ಒಂದು ವೇಳೆ ನಿಮ್ಮ ಟ್ರೈನ್ ಮಿಸ್ ಆದರೆ ತಕ್ಷಣ ಹೀಗೆ ಮಾಡಿ ! ಅದೇ ರೈಲಿನಲ್ಲಿ ನಿಮ್ಮ ಪ್ರಯಾಣ ಮುಂದುವರೆಸಬಹುದು
ಮೂಲ ಬೋರ್ಡಿಂಗ್ ನಿಲ್ದಾಣದಲ್ಲಿ ಪ್ರಯಾಣಿಕರು ತಮ್ಮ ರೈಲುಗಳನ್ನು ಹತ್ತುವುದನ್ನು ಕೆಲವೊಮ್ಮೆ ನಾನಾ ಕಾರಣಗಳಿಂದ ಸಾಧ್ಯವಾಗದೇ ಹೋಗಬಹುದು. ಆದರೆ, ಪ್ರಯಾಣಿಕರಿಗೆ ಸೂಕ್ತ ಅವಕಾಶ ಕಲ್ಪಿಸಲು ರೈಲ್ವೆ ಇಲಾಖೆ ಟೂ ಸ್ಟಾಪ್ ನಿಯಮ ಜಾರಿಗೆ ತಂದಿದೆ.
ಬೆಂಗಳೂರು : ಪ್ರತಿದಿನ ಲಕ್ಷಾಂತರ ಪ್ರಯಾಣಿಕರು ಭಾರತೀಯ ರೈಲ್ವೆ ಮೂಲಕ ಪ್ರಯಾಣಿಸುತ್ತಾರೆ. ರೈಲು ಪ್ರಯಾಣವನ್ನು ಬಲು ಸರಳ ಮತ್ತು ಆರಾಮದಾಯಕ. ಪ್ರತಿ ರೈಲುಗಳು ಓಡುವ ಮತ್ತು ನಿಲ್ದಾಣ ತಲುಪುವ ಸಮಯವನ್ನು ಮೊದಲೇ ನಿಗದಿಪಡಿಸಲಾಗಿರುತ್ತದೆ. ರೈಲು ತನ್ನ ನಿಗದಿತ ಸಮಯದಲ್ಲಿಯೇ ಚಲಿಸುತ್ತದೆ. ಕೆಲವೊಮ್ಮೆ ಪ್ರಯಾಣಿಕರು ನಿಲ್ದಾಣ ತಲುಪುವಲ್ಲಿ ವಿಳಂಬವಾಗಿ ಬಿಡುತ್ತದೆ. ಹೀಗಾದಾಗ ರೈಲು ಮಿಸ್ ಆಗಿ ಬಿಡುತ್ತದೆ. ಒಂದು ವೇಳೆ ರೈಲು ಮಿಸ್ ಆದರೆ ಅಂದರೆ ಸರಿಯಾದ ಸಮಯಕ್ಕೆ ರೈಲು ನಿಲ್ದಾಣ ತಲುಪುವುದು ನಿಮಗೆ ಸಾಧ್ಯವಾಗದೇ ಇದ್ದರೆ ಏನು ಮಾಡಬೇಕು? ಈ ಬಗ್ಗೆ ರೈಲ್ವೆಯ ನಿಯಮಗಳು ಏನು ಹೇಳುತ್ತವೆ ಎನ್ನುವ ಮಾಹಿತಿ ನಿಮಗೆ ತಿಳಿದಿರಬೇಕು. ಆದ್ದರಿಂದ ರೈಲು ಮಿಸ್ ಆಗುತ್ತದೆ ಎನ್ನುವುದು ನಿಮಗೆ ತಿಳಿಯುತ್ತಿದ್ದಂತೆಯೇ ತಕ್ಷಣ ಈ ನಿರ್ಧಾರ ತೆಗೆದುಕೊಳ್ಳಬಹುದು.
ಸರಿಯಾದ ಸಮಯಕ್ಕೆ ನಿಲ್ದಾಣ ತಲುಪುವುದು ಸಾಧ್ಯವಾಗಿಲ್ಲವೇ? :
ನೀವು ರೈಲಿನಲ್ಲಿ ಟಿಕೆಟ್ ಕಾಯ್ದಿರಿಸಿದ್ದು, ನಿಗದಿತ ಸಮಯಕ್ಕೆ ರೈಲು ನಿಲ್ದಾಣವನ್ನು ತಲುಪಲು ಸಾಧ್ಯವಾಗದಿದ್ದರೆ, ನಿಮ್ಮ ಆಸನಕ್ಕೆ ಸಂಬಂಧಿಸಿದಂತೆ ರೈಲ್ವೆಯ ಕೆಲವು ನಿಯಮಗಳಿವೆ. ಈ ನಿಯಮದ ಪ್ರಕಾರ ನೀವು ಮುಂದಿನ ನಿಲ್ದಾಣದಿಂದ ರೈಲು ಹತ್ತಲು ಪ್ರಯತ್ನಿಸಬಹುದು. ನೀವು ಬುಕ್ ಮಾಡಿರುವ ನಿಲ್ದಾಣದಲ್ಲಿ ನೀವು ರೈಲು ಹತ್ತಿಲ್ಲ ಎಂದಾದರೂ ನಿಮ್ಮ ಬರ್ತ್ ಅನ್ನು ಬೇರೆಯವರಿಗೆ ವರ್ಗಾಯಿಸಲಾಗುತ್ತದೆ ಎನ್ನುವ ಚಿಂತೆ ಬೇಡ.
ಇದನ್ನೂ ಓದಿ : ಅತಿ ಹೆಚ್ಚು ವೇತನ ನೀಡುವ ಭಾರತದ ನಗರ ಯಾವುದು ಗೊತ್ತಾ...? ವರದಿ ಓದಿ
ಎರಡು ನಿಲ್ದಾಣಗಳವರೆಗೆ ಆಸನಗಳನ್ನು ಕಾಯ್ದಿರಿಸಲಾಗಿರುತ್ತದೆ :
ಕೆಲವೊಮ್ಮೆ ಮೂಲ ಬೋರ್ಡಿಂಗ್ ನಿಲ್ದಾಣದಲ್ಲಿ ರೈಲುಗಳನ್ನು ಹತ್ತುವುದು ಪ್ರಯಾಣಿಕರಿಗೆ ಸಾಧ್ಯವಾಗುವುದಿಲ್ಲ. ಆದರೆ, ಪ್ರ ಯಾಣಿಕರಿಗೆ ಸೂಕ್ತ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಟೂ ಸ್ಟಾಪ್ ನಿಯಮ ಜಾರಿಗೆ ತಂದಿದೆ. ಇದರ ಪ್ರಕಾರ ಮೂಲ ನಿಲ್ದಾಣದಿಂದ ಎರಡು ನಿಲ್ದಾಣದವರೆಗೆ ಟಿಕೆಟ್ ಕಲೆಕ್ಟರ್ ಬೇರೆ ಪ್ರಯಾಣಿಕರಿಗೆ ಸೀಟ್ ವರ್ಗಾವಣೆ ಮಾಡುವಂತಿಲ್ಲ. ಪ್ರಯಾಣಿಕರು ತನ್ನ ಮೂಲ ಬೋರ್ಡಿಂಗ್ ನಿಲ್ದಾಣದಿಂದ ರೈಲನ್ನು ಹಿಡಿಯಲು ಸಾಧ್ಯವಾಗದಿದ್ದರೆ, ಆ ಸೀಟನ್ನು ಒಂದು ಗಂಟೆಯ ನಂತರ ಅಥವಾ ರೈಲು ಪ್ರಯಾಣದ ಎರಡು ನಿಲ್ದಾಣಗಳನ್ನು ದಾಟುವವರೆಗೆ ಬೇರೆ ಕಡೆಗೆ ವರ್ಗಾಯಿಸಲಾಗುವುದಿಲ್ಲ.
ಭಾರತೀಯ ರೈಲ್ವೆ :
ಭಾರತೀಯ ರೈಲ್ವೆಯ ಈ ನಿಯಮದ ಪ್ರಕಾರ ಪ್ರಯಾಣಿಕರು ಮುಂದಿನ ಎರಡು ನಿಲ್ದಾಣಗಳಲ್ಲಿ ರೈಲು ಹಿಡಿಯಲು ಸಾಧ್ಯವಾದರೆ, ಪ್ರಯಾಣಿಕರು ಸಮಯವನ್ನು ಗಮನದಲ್ಲಿಟ್ಟುಕೊಂಡು ಮುಂದಿನ ನಿಲ್ದಾಣದಿಂದ ರೈಲನ್ನು ಹಿಡಿಯಲು ಪ್ರಯತ್ನಿಸಬೇಕು. ಪ್ರಯಾಣಿಕರ ಆಸನವು ಎರಡು ನಿಲ್ದಾಣಗಳವರೆಗೆ ಸುರಕ್ಷಿತವಾಗಿರುತ್ತದೆ. ಹೀಗೆ ಪ್ರಯಾಣಿಕರು ಕೂಡಾ ಸಮಯ ಪ್ರಜ್ಞೆ ಮೆರೆದರೆ ಸೂಕ್ತ ಸಮಯಕ್ಕೆ ಅದೇ ರೈಲು ಹಿಡಿಯುವುದು ಸಾಧ್ಯವಾಗುತ್ತದೆ.
ಇದನ್ನೂ ಓದಿ : Vande Bharat Express: ಹೊಸ ‘ವಂದೇ ಭಾರತ್’ ರೈಲಿಗೆ ಕೇಸರಿ ಬಣ್ಣ ಬರಲು ಕಾರಣವೇನು ಗೊತ್ತಾ?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.