಗುರುತಿನ ಚೀಟಿಯನ್ನು (How to get Voter ID Card) ಪಡೆಯುವ ಸಂಪೂರ್ಣ ಪ್ರಕ್ರಿಯೆಯನ್ನು ತಿಳಿಯಿರಿ.

ಇದನ್ನೂ ಓದಿ- SBI Festive Bonanza : SBI ಗ್ರಾಹಕರಿಗೆ ಸಿಹಿ ಸುದ್ದಿ : ಗೃಹ ಸಾಲದ ಬಡ್ಡಿ ದರವನ್ನ ಶೇ.6.70 ಕ್ಕೆ ಇಳಿಸಿದ ಬ್ಯಾಂಕ್

ಮತದಾರರ ಗುರುತಿನ ಚೀಟಿಯನ್ನು ಪಡೆಯಲು ಹೇಗೆ ಅರ್ಜಿ ಸಲ್ಲಿಸಬೇಕು?
ನೀವು 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದರೆ, ನೀವು ಸುಲಭವಾಗಿ ವೋಟರ್ ಐಡಿಗಾಗಿ (Voter ID) ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ, ನೀವು ಕೇವಲ ಮೊಬೈಲ್ ಸಂಖ್ಯೆ, ಇಮೇಲ್ ಐಡಿ ಮತ್ತು ಯಾವುದೇ ವಿಳಾಸ ಪುರಾವೆ ಹೊಂದಿರಬೇಕು. ನೀವು ಭಾರತೀಯ ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್‌ಗೆ ಹೋಗಬೇಕು. ಈ ಲಿಂಕ್‌ನಿಂದ ನೀವು ನೇರವಾಗಿ ರಾಷ್ಟ್ರೀಯ ಮತದಾರರ ಸೇವೆಗಳ ಪೋರ್ಟಲ್‌ಗೆ ಹೋಗಬಹುದು https://nvsp.in/ . ಇಲ್ಲಿಂದ ನೀವು ಹೊಸ ಮತದಾರರಾಗಿ/ಮತದಾರರಾಗಿ ನೋಂದಾಯಿಸಿ ಮತ್ತು ಇಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ಅರ್ಜಿಯನ್ನು ಭರ್ತಿ ಮಾಡಬೇಕು. 

ಈ ದಾಖಲೆಗಳ ಅಗತ್ಯವಿದೆ:
ಆನ್‌ಲೈನ್ ವೋಟರ್ ಐಡಿ ನೋಂದಣಿಗೆ (Voter ID Registration in Online) ನೀವು ವಿಳಾಸ ಪುರಾವೆ ಹೊಂದಿರಬೇಕು. ವಿಳಾಸ ಪುರಾವೆಗಾಗಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಜನನ ಪ್ರಮಾಣಪತ್ರ, ಚಾಲನಾ ಪರವಾನಗಿ, ಪಾಸ್ ಪೋರ್ಟ್ ಇತ್ಯಾದಿ ಯಾವುದಾದರೂ ಸ್ಕ್ಯಾನ್ ಪ್ರತಿಯನ್ನು ಪೋರ್ಟಲ್ ನಲ್ಲಿ ಅಪ್ಲೋಡ್ ಮಾಡಬೇಕು. ಇದರ ಹೊರತಾಗಿ, ನಿಮ್ಮ ಪಾಸ್ಪೋರ್ಟ್ ಗಾತ್ರದ ಛಾಯಾಚಿತ್ರವೂ ಅಗತ್ಯವಾಗಿರುತ್ತದೆ.

ಇದನ್ನೂ ಓದಿ- Post office Jan Dhan Account: ಅಂಚೆ ಕಚೇರಿಯಲ್ಲಿ ಜನ್ ಧನ್ ಖಾತೆ ತೆರೆಯಿರಿ, 2 ಲಕ್ಷ ಲಾಭ ಪಡೆಯಿರಿ

ಐಡಿ ಕಾರ್ಡ್ ಮನೆಗೆ ತಲುಪುತ್ತದೆ:
ನೀವು ಚುನಾವಣಾ ಆಯೋಗದ ಈ ಪೋರ್ಟಲ್‌ನಿಂದ ಮತದಾರರ ಗುರುತಿನ (Voter ID) ಚೀಟಿಗಾಗಿ ಅರ್ಜಿ ಸಲ್ಲಿಸಿದರೆ, ಸುಮಾರು 1 ತಿಂಗಳ ನಂತರ ಮತದಾರರ ಗುರುತಿನ ಚೀಟಿ ನಿಮ್ಮ ಮನೆಗೆ ತಲುಪುತ್ತದೆ. ಇದಕ್ಕಾಗಿ ನೀವು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಮತದಾರರ ಗುರುತಿನ ಚೀಟಿಯನ್ನು ತಯಾರಿಸಲು ನೀವು ಕಂಪ್ಯೂಟರ್ ಅನ್ನು ಹೊಂದಿರಬೇಕು ಎಂಬ ಅವಶ್ಯಕತೆ ಇಲ್ಲ. ನಿಮ್ಮ ಮೊಬೈಲ್ ಫೋನ್‌ನಿಂದಲೂ ನೀವು ವೋಟರ್ ಐಡಿಗಾಗಿ ಅರ್ಜಿ ಸಲ್ಲಿಸಬಹುದು.

ಇದು ಕೂಡ ಕೆಲಸ ಮಾಡಬಹುದು:
ಚುನಾವಣಾ ಆಯೋಗದ ಈ ಸೈಟ್‌ನಿಂದ ನೀವು ಪೂರ್ವ ನಿರ್ಮಿತ ಮತದಾರರ ಗುರುತಿನ ಚೀಟಿಯನ್ನು ಡೌನ್‌ಲೋಡ್ ಮಾಡಬಹುದು. ಇದರ ಹೊರತಾಗಿ, ನಿಮ್ಮ ವಿಧಾನಸಭೆ ಮತ್ತು ಲೋಕಸಭಾ ಕ್ಷೇತ್ರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿಂದ ಪಡೆಯಬಹುದು. ಹೊಸ ಐಡಿ ಕಾರ್ಡ್ ಮಾಡಲು ಸುಮಾರು 1 ತಿಂಗಳು ಬೇಕಾಗುತ್ತದೆ ಎಂಬುದನ್ನು ನೆನಪಿಡಿ. ಹಾಗಾಗಿ ಹೊಸ ವೋಟರ್ ಐಡಿಗಾಗಿ ನೋಂದಾಯಿಸಿಕೊಂಡವರು ಈ ಪೋರ್ಟಲ್ ಮೂಲಕ ತಮ್ಮ ಅರ್ಜಿಯನ್ನು ಟ್ರ್ಯಾಕ್ ಮಾಡಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News