Indian Railways: ರೈಲು ಪ್ರಯಾಣದ ವೇಳೆ ಈ ತಪ್ಪು ಮಾಡಿದರೆ ದಂಡ ಗ್ಯಾರಂಟಿ
Indian Railways: ರಾತ್ರಿಯ ಸಮಯದಲ್ಲಿ ಅನಧಿಕೃತವಾಗಿ ಟಿಕೆಟ್ ಇಲ್ಲದೆಯೇ ಪ್ರಯಾಣಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ವೆಸ್ಟರ್ನ್ ರೈಲ್ವೇಸ್ ಸಹ `ಬ್ಯಾಟ್‌ಮ್ಯಾನ್ 2.0` ಟಿಕೆಟ್ ತಪಾಸಣೆ ಅಭಿಯಾನವನ್ನು ಪ್ರಾರಂಭಿಸಿದೆ.
Indian Railways: ದೇಶಾದ್ಯಂತ ಆರಾಮದಾಯಕ ಪ್ರಯಾಣಕ್ಕೆ ಹೆಸರುವಾಸಿಯಾಗಿರುವ ಭಾರತೀಯ ರೈಲ್ವೆ ಆರ್ಥಿಕವಾಗಿಯೂ ಕೂಡ ಜನಸಾಮಾನ್ಯರ ಕೈ ಎಟುಕುವಂತಿದೆ. ಆದಾಗ್ಯೂ, ಇನ್ನೂ ಸಹ ಅನೇಕ ಜನರು ರೈಲಿನಲ್ಲಿ ಟಿಕೆಟ್ ಇಲ್ಲದೆಯೇ ಪ್ರಯಾಣಿಸುತ್ತಾರೆ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ವೆಸ್ಟರ್ನ್ ರೈಲ್ವೇಸ್ ಸಹ "ಬ್ಯಾಟ್‌ಮ್ಯಾನ್ 2.0" ಟಿಕೆಟ್ ತಪಾಸಣೆ ಅಭಿಯಾನವನ್ನು ಪ್ರಾರಂಭಿಸಿದೆ.
ಕೇವಲ ಎರಡೇ ದಿನದಲ್ಲಿ 3.40 ಲಕ್ಷ ರೂಪಾಯಿ ದಂಡ ಸಂಗ್ರಹಿಸಿದ ಬ್ಯಾಟ್‌ಮ್ಯಾನ್ 2.0:
ರಾತ್ರಿಯ ಸಮಯದಲ್ಲಿ ಅನಧಿಕೃತವಾಗಿ ಟಿಕೆಟ್ ಇಲ್ಲದೆಯೇ ಪ್ರಯಾಣ ಮಾಡುವುದನ್ನು ತಡೆಯುವ ಗುರಿಯೊಂದಿಗೆ ಪಶ್ಚಿಮ ರೈಲ್ವೇಯು "ಬ್ಯಾಟ್‌ಮ್ಯಾನ್ 2.0"(Batman 2.0) ಟಿಕೆಟ್ ತಪಾಸಣೆ ಅಭಿಯಾನವನ್ನು ಆರಂಭಿಸಿದೆ. ಈ ಉಪಕ್ರಮವು ಪ್ರಯಾಣಿಕರು ಟಿಕೆಟ್ ಇಲ್ಲದೆ ಪ್ರಯಾಣಿಸುವುದನ್ನು ಅಥವಾ ಉನ್ನತ ದರ್ಜೆಯಲ್ಲಿ ಪ್ರಯಾಣಿಸುವುದನ್ನು ಅದರಲ್ಲೂ ವಿಶೇಷವಾಗಿ ರಾತ್ರಿ ವೇಳೆ ಈ ಕೃತ್ಯ ಎಸಗುವುದನ್ನು ತಡೆಯುತ್ತದೆ. ಈ ಉಪಕ್ರಮದ ಅಡಿಯಲ್ಲಿ, ಕೇವಲ ಎರಡೇ ದಿನದಲ್ಲಿ ಮಧ್ಯರಾತ್ರಿಯಲ್ಲಿ ಬ್ಯಾಟ್‌ಮ್ಯಾನ್ ತಂಡವು ಅಂದಾಜು 3.40 ಲಕ್ಷ ರೂ.ಗಳ ದಂಡವನ್ನು ಸಂಗ್ರಹಿಸಿದೆ.
ಇದನ್ನೂ ಓದಿ- Cheque ಹಿಂಭಾಗದಲ್ಲಿ ಯಾವಾಗ ಸಹಿ ಹಾಕಬೇಕು?
ಪಶ್ಚಿಮ ರೈಲ್ವೇಯ (Western Railway) ಹಿರಿಯ ವಾಣಿಜ್ಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಜಾಗೃತ ಟಿಕೆಟ್ ತಪಾಸಣೆ ತಂಡವು ಏಪ್ರಿಲ್, 2024 ರಲ್ಲಿ ಹಲವಾರು ಟಿಕೆಟ್ ತಪಾಸಣೆ ಡ್ರೈವ್‌ಗಳನ್ನು ನಡೆಸಿತು. ಇದರ ಪರಿಣಾಮವಾಗಿ 20.84 ಕೋಟಿ ರೂಪಾಯಿಗಳನ್ನು ವಸೂಲು ಮಾಡಲಾಗಿದೆ, ಇದರಲ್ಲಿ ಮುಂಬೈ ಉಪನಗರ ವಿಭಾಗದಿಂದ 5.57 ಕೋಟಿ ರೂ. ವಸೂಲಿಯಾಗಿದೆ ಎಂದು ತಿಳಿದುಬಂದಿದೆ.
ಪಶ್ಚಿಮ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಮಿತ್ ಠಾಕೂರ್ ಈ ಕುರಿತಂತೆ ಮಾಹಿತಿ ನೀಡಿದ್ದು, ಬುಕ್ ಮಾಡದ ಲಗೇಜ್ ಪ್ರಕರಣಗಳು ಸೇರಿದಂತೆ 2.94 ಲಕ್ಷ ಟಿಕೆಟ್ ರಹಿತ/ಅನಿಯಮಿತ ಪ್ರಯಾಣಿಕರನ್ನು ಪತ್ತೆಹಚ್ಚುವ ಮೂಲಕ 20.84 ಕೋಟಿ ರೂ. ದಂಡವನ್ನು (Penalty) ವಸೂಲಿ ಮಾಡಲಾಗಿದೆ. ಇದಲ್ಲದೆ, ಏಪ್ರಿಲ್ ತಿಂಗಳಲ್ಲಿ, ಪಶ್ಚಿಮ ರೈಲ್ವೆ ಮುಂಬೈ ಉಪನಗರ ವಿಭಾಗದಲ್ಲಿ 98 ಸಾವಿರ ಪ್ರಕರಣಗಳನ್ನು ಪತ್ತೆ ಹಚ್ಚಿ 5.57 ಕೋಟಿ ರೂ. ದಂಡವನ್ನು ಸಂಗ್ರಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಎಸಿ ಸ್ಥಳೀಯ ರೈಲುಗಳಿಗೆ ಅನಧಿಕೃತ ಪ್ರವೇಶವನ್ನು ತಡೆಗಟ್ಟಲು ನಿಯಮಿತ ಅನಿರೀಕ್ಷಿತ ಟಿಕೆಟ್ ತಪಾಸಣೆ ಡ್ರೈವ್‌ಗಳನ್ನು ನಡೆಸಲಾಗುತ್ತದೆ. ಈ ಅಭಿಯಾನಗಳ ಪರಿಣಾಮವಾಗಿ, ಏಪ್ರಿಲ್ 2024 ರಲ್ಲಿ 4000 ಕ್ಕೂ ಹೆಚ್ಚು ಅನಧಿಕೃತ ಪ್ರಯಾಣಿಕರಿಗೆ ದಂಡ ವಿಧಿಸಲಾಗಿದ್ದು, ಒಟ್ಟು. 13.71 ಲಕ್ಷ ರೂ.ಗಳನ್ನು ದಂಡವಾಗಿ ವಸೂಲು ಮಾಡಲಾಗಿದೆ.
ವಾಸ್ತವವಾಗಿ, ರೈಲಿನಲ್ಲಿ ಟಿಕೆಟ್ ಇಲ್ಲದೆಯೇ ಪ್ರಯಾಣಿಸುವುದು ತಪ್ಪಷ್ಟೇ ಅಲ್ಲ ಇದು ಕಾನೂನಿನ ದೃಷ್ಟಿಯಲ್ಲಿ ಅಪರಾಧವೂ ಆಗಿದೆ. ಇದಕ್ಕಾಗಿ, ಕಾನೂನಿನಲ್ಲಿ ದಂಡ, ಜೈಲು ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.