ನವದೆಹಲಿ : ಹಬ್ಬದ ಋತುವಿನಲ್ಲಿ, ದೇಶದಲ್ಲಿ ದ್ವಿದಳ ಧಾನ್ಯಗಳು ಮತ್ತು ಖಾದ್ಯ ತೈಲಗಳ ಬೆಲೆಯನ್ನು (Edible Oil Price) ಕಡಿಮೆ ಮಾಡಲು ಸರ್ಕಾರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಆರಂಭಿಸಿದೆ. ವಿದೇಶಗಳಿಂದ ಆಮದುಗಳನ್ನು ಹೆಚ್ಚಿಸುವುದರ ಜೊತೆಗೆ, ಆಹಾರ ಪದಾರ್ಥಗಳ ಸಂಗ್ರಹವನ್ನು ಪರಿಶೀಲಿಸುವಂತೆ ಸರ್ಕಾರ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ. 


COMMERCIAL BREAK
SCROLL TO CONTINUE READING

'ಆಹಾರ ತೈಲ ಬೆಲೆಗಳು ಜಾಗತಿಕವಾಗಿ ಹೆಚ್ಚಾಗಿದೆ' :
ಆಹಾರ ಸಚಿವಾಲಯದ ಕಾರ್ಯದರ್ಶಿ ಸುಧಾಂಶು ಪಾಂಡೆ (Sudhanshu Pandey) ಮಾತನಾಡಿ, ಮಲೇಶಿಯಾದಲ್ಲಿ ಕಾರ್ಮಿಕರ ಬಿಕ್ಕಟ್ಟು ಮತ್ತು ಜೈವಿಕ ಇಂಧನಗಳಿಗಾಗಿ ಖಾದ್ಯ ತೈಲಗಳ ಡೈವರ್ಶನ್ ನಿಂದಾಗಿ,  ಖಾದ್ಯ ತೈಲಗಳ ಅಂತರಾಷ್ಟ್ರೀಯ ಬೆಲೆಯಲ್ಲಿ ಏರಿಕೆಯಾಗಿದೆ. ಇದರ ಹೊರತಾಗಿಯೂ, ಭಾರತದಲ್ಲಿ ಖಾದ್ಯ ತೈಲಗಳ  ಬೆಲೆಗಳ (Edible Oil Price) ಮೇಲೆ ಹೆಚ್ಚು ಪರಿಣಾಮ ಬೀರಿಲ್ಲ. ಅಂತಾರಾಷ್ಟ್ರೀಯ ಬೆಲೆಗಳು ಹೆಚ್ಚಾಗಿದ್ದರೂ ಭಾರತದಲ್ಲಿ ಅಡುಗೆ ಎಣ್ಣೆಯ ಬೆಲೆಗಳು ಕಡಿಮೆಯೇ ಇದೆ ಎಂದಿದ್ದಾರೆ. 


ಇದನ್ನೂ ಓದಿ :  Best Government Scheme : ತಿಂಗಳಿಗೆ ಬರೀ ₹28 ಹೊದಿಕೆ ಮಾಡಿ ₹4 ಲಕ್ಷ ಲಾಭ ಪಡೆಯಿರಿ; ವಿವರಗಳಿಗೆ ಇಲ್ಲಿ ನೋಡಿ 


'ಕಾಳಸಂಗ್ರಹ ತಡೆಗೆ ರಾಜ್ಯಗಳಿಗೆ ಸೂಚನೆ : 
ಖಾದ್ಯ ತೈಲಗಳ ಆಮದನ್ನು ಹೆಚ್ಚಿಸುವುದರ ಜೊತೆಗೆ, ಸರ್ಕಾರವು ಅದರ ಸಂಗ್ರಹವನ್ನು ಕಟ್ಟುನಿಟ್ಟಾಗಿ ತಡೆಯುವಂತೆ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ. ಸಾಸಿವೆ ಎಣ್ಣೆ (Mustard oil) ಉತ್ಪಾದನೆಯು 10 ಲಕ್ಷ ಮೆಟ್ರಿಕ್ ಟನ್ ಹೆಚ್ಚಾಗಿದೆ.  ಶೀಘ್ರದಲ್ಲೇ ಸರ್ಕಾರದ ಈ ಕ್ರಮಗಳು ಪರಿಣಾಮ ಬೀರಲಿವೆ ಎಂಬುದು ಸರ್ಕಾರದ ನಂಬಿಕೆ. ಖಾದ್ಯ ತೈಲದ ಬೆಲೆಗಳು ಇಳಿಯಲು ಪ್ರಾರಂಭಿಸುತ್ತದೆ ಇದರೊಂದಿಗೆ, ಹಬ್ಬದ ಸಮಯದಲ್ಲಿ ಜನ ಬೆಲೆ ಏರಿಕೆಯಿಂದ ಮುಕ್ತಿ ಪಡೆಯಲಿದ್ದಾರೆ.   


ತೊಗರಿಬೇಳೆಯ ಆಮದು ಹೆಚ್ಚಿಸಿದ ಕೇಂದ್ರ : 
ದ್ವಿದಳ ಧಾನ್ಯಗಳ ಬೆಲೆಯನ್ನು ನಿಯಂತ್ರಿಸಲು ಸರ್ಕಾರವು ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಆಹಾರ ಕಾರ್ಯದರ್ಶಿ ಹೇಳಿದರು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅಧಿಕ ಪ್ರಮಾಣದಲ್ಲಿ ಬೇಳೆಯನ್ನು ಆಮದು ಮಾಡಿಕೊಳ್ಳಲಾಗಿದೆ. ಮುಂದಿನ ತಿಂಗಳು ರಾಜ್ಯಗಳ ಜೊತೆ ಸಭೆ ನಡೆಸಿ, ಖಾದ್ಯ ತೈಲ ಮತ್ತು ದ್ವಿದಳ ಧಾನ್ಯಗಳ ಬೆಲೆಯನ್ನು ಮತ್ತೊಮ್ಮೆ ಪರಿಶೀಲಿಸಲಾಗುವುದು. ಫೆಬ್ರವರಿಯಿಂದ ದೇಶದಲ್ಲಿ ಖಾದ್ಯ ತೈಲ ಮತ್ತು ದ್ವಿದಳ ಧಾನ್ಯಗಳ ಬೆಲೆ ಇಳಿಕೆಯಾಗಲಿದೆ ಎಂದು ಹೇಳಿದ್ದಾರೆ. ಆ ಹೊತ್ತಿಗೆ ಹೊಸ ಫಸಲು ಕೂಡಾ ಬಂದು, ಹಣದುಬ್ಬರದಿಂದ ಪರಿಹಾರ ಸಿಗಲಿದೆ.  


ಇದನ್ನೂ ಓದಿ :  EPFO Alert: ಒಂದಕ್ಕಿಂತ ಹೆಚ್ಚು UAN ಸಂಖ್ಯೆ ಇದೆಯೇ? ಈ ಸುದ್ದಿಯನ್ನು ತಪ್ಪದೇ ಓದಿ


'ಸ್ಟಾಕ್ ಮಿತಿ ಮುಂದಿನ ವಾರದಿಂದ ನಿರ್ಧಾರ : 
ವ್ಯಾಪಾರಿಗಳೊಂದಿಗೆ ಮಾತುಕತೆ ನಡೆಸಿದ ನಂತರ ರಾಜ್ಯ ಸರ್ಕಾರಗಳು ಮುಂದಿನ ವಾರದಿಂದ ಸ್ಟಾಕ್ ಮಿತಿಯನ್ನು ನಿಗದಿಪಡಿಸಲು ಆರಂಭಿಸುವುದಾಗಿ ಸುಧಾಂಶು ಪಾಂಡೆ ಹೇಳಿದ್ದಾರೆ. ಯಾವುದೇ ವ್ಯಾಪಾರಿ ನಿಗದಿತ ಮಿತಿಗಿಂತ ಹೆಚ್ಚಿನ ದಾಸ್ತಾನು ಸಂಗ್ರಹಿಸುತ್ತಿರುವುದು ಕಂಡುಬಂದರೆ, ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈರುಳ್ಳಿ ಬೆಲೆಯ (Onion price) ಮೇಲೆ ನಿಗಾ ಇಡಲು ಪ್ರತಿ ವಾರ ಸಚಿವಾಲಯದ ಸಭೆ ನಡೆಯಲಿದೆ ಎಂದು ಅವರು ಹೇಳಿದ್ದಾರೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ