Madhabi Puri Buch: ಅಮೇರಿಕನ್ ಸಂಶೋಧನೆ ಮತ್ತು ಹೂಡಿಕೆ ಕಂಪನಿ ಹಿಂಡೆನ್‌ಬರ್ಗ್ ರಿಸರ್ಚ್ ಎನ್ನುವ ಸಂಸ್ಥೆಯು ಸೆಕ್ಯುರಿಟೀಸ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಅಧ್ಯಕ್ಷೆ ಮಾಧಬಿ ಪುರಿ ಬುಚ್ ಮತ್ತು ಅವರ ಪತಿ ಅದಾನಿಯೊಂದಿಗೆ ವಿದೇಶಿ ನಿಧಿಯಲ್ಲಿ ಪಾಲನ್ನು ಹೊಂದಿದ್ದಾರೆ ಎಂದು ಆರೋಪಿಸಿದೆ. ಹಿಂಡೆನ್‌ಬರ್ಗ್ ತನ್ನ ಹೊಸ ವರದಿಯಲ್ಲಿ ಸೆಬಿ ಅಧ್ಯಕ್ಷೆ ಬುಚ್ ಮತ್ತು ಅವರ ಪತಿ ಧಬಾಲ್ ಬುಚ್ ವಿದೇಶಿ ನಿಧಿಯಲ್ಲಿ ಪಾಲು ಹೊಂದಿದ್ದಾರೆ ಎಂದು ಹೇಳಿಕೊಂಡಿದ್ದು, ಅದಾನಿ ಗ್ರೂಪ್‌ನಲ್ಲಿನ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಆದಾಗ್ಯೂ, ಸೆಬಿ ಮುಖ್ಯಸ್ಥರು ಈ ಆರೋಪವನ್ನು ಸಂಪೂರ್ಣವಾಗಿ ಆಧಾರರಹಿತ ಎಂದು ಹೇಳಿದ್ದಾರೆ. ಮಾಧಬಿ ಪುರಿ ಬುಚ್ ಅವರು ಸೆಬಿಯ ಮೊದಲ ಮಹಿಳಾ ಅಧ್ಯಕ್ಷರಾಗಿದ್ದು ಮಾರ್ಚ್ 2022 ರಿಂದ ಅವರು ಸೆಬಿಯ ನೇತೃತ್ವವನ್ನು ವಹಿಸಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಯಾರು ಈ ಮಾಧಬಿ ಪುರಿ ಬುಚ್? 


ಸೆಬಿಯನ್ನು ಮುನ್ನಡೆಸುವ ಮೊದಲ ಮಹಿಳಾ ಅಧ್ಯಕ್ಷೆ  ಹಾಗೂ ಖಾಸಗಿ ವಲಯದಿಂದ ಈ ಹುದ್ದೆಗೆ ನೇಮಕಗೊಂಡ ಮೊದಲ ವ್ಯಕ್ತಿ ಎನ್ನುವ ಹೆಗ್ಗಳಿಕೆ ಖ್ಯಾತಿ ಮಾಧಬಿ ಪುರಿ ಬುಚ್ ಅವರದ್ದಾಗಿದೆ. ಏಪ್ರಿಲ್ 2017 ರಿಂದ,ಮಾಜಿ ಅಧ್ಯಕ್ಷ ಅಜಯ್ ತ್ಯಾಗಿ ಅವರೊಂದಿಗೆ ಸೆಬಿಯ ಪೂರ್ಣಾವಧಿ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.


ಇದನ್ನೂ ಓದಿ: ಕೇವಲ 13 ವರ್ಷಕ್ಕೆ ಕನ್ನಡ ಚಿತ್ರರಂಗವನ್ನೇ ಆಳಿ ಸದ್ಯ ಕಿರುತೆರೆಯಲ್ಲಿ ಮಿಂಚುತ್ತಿರುವ ಸುಧಾರಾಣಿ ನಿಜವಾದ ಹೆಸರೇನು?


ಮಾಧಬಿ ಪುರಿ ಬುಚ್ ಅವರ ಕುಟುಂಬ


ಮಾಧಬಿ ಪುರಿ ಬುಚ್ ಹುಟ್ಟಿ ಬೆಳೆದದ್ದು ಮುಂಬೈನಲ್ಲಿ. ಅವರ ತಂದೆ ಕಮಲ್ ಪುರಿ, ಅವರು ಕಾರ್ಪೊರೇಟ್ ವಲಯದಲ್ಲಿ ಕೆಲಸ ಮಾಡಿದರು, ಅವರ ತಾಯಿ ರಾಜ್ಯಶಾಸ್ತ್ರದಲ್ಲಿಡಾಕ್ಟರೇಟ್ ಪಡೆದಿದ್ದಾರೆ. ಮಾಧಬಿ ಅವರು 21 ನೇ ವಯಸ್ಸಿನಲ್ಲಿ ಧವಲ್ ಬುಚ್ ಅವರನ್ನು ವಿವಾಹವಾಗಿದ್ದು ದಂಪತಿಗೆ ಅಭಯ್ ಎಂಬ ಮಗನಿದ್ದಾನೆ.


ಐಸಿಐಸಿಐ ಬ್ಯಾಂಕ್‌ನಿಂದ ಆರಂಭವಾದ ವೃತ್ತಿಜೀವನ


ಮಾಧಬಿ ಪುರಿ ಬುಚ್ ತನ್ನ ಶಾಲಾ ಶಿಕ್ಷಣವನ್ನು ಮುಂಬೈನ ಫೋರ್ಟ್ ಕಾನ್ವೆಂಟ್ ಶಾಲೆ ಮತ್ತು ನವದೆಹಲಿಯ ಜೀಸಸ್ ಮೇರಿ ಶಾಲೆಯ ಕಾನ್ವೆಂಟ್‌ನಲ್ಲಿ ಮುಗಿಸಿ ನಂತರ, ಅವರು ದೆಹಲಿ ವಿಶ್ವವಿದ್ಯಾಲಯದ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಗಣಿತಶಾಸ್ತ್ರದಲ್ಲಿ ಪದವಿ ಪಡೆದರು.ತದನಂತರ ಐಐಎಂ ಅಹಮದಾಬಾದ್‌ನಲ್ಲಿ ಎಂಬಿಎ ವ್ಯಾಸಂಗ ಪೂರೈಸಿದರು.ಮಾಧಬಿ ಪುರಿ ಬುಚ್ ಅವರು 1989 ರಲ್ಲಿ ಐಸಿಐಸಿಐ ಬ್ಯಾಂಕ್‌ನೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿ ಇಲ್ಲಿ ಅವರು ಹೂಡಿಕೆ ಬ್ಯಾಂಕರ್ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಂತಹ ಪ್ರಮುಖ ಸ್ಥಾನಗಳನ್ನು ನಿರ್ವಹಿಸಿದರು. ಅಷ್ಟೇ ಅಲ್ಲದೆ 1993 ಮತ್ತು 1995 ರ ನಡುವೆ, ಮಾಧಬಿ ಪುರಿ ಬುಚ್ ಇಂಗ್ಲೆಂಡ್‌ನ ವೆಸ್ಟ್ ಚೆಷೈರ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸಹ ಕೆಲಸ ಮಾಡಿದ್ದಾರೆ. 12 ವರ್ಷಗಳ ಕಾಲ, ಅವರು ಅನೇಕ ಕಂಪನಿಗಳ ಮಾರಾಟ, ಮಾರುಕಟ್ಟೆ ಮತ್ತು ಉತ್ಪನ್ನ ಅಭಿವೃದ್ಧಿ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ. 2006 ರಿಂದ 2011 ರವರೆಗೆ, ಅವರು ಐಸಿಐಸಿಐ ಸೆಕ್ಯುರಿಟೀಸ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಓ ಆಗಿ ಸೇವೆ ಸಲ್ಲಿಸಿದರು. ಇದರ ನಂತರ, ಅವರು 2011 ರಲ್ಲಿ ಸಿಂಗಾಪುರದ ಗ್ರೇಟರ್ ಪೆಸಿಫಿಕ್ ಕ್ಯಾಪಿಟಲ್ ಎಲ್ಎಲ್ಪಿಯಲ್ಲಿ ಹಿರಿಯ ಸ್ಥಾನವನ್ನು ಹೊಂದಿದ್ದರು. 


2017 ರಲ್ಲಿ ಸೆಬಿಯ ಪೂರ್ಣಾವಧಿ ಸದಸ್ಯತ್ವ 


2013 ರಿಂದ 2017 ರವರೆಗೆ ಅವರು ನ್ಯೂ ಡೆವಲಪ್‌ಮೆಂಟ್ ಬ್ಯಾಂಕ್‌ನಲ್ಲಿ ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ. ಇದರ ನಂತರ, 2017 ರಲ್ಲಿ, ಅವರನ್ನು ಸೆಬಿಯ ಸಂಪೂರ್ಣ ಸಮಯದ ಸದಸ್ಯರಾಗಿ ನೇಮಿಸಲಾಯಿತು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.