Railway Rules for Lower Berth: ರೈಲಿನಲ್ಲಿ ಲೋವರ್ ಬರ್ತ್ ಪಡೆಯಲು ಈ ನಿಮಯಗಳನ್ನು ತಿಳಿಯಿರಿ
Railway Rules for Lower Berth: ರೈಲಿನಲ್ಲಿ ಪ್ರಯಾಣಿಸುವಾಗ ಮಹಿಳೆಯರು, ವಯಸ್ಸಾದವರಿಗೆ ಅನುಕೂಲವಾಗಲೆಂದು ಕೆಳ ಬರ್ತ್ಗಳ ವ್ಯವಸ್ಥೆ ಮಾಡಲಾಗಿರುತ್ತದೆ. ಆದರೆ, ಟಿಕೆಟ್ ಬುಕ್ ಮಾಡುವಾಗ ಲೋವರ್ ಬರ್ತ್ ಪಡೆಯುವುದು ಅಷ್ಟು ಸುಲಭವಲ್ಲ.
Railway Rules for Lower Berth: ಮಹಿಳೆಯರು, ವಯಸ್ಸಾದವರೊಂದಿಗೆ ದೂರದ ಪ್ರಯಾಣ ಕೈಗೊಳ್ಳುವಾಗ ಲೋವರ್ ಬರ್ತ್ ಪಡೆಯುವುದು ಒಳ್ಳೆಯದು. ವಾಸ್ತವವಾಗಿ, ವಯೋವೃದ್ಧರು, ಗರ್ಭಿಣಿಯರಿಗೆ ಅನುಕೂಲಕರ ಪ್ರಯಾಣಕ್ಕಾಗಿ ಭಾರತೀಯ ರೈಲ್ವೆ ಇಲಾಖೆಯು ವಿಶೇಷ ವ್ಯವಸ್ಥೆಯನ್ನು ಮಾಡಿದೆ. ಈ ರೈಲ್ವೆ ನಿಯಮಗಳ (Railway Rules) ಅಡಿಯಲ್ಲಿ ಟಿಕೆಟ್ ಬುಕ್ ಮಾಡುವುದರಿಂದ ಸುಲಭವಾಗಿ ಲೋವರ್ ಬರ್ತ್ ಪಡೆಯಬಹುದು. ಇದಕ್ಕಾಗಿ ರೈಲ್ವೆ ಲೋವರ್ ಬರ್ತ್‌ಗೆ ಸಂಬಂಧಿಸಿದ ನಿಯಮಗಳೇನು? ಎಂದು ತಿಳಿಯೋಣ...
ರೈಲ್ವೆ ಲೋವರ್ ಬರ್ತ್‌ಗೆ ಸಂಬಂಧಿಸಿದ ನಿಯಮಗಳೇನು?
ವಾಸ್ತವವಾಗಿ, ಭಾರತೀಯ ರೈಲ್ವೇಯಲ್ಲಿ (Indian Railways) ವಯೋವೃದ್ಧರಿಗಾಗಿ ಲೋವರ್ ಬರ್ತ್‌ನಲ್ಲಿ ಆದ್ಯತೆ ಸಿಗುತ್ತದೆ. ಟಿಕೆಟ್ ಬುಕಿಂಗ್ ವೇಳೆ ಈ ಆಯ್ಕೆಯನ್ನು ಆರಿಸುವುದರಿಂದ ನಿಮ್ಮೊಂದಿಗೆ ವಯಸ್ಸಾದವರು ಇದ್ದರೆ ಅವರಿಗಾಗಿ ಲೋವರ್ ಬರ್ತ್ (Lower Berth) ಪಡೆಯುವುದು ಸುಲಭವಾಗುತ್ತದೆ. ಆದಾಗ್ಯೂ, ಸೀಟ್ ಲಭ್ಯವಿದ್ದರೆ ಮಾತ್ರವೇ ಕೆಳಗಿನ ಬರ್ತ್‌ಗಳಲ್ಲಿ ಸೀಟ್ ಪಡೆಯಬಹುದಾಗಿದೆ ಎಂದು ಇತ್ತೀಚೆಗೆ ರೈಲ್ವೆ ಇಲಾಖೆ ಟ್ವೀಟ್‌ನಲ್ಲಿ ಮಾಹಿತಿ ನೀಡಿತ್ತು.
ಮೊದಲು ಬಂದವರಿಗೆ ಮೊದಲ ಆದ್ಯತೆ:
ರೈಲ್ವೆ ನಿಯಮಗಳ ಪ್ರಕಾರ, ಮೊದಲು ಬಂದವರಿಗೆ ಮೊದಲು ಸೇವೆಯನ್ನು ಆಧರಿಸಿ ಬುಕ್ಕಿಂಗ್ ಸಮಯದಲ್ಲಿ ಲೋವರ್ ಬರ್ತ್ ಅನ್ನು ನಿಗದಿಪಡಿಸಿದರೆ ಮಾತ್ರ ನೀವು ರಿಸರ್ವೇಶನ್ ಚಾಯ್ಸ್ ಬುಕ್ ಅಡಿಯಲ್ಲಿ ಟಿಕೆಟ್ ಬುಕ್ (Ticket Book) ಮಾಡಿದರೆ, ನಿಮಗೆ ಲೋವರ್ ಬರ್ತ್ ಸಿಗುತ್ತದೆ.
ಇದನ್ನೂ ಓದಿ- ರಾಜಧಾನಿ ಶತಾಬ್ದಿ ರೈಲಿನಲ್ಲಿ ಪ್ರಯಾಣಿಸುವ ಯಾತ್ರಿಗಳಿಗೆ ಇನ್ನು ಮುಂದೆ ಸಿಗಲಿದೆ ಈ ಸೌಲಭ್ಯ!
ಲೋವರ್ ಬರ್ತ್ ಪಡೆಯಲು ರೈಲ್ವೆ ನಿಯಮಗಳು (Railway rules for getting lower berth):
ಭಾರತೀಯ ರೈಲ್ವೆಯು ಲೋವರ್ ಬರ್ತ್ ಪಡೆಯಲು ಬಯಸುವ ಪ್ರಯಾಣಿಕರಿಗೆ ಕೆಲವು ನಿಯಮಗಳನ್ನು ರೂಪಿಸಿದೆ. ಆ ಪ್ರಮುಖ ನಿಯಮಗಳೆಂದರೆ...
* ಪುರುಷರು 60 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು, ಮಹಿಳೆಯರು 58 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು.
* ಪುರುಷರು ಮತ್ತು ಮಹಿಳೆಯರು ಒಂದೇ ಟಿಕೆಟ್‌ನಲ್ಲಿ ಪ್ರಯಾಣಿಸಬೇಕು.
* ಇದಲ್ಲದೇ, 45 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರಿಗೂ ಲೋವರ್ ಬರ್ತ್‌ಗಳಲ್ಲಿ ಆದ್ಯತೆ ಸಿಗುತ್ತದೆ.
* ಗರ್ಭಿಣಿ ಮಹಿಳಾ ಪ್ರಯಾಣಿಕರು ನಿಮ್ಮೊಂದಿಗೆ ಪ್ರಯಾಣಿಸುತ್ತಿದ್ದರೆ, ಕೆಳಗಿನ ಬರ್ತ್‌ನಲ್ಲಿ ಆಕೆಗೆ ಆದ್ಯತೆ ಸಿಗುತ್ತದೆ.
ರೈಲ್‌ಮಿತ್ರಾ ಪ್ರಕಾರ, ಹಿರಿಯ ನಾಗರಿಕರು ಅಥವಾ ಮಹಿಳೆಯರು ಬುಕಿಂಗ್ ಕೌಂಟರ್ ಅಥವಾ ರಿಸರ್ವೇಶನ್ ಆಫೀಸ್‌ನಿಂದ ಲೋವರ್ ಬರ್ತ್ ಸೀಟುಗಳನ್ನು ಬುಕ್ ಮಾಡಬಹುದು. ಇದಲ್ಲದೆ, ಗರ್ಭಿಣಿಯರು ವೈದ್ಯಕೀಯ ಪ್ರಮಾಣಪತ್ರವನ್ನು ತೋರಿಸಬೇಕು.
ಇದನ್ನೂ ಓದಿ- Home Loan: ಈ 5 ಸರ್ಕಾರಿ ಬ್ಯಾಂಕ್‌ಗಳಲ್ಲಿ ಸಿಗುತ್ತೆ ಅತ್ಯಂತ ಅಗ್ಗದ ಗೃಹ ಸಾಲ
ಲೋವರ್ ಬರ್ತ್:
ಸ್ಲೀಪರ್ ಕ್ಲಾಸ್‌ನಲ್ಲಿ ಪ್ರತಿ ಕೋಚ್‌ಗೆ ಆರು ಲೋವರ್ ಬರ್ತ್‌ಗಳು, ಮೂರನೇ ಎಸಿಯಲ್ಲಿ ಪ್ರತಿ ಕೋಚ್‌ಗೆ ಮೂರು ಲೋವರ್ ಬರ್ತ್‌ಗಳು ಮತ್ತು ಸೆಕೆಂಡ್ ಎಸಿಯಲ್ಲಿ ಪ್ರತಿ ಕೋಚ್‌ಗೆ ಮೂರು ಲೋವರ್ ಬರ್ತ್‌ಗಳಿವೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.