Budget 2024 Cheaper and Costlier: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಮೋದಿ ಸರ್ಕಾರದ 3.0 ರ ಮೊದಲ ಸಾಮಾನ್ಯ ಬಜೆಟ್ (ಕೇಂದ್ರ ಬಜೆಟ್ 2024) ಮಂಡಿಸಿದ್ದಾರೆ. ಬಜೆಟ್‌ʼನಲ್ಲಿ ನಿರ್ಮಲಾ ಸೀತಾರಾಮನ್ ವಿವಿಧ ಕ್ಷೇತ್ರಗಳಿಗೆ ಹಲವು ಘೋಷಣೆಗಳನ್ನು ಮಾಡಿದ್ದು, ಇದು ಜನಸಾಮಾನ್ಯರ ಜೇಬಿನ ಮೇಲೆ ನೇರ ಪರಿಣಾಮ ಬೀರಲಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ:  ಬಜೆಟ್ ಮಂಡನೆಯಾಗುತ್ತಿದ್ದಂತೆಯೇ ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ !ಚಿನ್ನಾಭರಣ ಖರೀದಿದಾರರು ನಿರಾಳ


ಇನ್ನು ಈ ಬಾರಿಯ ಬಜೆಟ್ 2024 ರಲ್ಲಿ ಯಾವ ವಸ್ತುಗಳು ಅಗ್ಗವಾಗಿವೆ ಮತ್ತು ಯಾವ ವಸ್ತುಗಳು ದುಬಾರಿಯಾಗಿವೆ ಎಂಬುದನ್ನು ತಿಳಿಯೋಣ.


ಬಜೆಟ್ 2024 ರಲ್ಲಿ ಯಾವುದು ಅಗ್ಗ?


  • ಚಿನ್ನ ಬೆಳ್ಳಿ-ಅಗ್ಗ

  • ಸ್ಮಾರ್ಟ್ಫೋನ್ - ಅಗ್ಗ

  • ಮೊಬೈಲ್ ಚಾರ್ಜರ್ - ಅಗ್ಗ

  • ಮೊಬೈಲ್ ಬ್ಯಾಟರಿ - ಅಗ್ಗ

  • ಎಲೆಕ್ಟ್ರಿಕ್ ವಾಹನಗಳು - ಅಗ್ಗ

  • ಲಿಥಿಯಂ ಬ್ಯಾಟರಿ - ಅಗ್ಗ

  • ಕ್ಯಾನ್ಸರ್ ಔಷಧಿಗಳು - ಅಗ್ಗ

  • ಪ್ಲಾಟಿನಂ - ಅಗ್ಗ

  • ಮೀನು ಊಟ - ಅಗ್ಗ

  • ಚರ್ಮದ ವಸ್ತುಗಳು - ಅಗ್ಗ

  • ರಾಸಾಯನಿಕ ಪೆಟ್ರೋಕೆಮಿಕಲ್- ಅಗ್ಗ

  • ಎಕ್ಸ್-ರೇ ಉಪಕರಣಗಳು - ಅಗ್ಗ

  • ಶೂ-ಚಪ್ಪಲಿಗಳು- ಅಗ್ಗ

  • ಅಗತ್ಯ ಖನಿಜಗಳು - ಅಗ್ಗ


ಯಾವುದು ದುಬಾರಿ?


  • ವಿಮಾನ ಪ್ರಯಾಣ - ದುಬಾರಿ

  • ಸಿಗರೇಟ್ - ದುಬಾರಿ

  • PVC ಫ್ಲೆಕ್ಸ್ ಬ್ಯಾನರ್- ದುಬಾರಿ

  • ಪ್ಲಾಸ್ಟಿಕ್ ವಸ್ತುಗಳು - ದುಬಾರಿ

  • ಪೆಟ್ರೋಕೆಮಿಕಲ್ಸ್, ಅಮೋನಿಯಂ ನೈಟ್ರೇಟ್ - ದುಬಾರಿ


ಇದನ್ನೂ ಓದಿ: Budget 2024: ನಿತೀಶ್-ನಾಯ್ಡುಗೆ ರಿಟರ್ನ್ ಗಿಫ್ಟ್, ಬಿಹಾರ-ಆಂಧ್ರಕ್ಕೆ ಬಜೆಟ್‌ನಲ್ಲಿ ಬಂಪರ್


ಚಿನ್ನ ಮತ್ತು ಬೆಳ್ಳಿ ಬೆಲೆ ಕುಸಿತ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್‌ʼನಲ್ಲಿ ಚಿನ್ನ ಮತ್ತು ಬೆಳ್ಳಿಯ ಮೇಲಿನ ಮೂಲ ಕಸ್ಟಮ್ ಸುಂಕವನ್ನು ಶೇಕಡಾ 4 ರಷ್ಟು ಕಡಿತಗೊಳಿಸುವುದಾಗಿ ಘೋಷಿಸಿದ್ದಾರೆ. ಚಿನ್ನ ಮತ್ತು ಬೆಳ್ಳಿಯ ಮೇಲಿನ ಮೂಲ ಕಸ್ಟಮ್ ಸುಂಕವನ್ನು ಶೇಕಡಾ 10 ರಿಂದ ಶೇಕಡಾ 6 ಕ್ಕೆ ಇಳಿಸಲಾಗಿದೆ. ಅಗ್ರಿ ಸೆಸ್ ಜೊತೆಗೆ ಒಟ್ಟು ಸುಂಕವನ್ನು ಶೇಕಡಾ 15 ರಿಂದ ಶೇಕಡಾ 11 ಕ್ಕೆ ಇಳಿಸಲಾಗಿದೆ. ಬಜೆಟ್ ಘೋಷಣೆ ಬಳಿಕ ಚಿನ್ನ, ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ. ಚಿನ್ನದ ಬೆಲೆಯಲ್ಲಿ ಸುಮಾರು 2 ಸಾವಿರ ರೂ.ನಷ್ಟು ಕುಸಿದಿದ್ದರೆ, ಬೆಳ್ಳಿ ಬೆಲೆಯೂ ರೂ.3 ಸಾವಿರಕ್ಕೂ ಹೆಚ್ಚು ಇಳಿಕೆಯಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.