Public Provident Fund Interest Rate : ಸಾರ್ವಜನಿಕ ಭವಿಷ್ಯ ನಿಧಿ (PPF) ಸರ್ಕಾರದ ಬೆಂಬಲಿತ ಸಣ್ಣ ಉಳಿತಾಯ ಯೋಜನೆಯಾಗಿದೆ. ಪಿಪಿಎಫ್‌ನ ಬಡ್ಡಿ ದರವನ್ನು ಹಣಕಾಸು ಸಚಿವಾಲಯವು ಈ ತಿಂಗಳ ಕೊನೆಯಲ್ಲಿ ಪರಿಶೀಲಿಸುತ್ತದೆ. ಪರಿಶೀಲನೆಯ ನಂತರ, ಬಡ್ಡಿದರ ಹೆಚ್ಚಳದ ಕುರಿತು ಸೆಪ್ಟೆಂಬರ್ 30 ರಂದು ಪ್ರಕಟಣೆ ಹೊರಡಿಸುವ ಸಾಧ್ಯತೆ ಇದೆ. ಏಪ್ರಿಲ್ 2020ರಿಂದ PPF ನ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಪ್ರಸ್ತುತ, ಪಿಪಿಎಫ್ ಮೇಲೆ 7.1 ಪ್ರತಿಶತ ವಾರ್ಷಿಕ ಬಡ್ಡಿಯನ್ನು ನೀಡಲಾಗುತ್ತಿದೆ. ಸಣ್ಣ ಉಳಿತಾಯ ಯೋಜನೆಗಳಲ್ಲಿನ ಹೂಡಿಕೆಯ ಮೇಲಿನ ಬಡ್ಡಿದರವನ್ನು ತ್ರೈಮಾಸಿಕ ಆಧಾರದ ಮೇಲೆ ಸರ್ಕಾರವು ಅಧಿಸೂಚಿಸುತ್ತದೆ.


COMMERCIAL BREAK
SCROLL TO CONTINUE READING

ಸರ್ಕಾರ ಬಡ್ಡಿದರ ಹೆಚ್ಚಿಸಲಿದೆಯೇ? : 
ಹೂಡಿಕೆದಾರರು ಪಿಪಿಎಫ್ ಮೇಲಿನ ಬಡ್ಡಿ ದರವನ್ನು ಹೆಚ್ಚಿಸುವ ಬಗ್ಗೆ  ಬಹಳ ಸಮಯದಿಂದ ನಿರೀಕ್ಷಿಸುತ್ತಿದ್ದಾರೆ. ಆದರೆ ಈ ಬಾರಿಯೂ ಸರ್ಕಾರ  ಅಕ್ಟೋಬರ್‌ನಿಂದ ಡಿಸೆಂಬರ್ ತ್ರೈಮಾಸಿಕಕ್ಕೆ 7.10% ಬಡ್ಡಿದರವನ್ನು ಕಾಯ್ದುಕೊಳ್ಳಬಹುದು ಎಂದು ತಜ್ಞರು ಹೇಳುತ್ತಾರೆ. ಜೂನ್‌ನಲ್ಲಿ ಹಣಕಾಸು ಸಚಿವಾಲಯವು ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿ ದರವನ್ನು ಹೆಚ್ಚಿಸಿತ್ತು.


ಇದನ್ನೂ ಓದಿ : Gold-Silver Price Today:ಇಂದು ಕೂಡಾ ಚಿನ್ನದ ಬೆಲೆಯಲ್ಲಿ ಕುಸಿತ ! ಹಬ್ಬಕ್ಕೂ ಮುನ್ನ ಅಗ್ಗದ ಬೆಲೆಯಲ್ಲಿ ಖರೀದಿಸಿ ಬಂಗಾರ


PPF ಬಡ್ಡಿ ದರವನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ? : 
ಪ್ರತಿ ತ್ರೈಮಾಸಿಕಕ್ಕೆ ಅನ್ವಯವಾಗುವ ಬಡ್ಡಿ ದರವನ್ನು ಪ್ರತಿ ಹಣಕಾಸು ವರ್ಷದ ಕೊನೆಯಲ್ಲಿ ಹೂಡಿಕೆದಾರರ PPF ಖಾತೆಗೆ ಜಮಾ ಮಾಡಲಾಗುತ್ತದೆ. ಇದರೊಂದಿಗೆ ಹೂಡಿಕೆದಾರರು ವಾರ್ಷಿಕವಾಗಿ ಚಕ್ರಬಡ್ಡಿಯನ್ನೂ ಪಡೆಯುತ್ತಾರೆ. ಪ್ರತಿ ತಿಂಗಳ ಐದನೇ ತಾರೀಕು ಅಥವಾ  ತಿಂಗಳ ಕೊನೆಯ ದಿನ ಈ ಎರಡರಲ್ಲಿ ಯಾವಾಗ ಖಾತೆಯಲ್ಲಿ ಕಡಿಮೆ ಮೊತ್ತ ಇರುತ್ತದೆಯೋ ಅದನ್ನು ಗಣನೆಗೆ ತೆಗೆದುಕೊಂಡು ಬಡ್ಡಿಯನ್ನು ಲೆಕ್ಕಹಾಕಲಾಗುತ್ತದೆ. ವರ್ಷದ ಆರಂಭದಲ್ಲಿ ಪಿಪಿಎಫ್‌ನಲ್ಲಿ ಹೂಡಿಕೆ ಮಾಡುವುದು ಯಾವಾಗಲೂ ಸೂಕ್ತ. ಈ ರೀತಿಯಾಗಿ ವರ್ಷವಿಡೀ ನಿಮ್ಮ ಠೇವಣಿಯ ಮೇಲಿನ ಬಡ್ಡಿಯನ್ನು ಪಡೆಯುವುದು ಸಾಧ್ಯವಾಗುತ್ತದೆ. 


ಹೂಡಿಕೆಯ ಮೇಲೆ ಗರಿಷ್ಠ ಆದಾಯವನ್ನು ಪಡೆಯಲು, ಹೂಡಿಕೆದಾರರು ಪ್ರತಿ ತಿಂಗಳ 5 ನೇ ತಾರೀಕಿನ ಮೊದಲು ಖಾತೆಯಲ್ಲಿ ನಿರ್ದಿಷ್ಟ ಮೊತ್ತವನ್ನು ಜಮಾ ಮಾಡುವಂತೆ ಹಣಕಾಸು ತಜ್ಞರು ಶಿಫಾರಸು ಮಾಡುತ್ತಾರೆ. ಈ ಹಣ ಇಡೀ ತಿಂಗಳಿಗೆ ಬಡ್ಡಿಯನ್ನು ಸ್ವೀಕರಿಸುತ್ತದೆ.  ಪಿಪಿಎಫ್ ಖಾತೆಯಲ್ಲಿ  1.5 ಲಕ್ಷದವರೆಗಿನ ವಾರ್ಷಿಕ ಠೇವಣಿಯ ಮೇಲೆ  ಸೆಕ್ಷನ್ 80 ಸಿ ಅಡಿಯಲ್ಲಿ ಆದಾಯ ತೆರಿಗೆ ವಿನಾಯಿತಿ ನೀಡಲಾಗಿದೆ. ಇದರ  PPF ಮೆಚುರಿಟಿ ಮೊತ್ತದ ಮೇಲೆ ಕೂಡಾ ತೆರಿಗೆ ವಿಧಿಸುವುದಿಲ್ಲ. 


ಇದನ್ನೂ ಓದಿ : Add On Credit Card: ಕುಟುಂಬಕ್ಕೆ ತುಂಬಾ ಪ್ರಯೋಜನಕಾರಿ ಈ ಕ್ರೆಡಿಟ್ ಕಾರ್ಡ್


ಈ ಬಾರಿ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಸೆಪ್ಟೆಂಬರ್ 30, 2023 ರಂದು ಪರಿಶೀಲಿಸಲಾಗುವುದು. 2023-24 ರ ಹಣಕಾಸು ವರ್ಷದ ಸೆಪ್ಟೆಂಬರ್-ನವೆಂಬರ್ ತ್ರೈಮಾಸಿಕಕ್ಕೆ ದರಗಳು ಅನ್ವಯಿಸುತ್ತವೆ. ಜುಲೈ-ಸೆಪ್ಟೆಂಬರ್ 2023 ತ್ರೈಮಾಸಿಕದಲ್ಲಿ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರವನ್ನು 30 bpsಗೆ  ಹೆಚ್ಚಿಸಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.