ನವದೆಹಲಿ: ʼಮೇಟಾʼ ಒಡೆತನದ ವಾಟ್ಸ್ಆ್ಯಪ್ ಕಂಪನಿ ತನ್ನ ಏಕೀಕೃತ ಪಾವತಿ ವ್ಯವಸ್ಥೆ(UPI)ಯನ್ನು 50 ಕೋಟಿ ಭಾರತೀಯ ಬಳಕೆದಾರರಿಗೆ ವಿಸ್ತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ. ಈ ಮೂಲಕ ಸುಮಾರು 4 ಕೋಟಿ ಭಾರತೀಯ ಬಳಕೆದಾರರು ವಾಟ್ಸ್‌ಆ್ಯಪ್‌ ಯುಪಿಐ ಸೇವೆಯನ್ನು ಬಳಸಬಹುದಾಗಿದೆ. 


COMMERCIAL BREAK
SCROLL TO CONTINUE READING

ಇದನ್ನು ಓದಿ: ‘ಪ್ರಧಾನ್‌ಮಂತ್ರಿ ಸಂಗ್ರಹಾಲಯ‘ ಉದ್ಘಾಟಿಸಿದ ಪ್ರಧಾನಿ ಮೋದಿ


ವಾಟ್ಸ್‌ಆ್ಯಪ್‌ನ ಈ ನಿರ್ಧಾರಕ್ಕೆ ಭಾರತದ ರಾಷ್ಟ್ರೀಯ ಪಾವತಿ ನಿಗಮ (ಎನ್‌ಸಿಪಿಐ) ಒಪ್ಪಿಗೆ ಸೂಚಿಸಿದೆ. ಇನ್ನು ಈ ಬಗ್ಗೆ ಮಾತನಾಡಿರುವ ವಾಟ್ಸ್‌ಆ್ಯಪ್‌ ಇಂಡಿಯಾದ ಪಾವತಿ ವಿಭಾಗದ ನಿರ್ದೇಶಕ ಮನೀಶ್ ಮಹಾತ್ಮಾ, ‘ಪಾವತಿ ವ್ಯವಸ್ಥೆಯು ಗ್ರಾಮೀಣ ಜನರ ಜೀವನ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ ಪೈಪೋಟಿ ಆಗದಂತೆ ಎನ್‌ಸಿಪಿಐ ಹಂತ ಹಂತವಾಗಿ ವಾಟ್ಸ್‌ಆ್ಯಪ್‌ಗೆ ಅನುಮೋದನೆ ನೀಡುತ್ತಿದೆ" ಎಂದಿದ್ದಾರೆ. 2018 ರಿಂದ ವಾಟ್ಸ್‌ಆ್ಯಪ್‌ ಡಿಜಿಟಲ್ ಪಾವತಿ ಸೇವೆಯನ್ನು ಜಾರಿಗೊಳಿಸಿತ್ತು.


ಇದನ್ನು ಓದಿ: ಕೆಜಿಎಫ್ 2 ಅಧೀರಾಗೆ ಸೇರಿದ್ದು ಎಂದ ಸಂಜಯ್ ದತ್ ಪತ್ನಿ..!


ಇನ್ನು ಈ ಹಿಂದೆ ವಾಟ್ಸ್ಆ್ಯಪ್ ಕಂಪನಿ ಫೀಚರ್‌ ಒಂದನ್ನು ಪರಿಚಯಿಸಿತ್ತು. ಇದ್ನು ಶಾಪಿಂಗ್ ಫೀಚರ್ ಎಂದು ಹೆಸರಿಸಲಾಗಿದೆ. ಇದರ ಮೂಲಕ ವಾಟ್ಸ್ಆ್ಯಪ್ ಬ್ಯುಸಿನೆಸ್ ಆ್ಯಪ್ ಇದೀಗ ವಾಟ್ಸ್ಆ್ಯಪ್ ವೆಬ್ ಅಥವಾ ಡೆಸ್ಕ್‌ ಟಾಪ್‌ ಆವೃತ್ತಿಯಲ್ಲೂ ಕ್ಯಾಟಲಾಗ್ ರಚಿಸಲು ಮತ್ತು ನಿರ್ವಹಿಸುವ ಸಾಮರ್ಥ್ಯವನ್ನು ಒದಗಿಸುತ್ತದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.