Union Budget 2023: ಕೇಂದ್ರ ಸರ್ಕಾರದಿಂದ ಹಲವು ಯೋಜನೆಗಳು ಜಾರಿಯಲ್ಲಿವೆ. ಈ ಯೋಜನೆಗಳ ಮೂಲಕ ಜನರು ಅನೇಕ ಪ್ರಯೋಜನಗಳನ್ನು ಪಡೆಯುತ್ತಾರೆ. ಇಂತಹುದೇ ಒಂದು ಯೋಜನೆ ಎಂದರೆ ಅದು ಸಾರ್ವಜನಿಕ ಭವಿಷ್ಯ ನಿಧಿ ಅಂದರೆ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಯೋಜನೆ. ಜನರು ಪಿಪಿಎಫ್ ಯೋಜನೆಯ ಮೂಲಕ ದೀರ್ಘಾವಧಿಗೆ ಹೂಡಿಕೆ ಮಾಡಬಹುದು. ಇನ್ನೊಂದೆಡೆ PPF ನಲ್ಲಿ ಹೂಡಿಕೆ ಮಾಡುವ ಮೂಲಕ, ಜನರು ತೆರಿಗೆ ಪ್ರಯೋಜನದೊಂದಿಗೆ ಹೂಡಿಕೆಯ ಲಾಭವನ್ನು ಸಹ ಪಡೆಯಬಹುದು.


COMMERCIAL BREAK
SCROLL TO CONTINUE READING

ಪಿಪಿಎಫ್ ಯೋಜನೆ
PPF ನಲ್ಲಿ ಹೂಡಿಕೆ ಮಾಡುವುದರಿಂದ ಜನರು ಅನೇಕ ಪ್ರಯೋಜನಗಳನ್ನು ಪಡೆಯುತ್ತಾರೆ. PPF ಮೂಲಕ, ನೀವು 15 ವರ್ಷಗಳವರೆಗೆ ಹೂಡಿಕೆ ಮಾಡುವ ಆಯ್ಕೆಯನ್ನು ಆಯ್ದುಕೊಳ್ಳಬಹುದು. ಪಬ್ಲಿಕ್ ಪ್ರಾವಿಡೆಂಟ್ ಫಂಡ್‌ನಲ್ಲಿ ಹೂಡಿಕೆ ಮಾಡುವ ಮೂಲಕ, ಹೂಡಿಕೆಯ ಮೊತ್ತದ ಮೇಲೆ ನೀವು ಬಡ್ಡಿಯನ್ನು ಗಳಿಸಬಹುದು. ಇದರೊಂದಿಗೆ ಈ ಯೋಜನೆಯಡಿ ಬರುವ ಬಡ್ಡಿ ಆದಾಯಕ್ಕೆ ಯಾವುದೇ ತೆರಿಗೆ ಇರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ತೆರಿಗೆ ಉಳಿಸುವ ಉದ್ದೇಶದಿಂದ, ಈ ಯೋಜನೆಯು ತುಂಬಾ ಪ್ರಯೋಜನಕಾರಿಯಾಗಿದೆ.


ಇದನ್ನೂ ಓದಿ-Budget 2023: ಬಡವರಿಗೆ ಸಿಗಲಿದೆ ಉಚಿತ ಸಿಲಿಂಡರ್! ಉಜ್ವಲಾ ಯೋಜನೆಯ ಬಜೆಟ್ ಹೆಚ್ಚಳಕ್ಕೆ ಸರ್ಕಾರದ ಚಿಂತನೆ


ಬಜೆಟ್ 2023
ಒಂದು ಹಣಕಾಸು ವರ್ಷದಲ್ಲಿ ಪಿಪಿಎಫ್ ಯೋಜನೆಯಲ್ಲಿ ನೀವು ಗರಿಷ್ಠ 1.5 ಲಕ್ಷ ರೂಪಾಯಿ ಹೂಡಿಕೆ ಮಾಡಬಹುದು. ಈ ಹೂಡಿಕೆಯನ್ನು ಕಂತುಗಳಲ್ಲಿ ಅಥವಾ ಸಗಟು ಮೊತ್ತದಲ್ಲಿ ಮಾಡಬಹುದು. ಆದರೆ, ಇದೀಗ ಈ ಮಿತಿಯ ಕುರಿತು ಮಹತ್ವದ ಅಪ್ಡೇಟ್ ಪ್ರಕಟವಾಗಿದೆ. ವಾಸ್ತವದಲ್ಲಿ, ಕೇಂದ್ರ ಸರ್ಕಾರ ತನ್ನ 2023 ಸಾಲಿನ ಬಜೆಟ್ ಅನ್ನು ಶೀಘ್ರದಲ್ಲಿಯೇ ಮಂಡಿಸಲಿದೆ. ಈ ಬಾರಿಯ ಬಜೆಟ್‌ ಮೇಲೆ ಜನರು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.


ಇದನ್ನೂ ಓದಿ-Budget 2023: ಈ ಬಾರಿಯ ಬಜೆಟ್ ನಲ್ಲಿ ತೆರಿಗೆ ಪಾವತಿದಾರರಿಗೆ ಸಿಗಲಿದೆ ಭಾರಿ ಸಂತಸದ ಸುದ್ದಿ!


ಪಿಪಿಎಫ್ ಹೂಡಿಕೆ
ಈ ಬಾರಿಯ ಬಜೆಟ್‌ನಲ್ಲಿ ಪಿಪಿಎಫ್‌ನಲ್ಲಿ ಹೂಡಿಕೆ ಮಿತಿಯನ್ನು ಹೆಚ್ಚಿಸಬೇಕು ಎಂದು ಜನರು ಮತ್ತು ಅನೇಕ ಸಂಘಟನೆಗಳ ಆಗ್ರಹವಾಗಿದೆ. ಮತ್ತೊಂದೆಡೆ, ಪಿಪಿಎಫ್‌ನಲ್ಲಿ ಹೂಡಿಕೆಯ ಮಿತಿಯನ್ನು ಹೆಚ್ಚಿಸಿದರೆ, ಜನರು ಅದರಿಂದ ಸಾಕಷ್ಟು ಪ್ರಯೋಜನವನ್ನು ಪಡೆಯುತ್ತಾರೆ ಮತ್ತು ಜನರು ಹೆಚ್ಚು ಹೂಡಿಕೆ ಮಾಡಲು ಇದರಿಂದ ಸಾಧ್ಯವಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಬಾರಿಯ ಬಜೆಟ್‌ನಲ್ಲಿ ಸರ್ಕಾರದಿಂದ ಪಿಪಿಎಫ್ ಕುರಿತು ಮಹತ್ವದ ಘೋಷಣೆಯಾಗುವ ನಿರೀಕ್ಷೆಯಿದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.