Gold-Silver Price Today:ಇಂದು ಕೂಡಾ ಚಿನ್ನದ ಬೆಲೆಯಲ್ಲಿ ಕುಸಿತ ! ಹಬ್ಬಕ್ಕೂ ಮುನ್ನ ಅಗ್ಗದ ಬೆಲೆಯಲ್ಲಿ ಖರೀದಿಸಿ ಬಂಗಾರ

Gold-Silver Price Today:ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. 

Written by - Ranjitha R K | Last Updated : Sep 22, 2023, 12:59 PM IST
  • ದೇಶದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಹೆಚ್ಚಳ
  • ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆ
  • ನೀವೂ ಚೆಕ್ ಮಾಡಿಕೊಳ್ಳಿ ಇಂದಿನ ಬೆಲೆ
Gold-Silver Price Today:ಇಂದು ಕೂಡಾ ಚಿನ್ನದ ಬೆಲೆಯಲ್ಲಿ ಕುಸಿತ ! ಹಬ್ಬಕ್ಕೂ ಮುನ್ನ ಅಗ್ಗದ ಬೆಲೆಯಲ್ಲಿ ಖರೀದಿಸಿ ಬಂಗಾರ title=

Gold-Silver Price Today : ಜಾಗತಿಕ ಮಾರುಕಟ್ಟೆಯಲ್ಲಿ ಇಂದು ಕೂಡಾ ಚಿನ್ನದ ಬೆಲೆಯಲ್ಲಿ ಕುಸಿತ ಕಂಡು ಬಂದಿದೆ. ಇನ್ನು ಭಾರತೀಯ ಮಾರುಕಟ್ಟೆ ಬಗ್ಗೆ ಹೇಳುವುದಾದರೆ ಇಲ್ಲಿ ಏರಿಕೆಯಾಗಿದ್ದು, 24 ಕ್ಯಾರೆಟ್ ಬಂಗಾರದ ಬೆಲೆ ಮಾತ್ರ. 22 ಕ್ಯಾರೆಟ್ ಬಂಗಾರದ ಬೆಲೆ ಯ್ತಾಸ್ಥಿತಿಯಲ್ಲಿಯೇ ಇದೆ. ಅಂದರೆ ಕಳೆದ ಎರಡು ದಿನಗಳಿಂದ  22 ಕ್ಯಾರೆಟ್ ಬಂಗಾರದ ಬೆಲೆ  ಎಷ್ಟಿತ್ತೋ ಇಂದು ಕೂಡಾ ಇಷ್ಟೇ ಇದೆ. ಸತತ ಕುಸಿತದ ನಂತರ ಇಂದು ಚಿನ್ನದ ಬೆಲೆಯಲ್ಲಿ ಕೊಂಚ ಏರಿಕೆಯಾಗಿದೆ. ಇಂದು, ಮಲ್ಟಿ ಕಮೊಡಿಟಿ ಎಕ್ಸ್ಚೇಂಜ್ ನಲ್ಲಿ ಚಿನ್ನದ (MCX Gold Rates) ಪ್ರತಿ 10 ಗ್ರಾಂಗೆ 58,800 ರೂ. ಆಗಿದೆ.  

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ : 
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಮಾತ್ರವಲ್ಲ ಬೆಳ್ಳಿ ಬೆಲೆ ಕೂಡಾ ಕುಸಿದಿದೆ. ಕಾಮೆಕ್ಸ್‌ನಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ 1940 ಡಾಲರ್‌ಗಳ ಮಟ್ಟದಲ್ಲಿದೆ. ಇದಲ್ಲದೇ ಪ್ರತಿ ಔನ್ಸ್ ಬೆಳ್ಳಿಯ ಬೆಲೆ 23.81 ಡಾಲರ್ ಆಗಿದೆ. 

ಇದನ್ನೂ ಓದಿ : Add On Credit Card: ಕುಟುಂಬಕ್ಕೆ ತುಂಬಾ ಪ್ರಯೋಜನಕಾರಿ ಈ ಕ್ರೆಡಿಟ್ ಕಾರ್ಡ್

MCX ನಲ್ಲಿ ಚಿನ್ನದ ಬೆಲೆ : 
ಇಂದು, ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 58,839 ರೂಪಾಯಿಗಳ ಮಟ್ಟದಲ್ಲಿದೆ. ಅಂದರೆ ಬೆಲೆಯಲ್ಲಿ ಶೇಕಡಾ 0.03 ರಷ್ಟು ಹೆಚ್ಚಳವಾಗಿದೆ. ಇದಲ್ಲದೇ ಬೆಳ್ಳಿಯ ದರದಲ್ಲಿ ಶೇ.0.27ರಷ್ಟು ಏರಿಕೆಯಾಗಿ ಪ್ರತಿ ಕೆಜಿಗೆ 73263 ರೂ. ಆಗಿದೆ. 

ವಿವಿಧ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ :
ಇಂದು ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 55350 ರೂ. ಆದರೆ, ಚೆನ್ನೈನಲ್ಲಿ 55500 ರೂ., ಬೆಂಗಳೂರಿನಲ್ಲಿ 55200 ರೂ., ಕೋಲ್ಕತ್ತಾದಲ್ಲಿ 55200 ರೂ., ಮುಂಬೈನಲ್ಲಿ 55200 ರೂ. ಮತ್ತು ಪುಣೆಯಲ್ಲಿ  55,200 ರೂ. ಆಗಿದೆ. 

ಇದನ್ನೂ ಓದಿ : Bank FD rates: ಈ ಬ್ಯಾಂಕುಗಳಿಂದ ಎಫ್‍ಡಿ ಬಡ್ಡಿದರ ಪರಿಷ್ಕರಣೆ, ಎಷ್ಟಿದೆ ಪರಿಶೀಲಿಸಿ

ನೀವು ಇಲ್ಲಿ ದರಗಳನ್ನು ಪರಿಶೀಲಿಸಬಹುದು : 
ನಿಮ್ಮ ಮನೆಯಲ್ಲಿ ಕುಳಿತು ಚಿನ್ನದ ಬೆಲೆಯನ್ನು ಪರಿಶೀಲಿಸಬಹುದು. ಇಂಡಿಯನ್ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ​​ಪ್ರಕಾರ,  8955664433 ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಬೆಲೆಯನ್ನು ಪರಿಶೀಲಿಸಬಹುದು. ನೀವು ಯಾವ ನಂಬರ್ ನಿಂದ ಮಿಸ್ಡ್ ಕಾಲ್ ಕೊಡುತ್ತಿರೋ ಅದೇ ನಂಬರ್ ಗೆ ಮೆಸೇಜ್ ಬರುತ್ತದೆ. 

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರವಾದುದಲ್ಲ. ಬೆಳಗ್ಗೆ 8.30ರ ಸಮಯದಲ್ಲಿ ಇದ್ದ ಬೆಲೆಯನ್ನು ನೀಡಲಾಗಿದೆ. ಜೊತೆಗೆ ಈ ದರದ ಮೇಲೆ ಜಿಎಸ್​’ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

Trending News