Home Loan At Low Interest Rate: ಸ್ವಂತ ಮನೆ ಕಟ್ಟುವಾಗ ಎಂತಹವರಿಗೆ ಆದರೂ ಸಾಲದ ಅವಶ್ಯಕತೆ ಇದ್ದೇ ಇರುತ್ತದೆ. ಹಾಗಂತ, ಹೆಚ್ಚಿನ ಬಡ್ಡಿ ದರದಲ್ಲಿ ಸಾಲ ತೆಗೆದುಕೊಂಡರೆ ಸಾಲದ ಹೊರೆ ಹೆಚ್ಚಾಗುತ್ತದೆ. ಇದನ್ನು ತಪ್ಪಿಸಲು ನೀವು ಗೃಹ ಸಾಲವನ್ನು ಕೊಳ್ಳುವಾಗ ಯಾವ ಯಾವ ಬ್ಯಾಂಕ್‌ಗಳಲ್ಲಿ ಎಷ್ಟು ಬಡ್ಡಿ ದರವನ್ನು ಪಾವತಿಸಬೇಕಾಗುತ್ತದೆ ಎಂಬುದರ ಬಗ್ಗೆ ಸೂಕ್ತ ಮಾಹಿತಿ ಹೊಂದಿರುವುದು ಅಗತ್ಯ. ಈ ಲೇಖನದಲ್ಲಿ ನಾವು ಕೈಗೆಟುಕುವ ಬಡ್ಡಿ ದರದಲ್ಲಿ ಗೃಹ ಸಾಲ (Home Loans at Affordable Interest Rates) ನೀಡುವ ಬ್ಯಾಂಕ್‌ಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಅತ್ಯಂತ ಅಗ್ಗದ ಬಡ್ಡಿ ದರದಲ್ಲಿ ಗೃಹ ಸಾಲವನ್ನು ನೀಡುವ 5 ಸರ್ಕಾರಿ ಬ್ಯಾಂಕ್‌ಗಳ ಪಟ್ಟಿ- ಯಾವ ಬ್ಯಾಂಕ್‌ನಲ್ಲಿ ಎಷ್ಟಿದೆ ಬಡ್ಡಿ?
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India):
ಭಾರತದ ಅತಿದೊಡ್ಡ ಸರ್ಕಾರಿ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಗೃಹ ಸಾಲದ (State Bank of India Home Loan) ಮೇಲೆ ವಾರ್ಷಿಕ 9.15 ಪ್ರತಿಶತದಿಂದ 10.05 ಪ್ರತಿಶತದವರೆಗೆ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಗಮನಾರ್ಹವಾಗಿ ಈ ಬಡ್ಡಿದರ ನಿಮ್ಮ ಸಿಬಿಲ್ ಸ್ಕೋರ್ ಅನ್ನು ಅವಲಂಬಿಸಿರುತ್ತದೆ.
ಬ್ಯಾಂಕ್ ಆಫ್ ಬರೋಡಾ (Bank of Baroda):
ಬ್ಯಾಂಕ್ ಆಫ್ ಬರೋಡಾ (Bank of Baroda) ಬ್ಯಾಂಕ್‌ನ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಗೃಹ ಸಾಲದ ಮೇಲೆ ಶೇಕಡಾ 8.40 ರಿಂದ ಶೇಕಡಾ 10.60 ರವರೆಗೆ ಬಡ್ಡಿ ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ- Big Alert: ಗ್ಯಾಸ್, ಆಧಾರ್ ಸೇರಿದಂತೆ ಜೂನ್ 1ರಿಂದ ಹೊಸ ನಿಯಮ, ಉಲ್ಲಂಘಿಸಿದ್ರೆ ದಂಡ!
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (Union Bank of India):
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಗೃಹ ಸಾಲ (Home Loan) ಪಡೆಯಲು ಬಯಸುವ ಗ್ರಾಹಕರು ಶೇಕಡಾ 9.35 ರಿಂದ ಶೇಕಡಾ 10.75 ರವರೆಗೆ ಬಡ್ಡಿ ಪಾವತಿಸಬೇಕಾಗುತ್ತದೆ. ಆದಾಗ್ಯೂ, ಈ ಬಡ್ಡಿದರಗಳು ಗ್ರಾಹಕರ ಸಿಬಿಲ್ ಸ್ಕೋರ್ ಅನ್ನು ಅವಲಂಬಿಸಿರುತ್ತದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National Bank):
ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೃಹ ಸಾಲದ ಮೇಲೆ ಶೇಕಡಾ 8.40 ರಿಂದ ಶೇಕಡಾ 10.10 ರವರೆಗೆ ಬಡ್ಡಿಯನ್ನು ವಿಧಿಸುತ್ತದೆ. ಗಮನಾರ್ಹವಾಗಿ ಈ ಬಡ್ಡಿದರಗಳು 10 ವರ್ಷಗಳ ಅವಧಿಗೆ ಮಾತ್ರ ಅನ್ವಯಿಸುತ್ತದೆ. ಅವಧಿ ಹೆಚ್ಚಾದಂತೆ ಬಡ್ಡಿ ದರವೂ ಹೆಚ್ಚಳವಾಗಬಹುದು.
ಇದನ್ನೂ ಓದಿ- Best Cars in India: ಹೆಚ್ಚಿನ ಮೈಲೇಜ್ ನೀಡುವ 10 ಲಕ್ಷಕ್ಕಿಂತ ಕಡಿಮೆ ಬೆಲೆಯ ಕಾರುಗಳು
ಬ್ಯಾಂಕ್ ಆಫ್ ಇಂಡಿಯಾ (Bank of India):
ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಹಲವು ರೀತಿಯ ಗೃಹ ಸಾಲಗಳನ್ನು ಒದಗಿಸುತ್ತದೆ. ಈ ಸಾಲಗಳ ಬಡ್ಡಿದರವು 8.40 ಪ್ರತಿಶತದಿಂದ ಪ್ರಾರಂಭವಾಗಿ 10.85 ಪ್ರತಿಶತದಷ್ಟು ಇರುತ್ತದೆ. ವಿಭಿನ್ನ ಅವಧಿ ಮತ್ತು ಮೊತ್ತದ ಪ್ರಕಾರ ಬಡ್ಡಿ ದರವು ಹೆಚ್ಚು-ಕಡಿಮೆ ಆಗಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.