TAX Relief: ನಿರ್ಮಲಾ ಸೀತಾರಾಮನ್ ಅವರು ಹಣಕಾಸು ಸಚಿವರಾದ ಮೇಲೆ ನಾಗರಿಕರಿಗೆ ಒಂದಲ್ಲಾ ಒಂದು ರೀತಿಯಲ್ಲಿ ತೆರಿಗೆ ಹೊರೆ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಮಧ್ಯಮವರ್ಗದವರ ಕಷ್ಟವಂತೂ ಕೇಳೋದೇ ಬೇಡ ಎನ್ನುವಂತಾಗಿದೆ. ಈ ಹಿನ್ನೆಲೆಯಲ್ಲಿ ಈಗ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ‘X’ ಖಾತೆಯಲ್ಲಿ ಮಾಡಿರುವ ಪೋಸ್ಟ್ (ಟ್ವೀಟ್) ಕುತೂಹಲವನ್ನು ಮೂಡಿಸಿದೆ. TAX ವಿಷಯದಲ್ಲಿ ಮಧ್ಯಮವರ್ಗಕ್ಕೆ ಏನಾದ್ರೂ ರಿಲೀಫ್ ಸಿಗಬಹುದು ಎನ್ನುವ ನಿರೀಕ್ಷೆ ಮತ್ತೆ ಹುಟ್ಟಿಕೊಂಡಿದೆ.


COMMERCIAL BREAK
SCROLL TO CONTINUE READING

ಜನ ಸಾಮಾನ್ಯರು ಇನ್ ಕಮ್ ಟ್ಯಾಕ್ಸ್ ಮೂಲಕ ಮಾತ್ರವಲ್ಲ, ಜಿ‌ಎಸ್‌ಟಿ ಮೂಲಕವೂ ಸಿಕ್ಕಾಪಟ್ಟೆ ಟ್ಯಾಕ್ಸ್ ಕಟ್ಟಬೇಕಾಗಿದೆ. ದುಡಿದದ್ದೆಲ್ಲವನ್ನೂ ಟ್ಯಾಕ್ಸ್ ಕಟ್ಟು ಎನ್ನುವಂಥ ದುಸ್ಥಿತಿ ಬಂದಿದೆ. ಜನ ಈಗ ಜಾಸ್ತಿ ದುಡಿಯುತ್ತಿದ್ದರೂ ಯದ್ವಾತದ್ವಾ ತೆರಿಗೆ ಕಟ್ಟಬೇಕಾಗಿರುವುದರಿಂದ ಉಳಿತಾಯ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಹಾಗಾಗಿಯೇ ಈಗ ಹೆಚ್ಚು ಟ್ಯಾಕ್ಸ್ ಕಟ್ಟುವ ಮಧ್ಯಮವರ್ಗ ನಿರ್ಮಲಾ ಸೀತಾರಾಮನ್ ಹೆಸರು ಹೇಳಿದರೆ ಬೆಚ್ಚಿ ಬೀಳುವ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ತೆರಿಗೆದಾರರು ತಮ್ಮ ‘X’ ಖಾತೆ ಮುಖಾಂತರ, ಅಂದರೆ ಟ್ವೀಟ್ ಮುಖಾಂತರ ನಿರ್ಮಲಾ ಸೀತಾರಾಮನ್ ಅವರಿಗೆ ರಿಲೀಫ್ ಕೊಡಿ ಅಂತಾ ಕೇಳಿಕೊಂಡಿದ್ದಾರೆ.


ಇದನ್ನೂ ಓದಿ- Ration Card Updates: ಎಪಿಎಲ್‌ ಕಾರ್ಡುಗಳ ರದ್ಧತಿ ಬಗ್ಗೆ ಆಹಾರ ಇಲಾಖೆ ಹೇಳಿದ್ದೇನು..?


ತೆರಿಗೆದಾರರೊಬ್ಬರು ತಮ್ಮ  ‘X’ ಖಾತೆಯಲ್ಲಿ ನಿರ್ಮಲಾ ಸೀತಾರಾಮನ್ ಅವರನ್ನು ಟ್ಯಾಗ್ ಮಾಡಿ, ‘TAX ವಿಷಯದಲ್ಲಿ ಮಧ್ಯಮ ವರ್ಗಕ್ಕೆ ಸ್ವಲ್ಪ ರಿಲೀಫ್ ಕೊಡಿ ಮೇಡಂ’ ಎಂದು ಕೇಳಿಕೊಂಡಿದ್ದಾರೆ. ಇದೇನು ಹೊಸದಲ್ಲ, ಈ ರೀತಿ ಹಲವಾರು ಪೋಸ್ಟ್ ಗಳು ಬಂದಿವೆ. ಬೇರೆ ಬೇರೆ ಇಲಾಖೆ ಸಚಿವರ ವಿಷಯದಲ್ಲೂ ಹೀಗೆ ಪೋಸ್ಟ್ ಮಾಡಲಾಗುತ್ತಿರುತ್ತದೆ. ಆದರೆ ಈ ಬಾರಿ ನಿರ್ಮಲಾ ಸೀತಾರಾಮನ್ ಅವರು ಪ್ರತಿಕ್ರಿಯೆ ನೀಡಿದ್ದಾರೆ ಎನ್ನುವುದು ವಿಶೇಷ. 


ತೆರಿಗೆದಾರರ ‘ಟ್ಯಾಕ್ಸ್ ವಿಷಯದಲ್ಲಿ ಮಧ್ಯಮ ವರ್ಗಕ್ಕೆ ಸ್ವಲ್ಪ ರಿಲೀಫ್ ಕೊಡಿ ಮೇಡಂ’ ಎಂಬ ಪೋಸ್ಟ್ ಗೆ ‘X’ ವೇದಿಕೆಯಲ್ಲೇ ಉತ್ತರ ನೀಡಿರುವ ನಿರ್ಮಲಾ ಸೀತಾರಾಮನ್ ಅವರು ‘ನಿಮ್ಮ ಉತ್ತಮವಾದ ಮಾತುಗಳಿಗೆ ಮತ್ತು ತಿಳುವಳಿಕೆಗೆ ಧನ್ಯವಾದಗಳು. ನಿಮ್ಮ ಕಾಳಜಿಯನ್ನು ನಾನು ಮೆಚ್ಚುತ್ತೇನೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಸ್ಪಂದನಾಶೀಲವಾಗಿದೆ. ಜನರ ದನಿಯನ್ನು ಕೇಳುತ್ತದೆ. ನಿಮ್ಮ ಸಲಹೆ ಅಮೂಲ್ಯವಾದುದು’ ಪ್ರತಿಕ್ರಿಯಿಸಿದ್ದಾರೆ.
 
ಇದನ್ನೂ ಓದಿ- ಇದು ಪ್ರಪಂಚದಲ್ಲೇ ಅತ್ಯಂತ ದುಬಾರಿ ಎಮ್ಮೆ; ಅಷ್ಟು ದುಡ್ಡಿಗೆ ಬೆಂಗಳೂರಿನ ಒಳ್ಳೆ ಏರಿಯಾದಲ್ಲಿ ಮನೆ ಅಥವಾ ಫಾರಂ ಔಸ್ ಸಿಗುತ್ತೆ!


ಕೇಂದ್ರ ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್ ಯಾವತ್ತು? ಯಾವ ರೀತಿಯ ತೆರಿಗೆ ಹಾಕುತ್ತಾರೆ ಎಂಬುದನ್ನು ಅಂದಾಜು ಮಾಡಲು ಸಾಧ್ಯವೇ ಇಲ್ಲ ಎನ್ನುವ ಆತಂಕದಲ್ಲಿದ್ದ ತೆರಿಗೆದಾರರು, ಈಗ ತೆರಿಗೆದಾರರೊಬ್ಬರ ಪೋಸ್ಟ್ ಗೆ ನಿರ್ಮಲಾ ಸೀತಾರಾಮನ್ ಅವರು ಸ್ಪಂದಿಸಿರುವುದು, ನಮ್ಮ ಸರ್ಕಾರ ನಿಮ್ಮ ದನಿಯನ್ನು ಕೇಳುತ್ತದೆಂದು ಹೇಳಿರುವುದನ್ನು ಕಂಡು ಮಧ್ಯಮ ವರ್ಗದ ತೆರಿಗೆ ಸಂಕಷ್ಟಕ್ಕೆ ಸ್ವಲ್ಪವಾದರೂ ಪರಿಹಾರ ಸಿಗಬಹುದು ಎನ್ನುವ ನಿರೀಕ್ಷೆಯನ್ನು ಇಟ್ಟುಕೊಂಡಿದೆ. 


ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಮಧ್ಯಮ ವರ್ಗಕ್ಕೆ ರಿಲೀಫ್ ಕೊಡಬೇಕೆಂಬ ಬೇಡಿಕೆಯನ್ನು ಪುನರುಚ್ಚರಿಸಿದ್ದಾರೆ. ತೆರಿಗೆ ಹೊರೆಯನ್ನು ಇಳಿಸಿ ಎಂದು ಪರಿಪರಿಯಾಗಿ ಕೇಳಿಕೊಂಡಿದ್ದಾರೆ.


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ