ನವದೆಹಲಿ : RTGS ಮತ್ತು NEFTಗೆ ಸಂಬಂಧಿಸಿದಂತೆ  RBI ಮಹತ್ವದ ಘೋಷಣೆಯೊಂದನ್ನು ಮಾಡಿದೆ. ಇದರ ಪ್ರಕಾರ ಇನ್ನು RTGS ಮತ್ತು NEFT ಮಾಡಲು ಬ್ಯಾಂಕನ್ನು ಅವಲಂಬಿಸುವ ಅಗತ್ಯವಿಲ್ಲ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಆರ್‌ಟಿಜಿಎಸ್ ಮತ್ತು ಎನ್‌ಇಎಫ್‌ಟಿ ವ್ಯಾಪ್ತಿಯನ್ನು ವಿಸ್ತರಿಸಿದೆ. ನಾನ್ ಬ್ಯಾಂಕ್ ಪೇಮೆಂಟ್ ಸಿಸ್ಟಮ್ ಆಪರೇಟರ್ಸ್  ಕೂಡಾ ಇನ್ನು ಮುಂದೆ ಈ ಸೌಲಭ್ಯವನ್ನು ಒದಗಿಸಲಿದ್ದಾರೆ. ವಿತ್ತೀಯ ನೀತಿಯನ್ನು ಘೋಷಿಸುವ ವೇಳೆ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ (Sahktikant Das) ಈ ವಿಚಾರವನ್ನು  ಪ್ರಕಟಿಸಿದ್ದಾರೆ.   


COMMERCIAL BREAK
SCROLL TO CONTINUE READING

ಆರ್‌ಟಿಜಿಎಸ್, ಎನ್‌ಇಎಫ್‌ಟಿಯ ವಿಸ್ತರಿತ ವ್ಯಾಪ್ತಿ : 
RTGS  ಮತ್ತು  NEFT ಕೇಂದ್ರೀಕೃತ ಪಾವತಿ ವ್ಯವಸ್ಥೆಯಾಗಿದ್ದು, ಇದನ್ನು ರಿಸರ್ವ್ ಬ್ಯಾಂಕ್ (RBI) ನಿರ್ವಹಿಸುತ್ತದೆ. ನಾನ್ ಬ್ಯಾಂಕ್ ಪೇಮೆಂಟ್ ಸಿಸ್ಟಮ್ ಆಪರೇಟರ್ಸ್ ಗಳಾದ  Prepaid Payment Instrument ನೀಡುವವರು, ಕಾರ್ಡ್ ನೆಟ್‌ವರ್ಕ್‌ಗಳು, ವೈಟ್ ಲೇಬಲ್ ಎಟಿಎಂ ಆಪರೇಟರ್‌ಗಳು ಇನ್ನು  ನೇರವಾಗಿ CPS ಸದಸ್ಯತ್ವವನ್ನು ತೆಗೆದುಕೊಳ್ಳಬಹುದು.


ಇದನ್ನೂ ಓದಿ :  RBI Monetary Policy : ಇನ್ನು ಅಗ್ಗವಾಗುವುದಿಲ್ಲ ಹೋಂ ಲೋನ್, ಬಡ್ಡಿದರದಲ್ಲಿ ಬದಲಾವಣೆ ಇಲ್ಲ


Digital payment ಕಂಪನಿಗಳಿಂದಲೂ ಸಾಧ್ಯವಾಗುತ್ತದೆ ಆರ್‌ಟಿಜಿಎಸ್, ಎನ್‌ಇಎಫ್‌ಟಿ : 
ಈ ವ್ಯವಸ್ಥೆಯಿಂದಾಗಿ ಹಣಕಾಸು ವ್ಯವಸ್ಥೆಯಲ್ಲಿನ ಸೆಟಲ್ಮೆಂಟ್ ರಿಸ್ಕ್ ಅನ್ನು ಕಡಿಮೆ ಮಾಡಲು ಸಹಾಯವಾಗಲಿದೆ ಎಂದು ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.  ಡಿಜಿಟಲ್ ಹಣಕಾಸು ಸೇವೆಗಳ ವ್ಯಾಪ್ತಿಯನ್ನು ಎಲ್ಲಾ ಬಳಕೆದಾರರಿಗೆ ವಿಸ್ತರಿಸಲಾಗುವುದು ಎಂದು ಆರ್‌ಬಿಐ ಹೇಳಿದೆ. ನಾನ್ ಬ್ಯಾಂಕ್ ಪೇಮೆಂಟ್ ಸಿಸ್ಟಮ್ ಅಂದರೆ MobiKwik, PayU, Ola Pay, Amazon Pay ಇತ್ಯಾದಿ ಸೇರಿದೆ. ನಿಮ್ಮ ಬಳಿ ಮೊಬೈಲ್ ವ್ಯಾಲೆಟ್ ಇದ್ದರೆ, ಇನ್ನು ಮುಂದೆ RTGS ಮತ್ತು  NEFT ಮೂಲಕ ಯಾರಿಗೆ ಬೇಕಾದರೂ ಹಣವನ್ನು ಕಳುಹಿಸಬಹುದು.


ಒಂದು ವ್ಯಾಲೆಟ್ ನಿಂದ ಇನ್ನೊಂದು  ವ್ಯಾಲೆಟ್ ಗೆ 2 ಲಕ್ಷ ರೂಪಾಯಿಗಳನ್ನು ಕಳುಹಿಸಬಹುದು: 
ರಿಸರ್ವ್ ಬ್ಯಾಂಕ್ ಮತ್ತೊಂದು ದೊಡ್ಡ ಮಟ್ಟದ ಘೋಷಣೆಯನ್ನು ಮಾಡಿದೆ. ಈಗ Prepaid Payment Instruments ಮೂಲಕ 2 ಲಕ್ಷ ರೂಪಾಯಿಗಳವರೆಗೆ ಹಣವನ್ನು ಕಳುಹಿಸಬಹುದು. ಅಂದರೆ, ನೀವು ಓಲಾ ಪೇಯನ್ನು ಬಳಸುತ್ತಿದ್ದೀರಿ ಅಂದುಕೊಳ್ಳಿ. ನಿಮ್ಮ ಸ್ನೇಹಿತರು ಯಾವುದೋ ಬೇರೆ ವ್ಯಾಲೆಟ್ ಬಳಸುತ್ತಿದ್ದರೆ,  ಅವರ ವ್ಯಾಲೆಟ್ ಗೆ 2 ಲಕ್ಷ ರೂ.ವ್ರೆಗಇನ್ ಮೊತ್ತವನ್ನು ಕಳುಹಿಸಬಹುದಾಗಿದೆ. ಇದಕ್ಕಿಂತ ಈ ಮಿತಿಯನ್ನು 1 ಲಕ್ಷ ರೂಪಾಯಿಗಳಿಗೆ ನಿಗದಿ ಮಾಡಲಾಗಿತ್ತು. ಆದರೆ ಇದಕ್ಕಾಗಿ ಪೂರ್ಣ ಕೆವೈಸಿ (KYC) ಕಡ್ಡಾಯ. 


ಇದನ್ನೂ ಓದಿ :  Debit-Credit ಕಾರ್ಡ್ ಇಲ್ಲದೆ ಎಟಿಎಂನಿಂದ ಹಣ ಹಿಂಪಡೆಯುವುದು ಹೇಗೆ?


ಮೊಬೈಲ್ ವ್ಯಾಲೆಟ್ ಆಗಲಿದೆ ಎಟಿಎಂ (ATM) : 
ಇದೀಗ ಬ್ಯಾಂಕುಗಳು (bank) ನೀಡುವ ಸಂಪೂರ್ಣ ಕೆವೈಸಿ ಪಿಪಿಐಯಿಂದ ನಗದನ್ನು ಕೂಡಾ ತೆಗೆಯಬಹುದು. ಈಗ ರಿಸರ್ವ್ ಬ್ಯಾಂಕ್ ಎಲ್ಲಾ PPIಗಳಿಗೆ ನಗದು ತೆಗೆಯಲು ಅವಕಾಶ ನೀಡಿದೆ. ಅಂದರೆ, ನಿಮ್ಮ ಮೊಬೈಲ್ ವ್ಯಾಲೆಟ್ (Mobile wallet) ಈಗ ಎಟಿಎಂನಂತೆ ಕಾರ್ಯನಿರ್ವಹಿಸುತ್ತದೆ.  ಏಕೆಂದರೆ ಇದರ ಮೂಲಕ ಈಗ ಹಣ ಪಡೆಯಬಹುದು. ಇಲ್ಲಿಯವರೆಗೆ, ಈ ಮೂಲಕ ಹಣವನ್ನು ಪಾವತಿಸಬಹುದಾಗಿತ್ತು ಅಥವಾ ಬೇರೆಯವರಿಗೆ ವರ್ಗಾಯಿಸಬಹುದಾಗಿತ್ತು. 

 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.