Union Budget 2023: 2023-24ನೇ ಸಾಲಿನ ಆರ್ಥಿಕ ಆಯವ್ಯಯ ಮಂಡನೆಗೆ ಕೇವಲ ಎರಡು ದಿನಗಳು ಮಾತ್ರ ಬಾಕಿ ಉಳಿದಿವೆ. ಹೀಗಿರುವಾಗ ಆದಾಯ ತೆರಿಗೆ ಪಾವತಿರುವವರ ಕಣ್ಣು ಒಂದೇ ಒಂದು ವಿಷಯದ ಮೇಲೆ ನೆಟ್ಟಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ಭಾರಿ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಇದರಿಂದ ಆದಾಯ ತೆರಿಗೆ ಹೊರೆ ಕಡಿಮೆಯಾಗಲಿದೆ ಎಂಬುದು ಅವರ ಅನಿಸಿಕೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ವೇತನ ಪಡೆಯುವ ವರ್ಗಕ್ಕೆ ಈ ಶುಭ ಸುದ್ದಿ ಸಿಗುವ ನಿರೀಕ್ಷೆ ಇದೆ. ಈ ಬಾರಿಯ ಬಜೆಟ್‌ನಲ್ಲಿ ಆದಾಯ ತೆರಿಗೆಯ ನಿಬಂಧನೆಗಳಲ್ಲಿ ಬದಲಾವಣೆಯಾಗಬಹುದು ಎಂಬ ಚರ್ಚೆಗಳು ಕೇಳಿಬರಲಾರಂಭಿಸಿವೆ. ಈ ಬಾರಿಯ ಬಜೆಟ್ ನಲ್ಲಿ ಮೋದಿ ಸರ್ಕಾರವು ಆದಾಯ ತೆರಿಗೆಯ ಸ್ಲ್ಯಾಬ್ 80C ನಲ್ಲಿ ಬದಲಾವಣೆಗಳನ್ನು ಮಾಡಬಹುದು ಎಂಬುದನ್ನು ನಿರೀಕ್ಷಿಸಲಾಗುತ್ತದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ನೀವು ಎಷ್ಟು ಹಣವನ್ನು ಉಳಿಸಲು ಸಾಧ್ಯವಾಗಲಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
80 ಸಿ ವ್ಯಾಪ್ತಿ ಬದಲಾವಣೆ
ಸರಕಾರ ನೌಕರ ವರ್ಗಕ್ಕೆ ಭರ್ಜರಿ ಗಿಫ್ಟ್ ನೀಡಲು ಹೊರಟಿದೆ ಎಂಬ ಚರ್ಚೆ ನಡೆಯುತ್ತಿದೆ. ಇದಕ್ಕಾಗಿ, 80 ಸಿ ವ್ಯಾಪ್ತಿಯನ್ನು ಸರ್ಕಾರ ಬದಲಾಯಿಸಬಹುದು. ಇದರ ನಂತರ, ಆದಾಯ ತೆರಿಗೆ ಪಾವತಿದಾರರು ಹೆಚ್ಚಿನ ಹೂಡಿಕೆ ಮಾಡುವ ಮೂಲಕ ತಮ್ಮ ತೆರಿಗೆಯನ್ನು ಉಳಿಸಲು ಸಾಧ್ಯವಾಗಲಿದೆ. ಇದರಲ್ಲಿ ಸರ್ಕಾರ ವಿನಾಯಿತಿ ನೀಡಿದರೆ ಮಧ್ಯಮ ವರ್ಗದ ಜನರಿಗೆ ನೆಮ್ಮದಿ ಸಿಗಲಿದೆ. ಪ್ರಸ್ತುತ 80ಸಿ ಅಡಿಯಲ್ಲಿ ರೂ 1.5 ಲಕ್ಷ ರಿಯಾಯಿತಿ ಪಡೆಯುವ ಪ್ರಾವಧಾನವಿದೆ. ಈ ವಿನಾಯಿತಿ ಮಿತಿಯನ್ನು ಸರ್ಕಾರ 2 ಲಕ್ಷಕ್ಕೆ ಹೆಚ್ಚಿಸಬಹುದು ಎಂದು ತಜ್ಞರು ನಿರೀಕ್ಷಿಸುತ್ತಿದ್ದಾರೆ.. ಇದು ಸಂಭವಿಸಿದರೆ 5 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿರುವ ಜನರು ತೆರಿಗೆ ವಿನಾಯಿತಿ ಪಡೆಯಲಿದ್ದಾರೆ.
ಇದನ್ನೂ ಓದಿ-ಕೇವಲ 30,000ಕ್ಕೆ ಮನೆಗೆ ತನ್ನಿ ಈ ಜಬರ್ದಸ್ತ್ ಹೊಂಡಾ ಬೈಕ್ !
ಎಷ್ಟು ಪ್ರಯೋಜನವಾಗಲಿದೆ
ನಿಮ್ಮ ಆದಾಯವು 5 ಲಕ್ಷ ರೂಪಾಯಿಗಳಾಗಿದ್ದರೆ ನೀವು ಹೂಡಿಕೆ ಮಾಡದೆಯೇ ನಿಮ್ಮ ತೆರಿಗೆಯನ್ನು ಉಳಿಸಬಹುದು, ಆದರೆ ನಿಮ್ಮ ಆದಾಯವು 5 ಲಕ್ಷಕ್ಕಿಂತ ಹೆಚ್ಚಾಗಿದ್ದರೆ, ನೀವು ಆದಾಯ ತೆರಿಗೆಯ ಸೆಕ್ಷನ್ 80C ಅನ್ನು ಬಳಸಬಹುದು. ಪ್ರಸ್ತುತ ಇದರ ಅಡಿಯಲ್ಲಿ 1.50 ಲಕ್ಷ ರೂ. ವರೆಗೆ ವಿನಾಯ್ತಿ ಪಡೆಯಬಹುದಾಗಿದೆ. ಈ ಮಿತಿಯನ್ನು 2 ಲಕ್ಷಕ್ಕೆ ಹೆಚ್ಚಿಸಿದರೆ, ನೀವು ವರ್ಷಕ್ಕೆ ತೆರಿಗೆ ರೂಪದಲ್ಲಿ 2500 ರೂಪಾಯಿಗಳನ್ನು ಉಳಿತಾಯ ಮಾಡಬಹುದು.
ಇದನ್ನೂ ಓದಿ-ಸದ್ದಿಲ್ಲದೇ ಮಾರುಕಟ್ಟೆಗೆ ಆಲ್ಟೊ ಕೆ 10 ಎಕ್ಸ್ಟ್ರಾ ಎಡಿಶನ್ ಪರಿಚಯಿಸಿದ ಮಾರುತಿ, ವಿಶೇಷತೆ ಏನು ಗೊತ್ತಾ?
80C ಅಡಿಯಲ್ಲಿ ನೀವು ಎಲ್ಲಿ ಹೂಡಿಕೆ ಮಾಡಬಹುದು?
ನೀವು ಆದಾಯ ತೆರಿಗೆಯಲ್ಲಿ 80C ಅಡಿಯಲ್ಲಿ ವಿನಾಯಿತಿ ಪಡೆಯಲು ಬಯಸಿದರೆ, ನೀವು ಹಲವು ಕಡೆಗಳಲ್ಲಿ ಹೂಡಿಕೆ ಮಾಡಬಹುದು. ಇದಕ್ಕಾಗಿ ನೀವು ಮ್ಯೂಚುವಲ್ ಫಂಡ್, ಫಿಕ್ಸೆಡ್ ಡೆಪಾಸಿಟ್, ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ನಲ್ಲಿ ಹೂಡಿಕೆ ಮಾಡಬಹುದು. ಇದರ ಹೊರತಾಗಿ, ಸೆಕ್ಷನ್ 80 CCC ಅಡಿಯಲ್ಲಿ ನೀವು ಕೆಲವು ಪಾಲಸಿಗಳಿಂದ ವಿನಾಯಿತಿ ಪಡೆಯಬಹುದು.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.