ನವದೆಹಲಿ : ನಾಣ್ಯಗಳ ಸಂಗ್ರಹದ ಅಭ್ಯಾಸ ನಿಮಗಿದ್ದರೆ ನಿಮ್ಮ ಈ ಹವ್ಯಾಸವೇ ಲಕ್ಷ ಲಕ್ಷ ಸಂಪಾದನೆಗೆ ದಾರಿ ಮಾಡಿಕೊಡಬಹುದು. ಹೌದು, 1 ಮತ್ತು 2 ರೂಪಾಯಿಗಳ ಹಳೆಯ ನಾಣ್ಯಗಳು (Old coin sale) ನಿಮ್ಮನ್ನು ಇಂದು ಕುಳಿತಲ್ಲಿಯೇ ಕೋಟ್ಯಾಧಿಪತಿಯನ್ನಾಗಿ ಮಾಡಬಹುದು. ಹಳೆಯ ಅಪರೂಪದ ನಾಣ್ಯಗಳನ್ನು ಖರೀದಿಸುವ ಅನೇಕರು ನಮ್ಮ ಮಧ್ಯೆಯೇ ಇದ್ದಾರೆ.  ಈ ಅಪರೂಪದ ನಾಣ್ಯಗಳಿಗಾಗಿ ಎಷ್ಟು ಹಣ ಕೊಟ್ಟು ಬೇಕಾದರೂ ಖರೀದಿಗೆ ಮುಂದಾಗುತ್ತಾರೆ. ನಿಮ್ಮಲ್ಲಿ ಇಂಥ ಅಪರೂಪದ ನಾಣ್ಯಗಳಿದ್ದರೆ ನೀವು ಮಾಡಬೇಕಾಗಿರುವುದು ಇಷ್ಟೇ. ಆ ನಾಣ್ಯಗಳನ್ನು ಎಲ್ಲಿ ಮಾರಾಟ ಮಾಡಬೇಕು ಎನ್ನುವುದನ್ನು ತಿಳಿದುಕೊಳ್ಳಬೇಕು. 


COMMERCIAL BREAK
SCROLL TO CONTINUE READING

2 ರೂಪಾಯಿಯ ಈ ನಾಣ್ಯ ( 2 rupee coin) ನಿಮ್ಮನ್ನು ಕುಳಿತಲ್ಲಿಯೇ ಮಿಲಿಯನೇರ್ ಮಾಡಿಬಿಡಬಹುದು. 1994 ರಲ್ಲಿ ಮುದ್ರಿಸಲಾಗಿರುವ ಈ ನಾಣ್ಯದ ಹಿಂಭಾಗದಲ್ಲಿ ಭಾರತದ ಧ್ವಜ ಇದೆ. ಈ ಅಪರೂಪದ ನಾಣ್ಯಗಳ ಬೆಲೆಯನ್ನು ಕ್ವಿಕರ್  ವೆಬ್‌ಸೈಟ್‌ನಲ್ಲಿ (quikr website)  5 ಲಕ್ಷ ರೂ. ಎಂದು ನಿಗದಿ ಮಾಡಲಾಗಿದೆ. 


ಇದನ್ನೂ ಓದಿ :  SBI ಆನ್‌ಲೈನ್ ಬ್ಯಾಂಕಿಂಗ್ ಈಗ ಇನ್ನೂ ಸುರಕ್ಷಿತ, YONO App ಹೊಸ ಭದ್ರತಾ ವೈಶಿಷ್ಟ್ಯ


ಸ್ವಾತಂತ್ರ್ಯದ ಮೊದಲು, ಮುದ್ರಿಸಲಾಗಿರುವ ವಿಕ್ಟೋರಿಯಾ ರಾಣಿಯ ಚಿತ್ರ ಇರುವ ಒಂದು ರೂಪಾಯಿ ಬೆಳ್ಳಿ ನಾಣ್ಯದ (One rupee silver coin) ಮೌಲ್ಯವು 2 ಲಕ್ಷ ರೂಪಾಯಿಗಳಾಗಿವೆ. ಇನ್ನು ಜಾರ್ಜ್ ವಿ ಕಿಂಗ್ ಚಕ್ರವರ್ತಿ 1918 ರ ಒಂದು ರೂಪಾಯಿ ಬ್ರಿಟಿಷ್ ನಾಣ್ಯದ (british coin) ಮೌಲ್ಯವು 9 ಲಕ್ಷ ರೂಪಾಯಿಗಳಿಗೆ ಏರಿದೆ. 


ಈ ನಾಣ್ಯಗಳನ್ನು ಇ-ಕಾಮರ್ಸ್ ಸೈಟ್ ಕ್ವಿಕರ್ ನಲ್ಲಿ ಮಾರಾಟ ಮಾಡಲಾಗುತ್ತಿದೆ. ಯಾವ ಬೆಲೆಗೆ ಈ ನಾಣ್ಯಗಳು ಮಾರಾಟವಾಗುತ್ತವೆ ಎನ್ನುವುದು ಮಾರಾಟಗಾರ ಮತ್ತು ಖರೀದಿದಾರರಿಗೆ ಬಿಟ್ಟದ್ದು. ಆದರು ಈ ನಾಣ್ಯಗಳು ಉತ್ತಮ ಬೆಲೆಗೆ ಮಾರಾಟವಾಗುತ್ತಿರುವುದಂತೂ ಸುಳ್ಳಲ್ಲ.


ಇದನ್ನೂ ಓದಿ :  Passport in Post Office: ಈಗ ನಿಮ್ಮ ಹತ್ತಿರದ ಅಂಚೆ ಕಚೇರಿಯಲ್ಲೂ ಪಾಸ್‌ಪೋರ್ಟ್ ಲಭ್ಯ


ನಾಣ್ಯಗಳನ್ನು ಎಲ್ಲಿ ಮಾರಾಟ ಮಾಡಬಹುದು :


ನಿಮ್ಮ ಬಳಿ ಕೂಡಾ ಇಂಥಹ ನಾಣ್ಯಗಳಿದ್ದು, ಅವುಗಳನ್ನು ಮಾರಾಟ ಮಾಡಲು ಬಯಸಿದರೆ, ಮೊದಲು ಆನ್ಲೈನ್  ಸೈಟ್ ಗೆ (online site) ಹೋಗಿ ನೋಂದಾಯಿಸಿಕೊಳ್ಳಬೇಕು. ನಾಣ್ಯದ ಫೋಟೋ ಕ್ಲಿಕ್ ಮಾಡಿ ಮತ್ತು ಅದನ್ನು ಸೈಟ್‌ಗೆ ಅಪ್‌ಲೋಡ್ ಮಾಡಿ. ಖರೀದಿದಾರರು ನಿಮ್ಮನ್ನು ನೇರವಾಗಿ ಸಂಪರ್ಕಿಸುತ್ತಾರೆ. ಅಲ್ಲಿಂದ ನೀವು ಪಾವತಿ ಮತ್ತು ವಿತರಣೆಯ ನಿಯಮಗಳ ಪ್ರಕಾರ ನಾಣ್ಯವನ್ನು ಮಾರಾಟ ಮಾಡಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.