Indian Currency: 25 ಪೈಸೆಯ ಬದಲಿಗೆ 1.5 ಲಕ್ಷ ರೂ. ಮಾರಾಟ ಹೇಗೆ ಇಲ್ಲಿದೆ ಸಂಪೂರ್ಣ ಮಾಹಿತಿ

Indian Currency: ನಿಮ್ಮಲ್ಲೂ 25 ಪೈಸೆ  ನಾಣ್ಯ ಇದೆಯಾ?  ಇದೆ ಎಂದಾದರೆ ತಡ ಮಾಡಬೇಡಿ. 25 ಪೈಸೆಯ ಬದಲಿಗೆ ನೀವೂ ಪಡೆಯಬಹುದು 1.5 ಲಕ್ಷ ರೂ.  

Written by - Ranjitha R K | Last Updated : Jun 25, 2021, 10:10 AM IST
  • 25 ಪೈಸೆಯ ಬದಲಿಗೆ 1.5 ಲಕ್ಷ ಗಳಿಸುವ ಅವಕಾಶ
  • ಈ ಬಣ್ಣದ 25 ಪೈಸೆಯ ನಾಣ್ಯ ನಿಮ್ಮಲಿದೆಯಾ?
  • Indiamart.com ಗೆ ಭೇಟಿ ನೀಡುವ ಮೂಲಕ ಈ ನಾಣ್ಯಗಳನ್ನ ಮಾರಾಟ ಮಾಡಬಹುದು
Indian Currency: 25 ಪೈಸೆಯ ಬದಲಿಗೆ 1.5 ಲಕ್ಷ ರೂ. ಮಾರಾಟ ಹೇಗೆ ಇಲ್ಲಿದೆ ಸಂಪೂರ್ಣ ಮಾಹಿತಿ title=
25 ಪೈಸೆಯ ಬದಲಿಗೆ 1.5 ಲಕ್ಷ ಗಳಿಸುವ ಅವಕಾಶ (photo india.com)

ನವದೆಹಲಿ : ನಿಮ್ಮಲ್ಲೂ 25 ಪೈಸೆ  (25 paisa coin) ನಾಣ್ಯ ಇದೆಯಾ?  ಇದೆ ಎಂದಾದರೆ ತಡ ಮಾಡಬೇಡಿ. 25 ಪೈಸೆಯ ಬದಲಿಗೆ ನೀವೂ ಪಡೆಯಬಹುದು 1.5 ಲಕ್ಷ ರೂ.  ನಿಮ್ಮಲ್ಲಿರುವ ನಾಣ್ಯವನ್ನೊಮ್ಮೆ ಪರಿಶೀಲಿಸಿಕೊಳ್ಳಿ. ನಂತರ ಅದರ ಫೋಟೋ ಕ್ಲಿಕ್ ಮಾಡಿ, ಅದನ್ನು ಇಂಡಿಯಾಮಾರ್ಟ್.ಕಾಂಗೆ (Indiamart.com) ಅಪ್‌ಲೋಡ್ ಮಾಡಿ. ಹಳೆಯ ನಾಣ್ಯಗಳು ಮತ್ತು ನೋಟುಗಳ ಮೇಲೆ ಈ ವೆಬ್‌ಸೈಟ್‌ನಲ್ಲಿ ಬಿಡ್‌ ಮಾಡಲಾಗುತ್ತದೆ. ಎಲ್ಲರಿಗಿಂತ ಹೆಚ್ಚು ಮೊತ್ತವನ್ನು ಬಿಡ್ ಮಾಡುವ ವ್ಯಕ್ತಿ ಈ ನಾಣ್ಯವನ್ನು ಪಡೆಯುತ್ತಾನೆ. 

ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ನಿಮ್ಮಲ್ಲಿರುವ 25 ಪೈಸೆ ನಾಣ್ಯದ  (Silver colour 25 paisa coin) ಬಣ್ಣ ಬೆಳ್ಳಿಯ ಬಣ್ಣದ್ದಾಗಿರಬೇಕು. ಇದಲ್ಲದೆ 5 ಪೈಸೆ ಮತ್ತು 10 ಪೈಸೆ ನಾಣ್ಯಗಳಿಗೂ ಈ ಸೈಟ್ ನಲ್ಲಿ ಉತ್ತಮ ಬೆಲೆ ಸಿಗುತ್ತಿವೆ. Indiamart.com ಗೆ ಭೇಟಿ ನೀಡುವ ಮೂಲಕ ಈ ನಾಣ್ಯಗಳಿಗೂ ಬಿಡ್ ಮಾಡಬಹುದು.

ಇದನ್ನೂ ಓದಿ : SBI's new scheme: ವ್ಯವಹಾರಕ್ಕೆ 10 ಲಕ್ಷದಿಂದ 100 ಕೋಟಿ ರೂ.ವರೆಗೆ ಸುಲಭ ಸಾಲ ಲಭ್ಯ

ಇಂಡಿಯಮಾರ್ಟ್ ಭಾರತದ ಅತಿದೊಡ್ಡ ಆನ್‌ಲೈನ್ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿದೆ. ಈ ವೆಬ್‌ಸೈಟ್‌ನಲ್ಲಿ (website) 60 ಕೋಟಿಗೂ ಹೆಚ್ಚು ಖರೀದಿದಾರರು ಮತ್ತು 60 ಲಕ್ಷಕ್ಕೂ ಹೆಚ್ಚು ಪೂರೈಕೆದಾರರು ನೋಂದಾಯಿಸಿಕೊಂಡಿದ್ದಾರೆ. ಮೊಬೈಲ್ (Mobile) ಮತ್ತು ಡೆಸ್ಕ್‌ಟಾಪ್ ಬಳಕೆದಾರರು ಸೇರಿದಂತೆ 100 ಮಿಲಿಯನ್ ಗೂ ಹೆಚ್ಚು ಬಳಕೆದಾರರನ್ನು ಇದು ಹೊಂದಿದೆ.

ಮಾಧ್ಯಮ ವರದಿಗಳ ಪ್ರಕಾರ, ನಿಮ್ಮ ಬಳಿ 5 ಮತ್ತು 10 ರೂಪಾಯಿ (10 rupee note)ನೋಟುಗಳಿದ್ದು, ಅದರಲ್ಲಿ ವೈಷ್ಣೋ ದೇವಿಯ ಚಿತ್ರವಿದ್ದರೆ, ಆ ನೋಟುಗಳು ಕೂಡಾ ಉತ್ತಮ ಬೆಲೆಗೆ ಮಾರಾಟವಾಗುತ್ತಿದೆ.  ಇದಲ್ಲದೆ, ನಾಣ್ಯಗಳು ಮತ್ತು ನೋಟುಗಳ ಮೇಲೆ 786 ಸರಣಿ ಸಂಖ್ಯೆಗಳಿದ್ದರೆ, ಇದಕ್ಕೂ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ. 

ಇದನ್ನೂ ಓದಿ : Petrol Prices Latest Update:ಈ ವರ್ಷ 125 ರೂ/ಲೀ ತಲುಪಲಿದೆ ಪೆಟ್ರೋಲ್ ಬೆಲೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News