Auto-Debit Payments: ದೇಶದ ಕೋಟ್ಯಾಂತರ ಗ್ರಾಹಕರಿಗೆ ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದ RBI

Auto-Debit Payments: ಭಾರತೀಯ ರಿಸರ್ವ್ ಬ್ಯಾಂಕ್ ಮೊಬೈಲ್ ಬಿಲ್, ವಿದ್ಯುತ್ ಬಿಲ್ ಅಥವಾ ಇತರೆ ಯುಟಿಲಿಟಿ ಬಿಲ್ ಗಳನ್ನು ಆಟೋ ಡೆಬಿಟ್ ಮೂಲಕ ಪಾವತಿಸುವ ಕೋಟ್ಯಾಂತರ ಗ್ರಾಹಕರಿಗೆ ಭಾರಿ ನೆಮ್ಮದಿಯ ಸುದ್ದಿಯೊಂದನ್ನು ಪ್ರಕಟಿಸಿದೆ. 

Written by - Nitin Tabib | Last Updated : Mar 31, 2021, 05:55 PM IST
  • Additional Factor Authentication ಜಾರಿಯ ಡೆಡ್ ಲೈನ್ ನಲ್ಲಿ ಮತ್ತೊಮ್ಮೆ ವಿಸ್ತರಣೆ.
  • ಈ ನಿಯಮ ಜಾರಿಗೆ ಬ್ಯಾಂಕ್ ಗಳ ಸಿದ್ಧತೆಯಲ್ಲಾದ ವಿಳಂಬವೆ ಇದಕ್ಕೆ ಕಾರಣ.
  • ಕೋಟ್ಯಾಂತರ ಗ್ರಾಹಕರಿಗಾಗುವ ತೊಂದರೆಯನ್ನು ಪರಿಗಣಿಸಿ RBI ಈ ನಿರ್ಧಾರ.
Auto-Debit Payments: ದೇಶದ ಕೋಟ್ಯಾಂತರ ಗ್ರಾಹಕರಿಗೆ ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದ RBI title=
Auto-Debit Payments (File Photo)

ನವದೆಹಲಿ: Auto-Debit Payments - ಭಾರತೀಯ ರಿಸರ್ವ್ ಬ್ಯಾಂಕ್ ಮೊಬೈಲ್ ಬಿಲ್, ವಿದ್ಯುತ್ ಬಿಲ್ ಅಥವಾ ಇತರೆ ಯುಟಿಲಿಟಿ ಬಿಲ್ ಗಳನ್ನು ಆಟೋ ಡೆಬಿಟ್ ಮೂಲಕ ಪಾವತಿಸುವ ಕೋಟ್ಯಾಂತರ ಗ್ರಾಹಕರಿಗೆ ಭಾರಿ ನೆಮ್ಮದಿಯ ಸುದ್ದಿಯೊಂದನ್ನು ಪ್ರಕಟಿಸಿದೆ. ಹೌದು, RBI, Additional Factor Authentication (AFA) ಗಾಗಿ ಮಾಡಲಾಗಿರುವ ನೂತನ ಮಾರ್ಗಸೂಚಿಗಳ ಜಾರಿಯ ಗಡುವನ್ನು ವಿಸ್ತರಣೆ ಮಾಡಿದೆ.

ಏಪ್ರಿಲ್ 1 ರಿಂದ ಆಟೋ ಡೆಬಿಟ್ ಗಳು ನಿಂತು ಹೋಗುತ್ತಿದ್ದವು
ದೇಶದ ಡಿಜಿಟಲ್ ಪೇಮೆಂಟ್ ವ್ಯವಸ್ಥೆಯನ್ನು ಮತ್ತಷ್ಟು ಭದ್ರಪಡಿಸಲು ಭಾರತೀಯ ರಿಸರ್ವ ಬ್ಯಾಂಕ್ Additional Factor Authentication (AFA)ಜಾರಿಗೊಳಿಸಲು ಆದೇಶ ನೀಡಿತ್ತು. ರೆಕರಿಂಗ್ ಆನ್ಲೈನ್ ಪೇಮೆಂಟ್ ಗಳಲ್ಲಿ ಗ್ರಾಹಕರ ಹಿತ ಹಾಗೂ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮತ್ತು ಅವರನ್ನು ಸೈಬರ್ ವಂಚನೆಗಳಿಂದ ಪಾರು ಮಾಡುವ ಉದ್ದೇಶದಿಂದ AFA ಅನ್ನು ಬಳಕೆ ಮಾಡಿ ಫ್ರೇಮ್ ವರ್ಕ್ ವೊಂದನ್ನು ಸಿದ್ಧಪಡಿಸಲು ನಿರ್ದೇಶನಗಳನ್ನೂ ನೀಡಲಾಗಿತ್ತು. IBA ವಿನಂತಿಯನ್ನು ಪರಿಗಣಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್ ಈ ಚೌಕಟ್ಟನ್ನು ಜಾರಿಗೊಳಿಸುವ ಗಡುವನ್ನು ಮಾರ್ಚ್ 31, 2021 ರವರೆಗೆ ವಿಸ್ತರಿಸಿತ್ತು. ಇದರಿಂದ ಈ ಅವಧಿಯಲ್ಲಿ ಬ್ಯಾಂಕ್ ಗಳಿಗೆ ಈ ಫ್ರೇಮ್ ವರ್ಕ್ ಗೆ ತಮ್ಮ ಸಿದ್ಧತೆಗಳನ್ನು ಪೂರ್ಣಗೊಳಿಸಲು  ಅವಕಾಶ ಸಿಕ್ಕಿತ್ತು.

ಸೆಪ್ಟೆಂಬರ್ 30  ರವರೆಗೆ ಗಡುವು ವಿಸ್ತರಣೆ
ಈ ಕುರಿತು ಎಲ್ಲಾ ಬ್ಯಾಂಕ್ ಗಳಿಗೆ ಡಿಸೆಂಬರ್ 2020ರಲ್ಲಿ ಪತ್ರ ಬರೆದಿದ್ದ ಭಾರತೀಯ ರಿಸರ್ವ್ ಬ್ಯಾಂಕ್, ಮಾರ್ಚ್ 31, 2021ರವರೆಗೆ ಈ ಫ್ರೇಮ್ ವರ್ಕ್ ಅನ್ನು ಜಾರಿಗೊಳಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಲು ಸೂಚಿಸಿತ್ತು. ಈ ವೇಳೆ ಪದೇ ಪದೇ ಅವಕಾಶ ನೀಡಲಾಗಿದ್ದರೂ ಕೂಡ ಈ ಫ್ರೇಮ್ ವರ್ಕ್ ಅನ್ನು ಜಾರಿಗೊಲಿಸಲಾಗಿಲ್ಲ ಎಂದು ರಿಸರ್ವ್ ಬ್ಯಾಂಕ್ ಅಸಮಾಧಾನ ವ್ಯಕ್ತಪಡಿಸಿತ್ತು. ಆದರೆ, ಫ್ರೇಮ್ ವರ್ಕ್ ಜಾರಿಗೊಳಿಸಲು ಬ್ಯಾಂಕ್ ಗಳವತಿಯಿಂದ ಆಗುತ್ತಿರುವ ಸಿದ್ಧತೆಗಳ ವಿಳಂಬದ ಕಾರಣ ಗ್ರಾಕಕರಿಗೆ ತೊಂದರೆಯಾಗಬಾರದು ಎಂಬುದನ್ನು ಮನಗಂಡ RBI ಇದೀಗ ಈ ಡೆಡ್ ಲೈನ್ ಅನ್ನು ಸೆಪ್ಟೆಂಬರ್ 30, 2021 ರವರೆಗೆ ವಿಸ್ತರಿಸಿದೆ. ಆದರೆ, ಇನ್ನೊಂದೆಡೆ ಇದರ ಬಳಿಕ ತಪ್ಪುಗಳು ನಡೆದಿದ್ದೆ ಆದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕೇಂದ್ರೀಯ ಬ್ಯಾಂಕ್ ಸ್ಪಷ್ಟಪಡಿಸಿದೆ.

ಒಂದು ವೇಳೆ RBI ಈ ಮಾರ್ಗಸೂಚಿಗಳು ಏಪ್ರಿಲ್ 1ಕ್ಕೆ ಜಾರಿಗೆ ಬಂದಿದ್ದರೆ, ದೇಶದ ಕೋಟ್ಯಾಂತರ ಗ್ರಾಹಕರಿಗೆ ತೊಂದರೆ ಎದುರಾಗುತ್ತಿತ್ತು. ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಆಟೋ ಡೆಬಿಟ್ ಪೇಮೆಂಟ್ ಮಾಡುವವರ ಪೇಮೆಂಟ್ ಏಪ್ರಿಲ್ 1 ರಿಂದ ನಿಂತುಹೋಗುತ್ತಿತ್ತು. ಆದರೆ, ಇದೀಗ RBIನ ಈ ಕ್ರಮದಿಂದ ಗ್ರಾಹಕರಿಗೆ ಭಾರಿ ನೆಮ್ಮದಿ ದೊರೆತಂತಾಗಿದೆ.

RBI ಮಾರ್ಗಸೂಚಿಗಳನ್ನು ಬ್ಯಾಂಕ್ ಗಳು ಪಾಲಿಸಿಲ್ಲ
ಈ ಕುರಿತು ಎಚ್ಚರಿಕೆ ನೀಡಿದ್ದ ಇಂಟರ್ನೆಟ್ and ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ (IAMAI), ಆನ್ಲೈನ್ ಮಂಜೂರಾತಿ (ಇ-ಮ್ಯಾಂಡೇಟ್) ನೀಡಿರುವ ಲಕ್ಷಾಂತರ ಗ್ರಾಹಕರ ಪೇಮೆಂಟ್ ಏಪ್ರಿಲ್ 1 ರಿಂದ ಫೇಲ್ ಆಗುವ ಸಾಧ್ಯತೆ ಇದೆ ಎಂದು ಹೇಳಿತ್ತು. ಏಕೆಂದರೆ ಹಲವು ಬ್ಯಾಂಕ್ ಗಳು e-MANDATE ಗಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾರ್ಗಸೂಚಿಗಳ ಪ್ರಕಾರ ರಿಜಿಸ್ಟ್ರೇಷನ್, ಟ್ರಾಕಿಂಗ್, ಮಾಡಿಫಿಕೇಶನ್ ಹಾಗೂ ವಿಥ್ದ್ರಾವಲ್ ಗಾಗಿ ಕ್ರಮಕೈಗೊಂಡಿಲ್ಲ ಎಂದು ಅದು ಹೇಳಿತ್ತು. ಇದೇ ವೇಳೆ ಏಪ್ರಿಲ್ ನಲ್ಲಿ ಸುಮಾರು 2000 ಸಾವಿರ ಕೋಟಿ ರೂ.ಗಳವರೆಗಿನ ಪೇಮೆಂಟ್ ಗಳು ಪ್ರಭಾವಿತಗೊಳ್ಳಲಿವೆ ಎಂಬ ಶಂಕೆ IAMAI ವ್ಯಕ್ತಪಡಿಸಿತ್ತು.  ಇದರಲ್ಲಿ ಕಾರ್ಡ್, ಯುಟಿಲಿಟಿ ಬಿಲ್ಲ್ಸ್, OTT ಹಾಗೂ ಮಿಡಿಯಾ ಸಬ್ಸ್ಕ್ರಿಪ್ಶನ್ ಗಳು ಶಾಮೀಲಾಗಿವೆ.

ಇದನ್ನೂ ಓದಿ-'ನೈಟ್ ಟೈಮ್ ATMನಿಂದ ಹಣ ಡ್ರಾ' ಮಾಡುವವರೇ ನಿಮಗೆ ತಿಳಿದಿರಲಿ ಈ ನಿಯಮ!

RBI ನೂತನ ಗೈಡ್ ಲೈನ್ಸ್ ನಲ್ಲೇನಿದೆ?
RBI ಹೊಸ ನಿಯಮಗಳ ಪ್ರಕಾರ ಬ್ಯಾಂಕ್ ಗಳು ಪೇಮೆಂಟ್ ಅವಧಿಯ 5 ದಿನಗಳು ಮುಂಚಿತವಾಗಿ ಈ ಕುರಿತು ನೋಟಿಫಿಕೇಶನ್ ಕಳುಹಿಸಬೇಕು. ಗ್ರಾಹಕರು ಅದಕ್ಕೆ ಅನುಮತಿ ನೀಡಿದ ಬಳಿಕ ಮಾತ್ರವೇ ಪೇಮೆಂಟ್ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಒಂದು ವೇಳೆ ರಿಕರಿಂಗ್ ಪೇಮೆಂಟ್ ರೂ.5000ಕ್ಕಿಂತ ಹೆಚ್ಚಾಗಿದ್ದರೆ, ಬ್ಯಾಂಕ್ ಗಳು ಗ್ರಾಹಕರಿಗೆ ಒಂದು OTP ಕೂಡ ಕಳುಹಿಸಬೇಕು. ಗ್ರಾಹಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು RBI ಈ ಕ್ರಮಕೈಗೊಂಡಿತ್ತು.

ಇದನ್ನೂ ಓದಿ-ಇನ್ನು ಚೆಕ್ ಕ್ಲಿಯರೆನ್ಸ್ ಗೆ ಕಾಯಬೇಕಿಲ್ಲ : ಫಟಾಫಟ್ ಆಗುತ್ತೆ ಬ್ಯಾಂಕ್ ಕೆಲಸ

ಇದಕ್ಕೂ ಮೊದಲು ಭಾರತೀಯ ರಿಸರ್ವ್ ಬ್ಯಾಂಕ್ ಎಲ್ಲ ಬ್ಯಾಂಕ್ ಗಳು, ಪೇಮೆಂಟ್ ಗೇಟ್ ವೆಗಳು ಹಾಗೂ ಇತರೆ ಸೇವಾ ಪೂರೈಕೆದಾರರಿಗೆ ಗ್ರಾಹಕರ ಕಾರ್ಡ್ ಮಾಹಿತಿಯನ್ನು ಶಾಶ್ವತವಾಗಿ ಸಂಗ್ರಹಿಸಿಕೊಳ್ಳದಿರಲು ಸೂಚನೆ ನೀಡಿತ್ತು. ಇದರಿಂದ ರಿಕರಿಂಗ್ ಪೇಮೆಂಟ್ ಇನ್ನಷ್ಟು ಜಟಿಲವಾಗಿದೆ. ಆದರೆ, Juspay ಹಾಗೂ ನಿಯೋ ಬ್ಯಾಂಕಿಂಗ್ ಸ್ಟಾರ್ಟ್ ಅಪ್ ಆಗಿರುವ Chqbook ಗಳ ಸರ್ವರ್ ನಲ್ಲಾದ ದತ್ತಾಂಶ ಸೋರಿಕೆಯ ಘಟನೆಯ ಬಳಿಕ RBI ಈ ಕ್ರಮ ಕೈಗೊಂಡಿತ್ತು ಎಂಬುದು ಇಲ್ಲಿ ಗಮನಾರ್ಹ. 

ಇದನ್ನೂ ಓದಿ-ಇನ್ಮುಂದೆ Android ಫೋನೇ ನಿಮ್ಮ POS ! SBI Payments-NPCIನಿಂದ ಹೊಸ ಸೇವೆ ಆರಂಭ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News